ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಶೇ.83.13 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ.

ಶಿವಮೊಗ್ಗ (ಏ.22) : ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಶೇ.83.13 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ.

ಜಿಲ್ಲೆವಾರು ಪಟ್ಟಿಯಲ್ಲಿ ಶಿವಮೊಗ್ಗ ಕಳೆದ ಬಾರಿಯ ಸ್ಥಾನವನ್ನೇ ಕಾಯ್ದುಕೊಂಡಿದ್ದರೂ, ಶೇಖಡವಾರು ಫಲಿತಾಂಶದಲ್ಲಿ ಜಿಗಿತ ಕಂಡಿದೆ. ಕಳೆದ ಬಾರಿ ಶೇ.70.14 ಫಲಿತಾಂಶ ಪಡೆದಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಶೇ 83.13 ಫಲಿತಾಂಶ ಬಂದಿದ್ದು, ಶೇ.13ರಷ್ಟುಹೆಚ್ಚು ಫಲಿತಾಂಶ ಪಡೆದಿದೆ.

ಚುನಾವಣೆ ಎಫೆಕ್ಟ್: ಪಿಯುಸಿ-2 ಮೌಲ್ಯಮಾಪನ ತುಸು ವಿಳಂಬ?

ರೈತನ ಮಗಳು ರಾಜ್ಯದಲ್ಲೇ 2ನೇ ರಾರ‍ಯಂಕ್‌:

ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್‌ ಪಿಯು ಕಾಲೇಜಿ(Vikas PUC Composite PU College, Shimoga)ನ ವಾಣಿಜ್ಯ ವಿಭಾಗದ ಡಿ.ಎನ್‌.ಅನ್ವಿತಾ(DN Anvita) ಅವರು 600ಕ್ಕೆ 596 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೇ ರಾಂಕ್‌ ಪಡೆದಿದ್ದಾರೆ. ರಾಜ್ಯದಲ್ಲಿ ಒಂಬತ್ತು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸಿದ್ದಾರೆ. ಅನ್ವಿತ ಶಿವಮೊಗ್ಗ ಜಿಲ್ಲೆಗೆ ಫಸ್ಟ್‌ ರಾರ‍ಯಂಕ್‌ ಪಡೆದಿದ್ದಾರೆ. ಅನ್ವಿತಾ ಅವರು ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ಕೃಷಿಕ ನಾಗರಾಜ, ಅನುಸೂಯ ದಂಪತಿಗಳ ಪುತ್ರಿ. ಮಗಳು ಈ ಸಾಧನೆ ಕಂಡು ಪೋಷಕರು ಸಂಭ್ರಮಗೊಂಡಿದ್ದಾರೆ.

ಶಿವಮೊಗ್ಗದ ಕುವೆಂಪು ನಗರದ ಎಸ್‌ವಿಇಟಿ ಸ್ವತಂತ್ರ ಪಿಯು ಕಾಲೇಜಿ(SVET is an independent PU college Shivamogga)ನ ವಿದ್ಯಾರ್ಥಿನಿ ನೇಹಶ್ರೀ (Nehashrre)ಅವರು 600 ಅಂಕಗಳಿಗೆ 595 ಅಂಕ ಗಳಿಸಿದ್ದಾರೆ. ರಾಜ್ಯಕ್ಕೆ ಮೂರನೇ ರಾರ‍ಯಂಕ್‌ ಹಾಗೂ ಜಿಲ್ಲೆಗೆ ಎರಡನೇ ರಾರ‍ಯಂಕ್‌ ಪಡೆದಿದ್ದಾರೆ. ಒಟ್ಟು ರಾಜ್ಯದಲ್ಲಿ 13 ವಿದ್ಯಾರ್ಥಿಗಳು ಈ 595 ಅಂಕ ಗಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ್‌ವಿಇಟಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ಸಿಬ್ಬಂದಿ ನೇಹಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದರು. ನೇಹಶ್ರೀ ಅವರ ತಂದೆ ಜಯಂತ್‌ಕುಮಾರ್‌ ಅವರು ಬಿ.ಆರ್‌.ಪಿಯ ರಾಷ್ಟಿ್ರಯ ಪಿಯು ಕಾಲೇಜಿನ ಎಸ್‌ಡಿಎ ಆಗಿದ್ದಾರೆ. ತಾಯಿ ಎಸ್‌.ಬಿ.ಚಂದನಾ ಗೃಹಿಣಿ. ನನ್ನ ಮಗಳು ನಿತ್ಯ ಓದುತ್ತಿದ್ದಳು. ಅವರ ಶಿಕ್ಷಕರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ. ಮುಂದೆ ಸಿಎ ಓದಬೇಕು ಅಂದುಕೊಂಡಿದ್ದಾಳೆ ಎಂದು ನೇಹಾಶ್ರಿ ತಂದೆ ಜಯಂತ್‌ಕುಮಾರ್‌ ಪ್ರತಿಕ್ರಿಯೆ ನೀಡಿದರು.

ಇನ್ನು ನಗರದ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ.ಎಸ್‌.ಸ್ಫೂರ್ತಿ ರಾಜ್ಯಕ್ಕೆ 7ನೇ ರಾರ‍ಯಂಕ್‌ ಪಡೆದಿದ್ದಾರೆ. ಅವರು ಹೊಳೆಹಟ್ಟಿಯ ಆರ್‌.ಸುರೇಶ್‌, ಕೆ.ಸುಜಾತ ದಂಪ​ತಿ ಪುತ್ರಿ.

ಯುಪಿಎಸ್‌ಸಿ ಪರೀಕ್ಷೆಯ ಯೋಚನೆ

ನನ್ನೂರು ತೀರ್ಥಹಳ್ಳಿ, ನಾನು ಶಿವಮೊಗ್ಗದಲ್ಲಿ ಓದುತ್ತಿದ್ದರಿಂದ ಊರಿನಿಂದ ಓಡಾಡುವುದು ಕಷ್ಟವಾಗಿತ್ತು. ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲೇ ಉಳಿದುಕೊಂಡಿದ್ದೆ. ಹೀಗಾಗಿ ಓದಲು ತುಂಬಾ ಅನುಕೂಲವಾಯಿತು. ನನ್ನ ಓದಿನ ಬಗ್ಗೆ ಪೋಷಕರಿಗೆ ತುಂಬಾ ಕಾಳಜಿ ಇತ್ತು. ಕಾಲೇಜಿನ ಉಪನ್ಯಾಸಕರು ಬೆಂಬಲವಾಗಿದ್ದರು. ಯಾವುದೇ ಸಂದೇಹಗಳಿದ್ದರೂ ಕೇಳಿದಾಗಲೆ ಅದನ್ನು ಬಗೆಹರಿಸುತ್ತಿದ್ದರು. ಕಾಲೇಜಿನಲ್ಲಿ ಮಾಡಿದ ಪಾಠವನ್ನು ಅಂದೇ ಓದಿಕೊಳ್ಳುತ್ತಿದ್ದೆ. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ ಎಂದು ಡಿ.ಎನ್‌.ಅನ್ವಿತಾ ತಿಳಿಸಿದರು.

10 ಕಾಲೇಜಿಗೆ ಪೂರ್ಣ ಫಲಿತಾಂಶ

ಜಿಲ್ಲೆಯಲ್ಲಿರುವ 24 ಪಿಯು ಕಾಲೇಜುಗಳ ಪೈಕಿ ಈ ಬಾರಿ 10 ಕಾಲೇಜಿಗಳಿಗೆ ಶೇ.100ರಷ್ಟುಫಲಿತಾಂಶ ಪಡೆದಿವೆ. ಶಿವಮೊಗ್ಗ ಆದಿಚುಂಚನಗಿರಿ ಕಾಲೇಜು, ಭದ್ರಾವತಿಯ ಆದಿಚುಂಚನಗಿರಿ ಕಾಲೇಜು. ಕೋಣಂದೂರಿನ ಸರ್ಕಾರಿ ಪಿಯು ಕಾಲೇಜು, ಶಿವಮೊಗ್ಗದ ಗಂಗ್ರೋತಿ ಪಿಯು ಕಾಲೇಜು, ಸಾಗರದ ಸ್ವತಂತ್ರ ಪಿಯು ಕಾಲೇಜು, ಸಾಗರದ ಹೊಂಗಿರಣ ಪಿಯು ಕಾಲೇಜು, ಶಿವಮೊಗ್ಗದ ಸೆಂಟ್‌ ಜೋಸೆಫ್‌ ಅಕ್ಷರಧಾಮ ಕಾಲೇಜು, ಶಿವಮೊಗ್ಗದ ಕೇಂಬ್ರಿಜ್‌ ಪಿಯು ಕಾಲೇಜು, ಗಾಜನೂರಿನ ಮೊರಾರ್ಜಿ ವಸತಿ ಪಿಯು ಕಾಲೇಜು, ಶಿಕಾರಿಪುರ ತಾಲೂಕಿನ ಹೊಸೂರು ಮೊರಾರ್ಜಿ ಪಿಯು ಕಾಲೇಜುಗಳಿಗೆ ಪೂರ್ಣ ಫಲಿತಾಂಶ ಲಭಿಸಿದೆ.

ಮುಖ್ಯಾಂಶ​ಗ​ಳು

- 600ಕ್ಕೆ 596 ಅಂಕ ಗಳಿ​ಸಿದ ಶಿವಮೊಗ್ಗ ನಗ​ರದ ವಿಕಾಸ ಪಿಯುಸಿ (ಸಂಯುಕ್ತ) ಕಾಲೇಜಿನ ವಾಣಿಜ್ಯ ವಿಭಾಗದ ಡಿ.ಎನ್‌.ಅನ್ವಿತಾ

- ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದ ಕೃಷಿಕ ನಾಗರಾಜ, ಅನುಸೂಯ ದಂಪತಿ ಪುತ್ರಿಯಾಗಿ​ರು​ವ ​ಡಿ.​ಎ​ನ್‌.ಅನ್ವಿತಾ

- ಬಿಆರ್‌ಪಿಯ ರಾಷ್ಟಿ್ರಯ ಪಿಯು ಕಾಲೇಜಿನ ಎಸ್‌ಡಿಎ ಜಯಂತ್‌ಕುಮಾರ್‌, ಎಸ್‌.ಬಿ.ಚಂದನಾ ದಂಪತಿ ಪುತ್ರಿಯಾಗಿರು​ವ ನೇಹಶ್ರೀ

- 595 ಅಂಕ ಗಳಿಸಿ ರಾಜ್ಯಕ್ಕೇ 3ನೇ ರಾರ‍ಯಂಕ್‌ ಪಡೆದ ಶಿವಮೊಗ್ಗ ಕುವೆಂಪು ನಗರದ ಎಸ್‌ವಿಇಟಿ ಸ್ವತಂತ್ರ ಪಿಯು ಕಾಲೇಜಿನ ನೇಹಶ್ರೀ

- ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ.ಎಸ್‌.ಸ್ಫೂರ್ತಿ ರಾಜ್ಯಕ್ಕೆ 7ನೇ ರಾರ‍ಯಂಕ್‌

ದ್ವಿತೀಯ ಪಿಯುಸಿ ರಿಸಲ್ಟ್‌: ಫೇಲಾಯ್ತ? ಅಂತ ಚಿಂತೆ ಬೇಡ. ಮೇಗೆ ಪೂರಕ ಪರೀಕ್ಷೆ ಬರೆಯಿರಿ

ಹೈಲೈಟ್ಸ್‌

- 124 ಜಿಲ್ಲೆಯಲ್ಲಿರುವ ಪಿಯು ಕಾಲೇಜುಗಳ ಸಂಖ್ಯೆ

- 16151 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ

- 13,426 ವಿದ್ಯಾರ್ಥಿಗಳು ಉತ್ತೀರ್ಣರಾದ ವಿದ್ಯಾರ್ಥಿಗಳು

- 2725 ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿದ್ಯಾರ್ಥಿಗಳು