Chikkamagaluru ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

  • ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ
  • ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದೆ ಶಿಕ್ಷಣ ಸಚಿವ
  • ಕಾಫಿ ನಾಡಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ
     
Karnataka 2nd PUC  examination education-minister-bc-Nagesh visited examination center in chikkamagaluru gow

ವರದಿ: ಆಲ್ದೂರು ಕಿರಣ್ ಸುವರ್ಣ‌ ಏಷ್ಯಾನೆಟ್

ಚಿಕ್ಕಮಗಳೂರು (ಏ.22): ರಾಜ್ಯದಾದ್ಯಂತ ಹಿಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PUC examination ) ಆರಂಭವಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು (Student) ಕೂಡ ಹುಮ್ಮಸ್ಸಿನಿಂದ ಆಗಮಿಸಿದ್ದರು. ಹೈಕೋರ್ಟ್ ನ ಸೂಚನೆಯಂತೆ ಹಿಜಾಬ್ (Hijab) ತೆಗೆದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಇನ್ನು ಕಾಫಿನಾಡಿನ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ನೀಡಿದ ಶಿಕ್ಷಣ ಸಚಿವ: ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯ  ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿದ್ರು. ನಗರದ ಜೂನಿಯರ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೊಠಡಿಗಳಿಗೆ ತೆರಳಿದ ಸಚಿವರು  ಪರಿಶೀಲನೆ ನಡೆಸಿ ಉಪನ್ಯಾಸಕರೊಂದಿಗೆ ಚರ್ಚೆ ನಡೆಸಿದರು.

 

ಚಿಕ್ಕಮಗಳೂರು ಜಿಲ್ಲೆಯಲ್ಲಿ 9671ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹದಿನೆಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು  4597 ಬಾಲಕರು, 5074 ಬಾಲಕಿಯರು ಪರೀಕ್ಷೆ ಎದುರಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಚಿವರು ಕೆಲ ಕಾಲ ಮಾತುಕತೆ ನಡೆಸಿದರು. ಧೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ, ತದನಂತರ ಯೋಚನೆ ಮಾಡಿ ಪ್ರಶ್ನೆಗಳಿಗೆ ಉತ್ತರ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಿಕ್ಷಣ ಸಚಿವರನ್ನು ನೋಡಿದ ವಿದ್ಯಾರ್ಥಿಗಳು ಖುಷಿಯಿಂದ ಕೈಕುಲುಕಿ ಸಂತಸವನ್ನು ಹೊರಹಾಕಿದರು.

ಇಂದಿನಿಂದ ಪಿಯು ಪರೀಕ್ಷೆ: ಮಕ್ಕಳೇ ಗುಡ್‌ಲಕ್‌: ಮಾಸ್ಕ್ ಕಡ್ಡಾಯವಲ್ಲ

ಉರ್ದು ಶಾಲೆ ಮುಚ್ಚುವ ಚಿಂತನೆಯಿಲ್ಲ, ವೀಲಿನದ ಬಗ್ಗೆ ಚರ್ಚೆ ನಡೆಯುತ್ತಿದೆ: ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು  ಪರೀಕ್ಷೆ ಬರೆಯುಲು ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ.ರಾಜ್ಯದಲ್ಲಿ  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ  ಬಾಲಕರು ಬಾಲಕಿಯರು ಸಮಪಾಲು ಇದ್ದು, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಅಧಿಕಾರಿಗಳ ಮೇಲೆ ವಿಶ್ವಾಸ ವಿದೆ ಪರೀಕ್ಷೆ ಉತ್ತಮವಾಗಿ ನಡೆಯುತ್ತದೆ ಎಂದು ವಿಶ್ವಾಸವನ್ನು ಹೊರಹಾಕಿದರು.ಇನ್ನು ಎಸ್ ಎಸ್ ಎಲ್ ಸಿ ರೀತಿ ಪಿಯುಸಿ ಯಲ್ಲಿ ವಿದ್ಯಾರ್ಥಿಗಳು  ಗೈರುಹಾಜರು ಆಗುವುದಿಲ್ಲ , ಎಸೆಸೆಲ್ಸಿ ಪರೀಕ್ಷೆಗೆ ಕೈ ರಾಜಗಳು ಹಲವು ಕಾರಣಗಳಿದ್ದು, ಅದನ್ನು ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಸರಿ ಪಡಿಸಲಿದೆ.ಕೋವಿಡ್ ಸೇರಿದಂತೆ ಸತತ ಗೈರಾಗುವ ವಿದ್ಯಾರ್ಥಿಗಳು ಪರೀಕ್ಷೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಹಾಜರಾಗಲಿಲ್ಲ, ಆದರೆ ಪಿಯುಸಿ ಪರೀಕ್ಷೆಯಲ್ಲಿ  ಗೈರು ಹಾಜರಾಗುವರ  ಸಂಖ್ಯೆ ಕಡಿಮೆ ಇದೆ ಎಂದರು.

ರಾಜ್ಯದಲ್ಲಿ ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲ ಆದ್ರೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಒಂಟಿ ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂದರು.ಕಲಿಕೆ ಹಾಗೂ ಮಕ್ಕಳ ನಡುವೆ ಪ್ರತಿಸ್ಪರ್ದೆ ಉತ್ತಮ ಶಿಕ್ಷಣ ನೀಡಲು ಒಗ್ಗಡಿಸಲಾಗುವುದು,ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ವಿಲೀನ ಮಾಡ್ತೇವೆ ಎಂದು ತಿಳಿಸಿದರು.ಕನ್ನಡ ಶಾಲೆಯಲ್ಲಿದ್ರು ಉರ್ದು ,ಮರಾಠಿ ತಮಿಳು ಶಾಲೆಯ ಇದ್ರು ವಿಲೀನ ಮಾಡುತ್ತೇವೆ ಇದರ ಉದ್ದೇಶ ಗುಣಮಟ್ಟದ ಶಿಕ್ಷಣ ನೀಡುವುದು ಎಂದರು.

2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ

6 ಲಕ್ಷ ವಿದ್ಯಾರ್ಥಿಗಳು ಮುಖ್ಯ 6 ವಿದ್ಯಾರ್ಥಿಗಳಲ್ಲ: ಹಿಜಾಬ್ ವಿವಾದದಿಂದ 6 ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆಯದೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು ರಾಜ್ಯದ 6 ಲಕ್ಷ ವಿದ್ಯಾರ್ಥಿಗಳ ಮುಖ್ಯ,  6 ವಿದ್ಯಾರ್ಥಿಗಳಲ್ಲ ಎಂದರು. ಪಿಯುಸಿ ಪರೀಕ್ಷಗೆ ಗೈರು ಹಾಜರಿ ಆಗಯವ  ಬಗ್ಗೆ ಶಿಕ್ಷಣ ಇಲಾಖೆ  ಗಂಭೀರವಾಗಿ ತೆಗೆದುಕೊಳ್ಳುತ್ತೆ ಎಂದರು.

ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬನ್ನಿ ಅಂತಾ ಕರೆಯಬಹುದು, ಆದ್ರೆ ಪರೀಕ್ಷಾ ಕೇಂದ್ರಕ್ಕೆ ಎಳೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಕೂರಿಸಲು ಸಾಧ್ಯವಿಲ್ಲ ಎಂದು ಉಡುಪಿಯ 6 ಮಂದಿ  ವಿದ್ಯಾರ್ಥಿನಿಯರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ದೇಶದಲ್ಲಿ ಎಲ್ಲರಿಗೂ ಎಲ್ಲಾತರದ ಸ್ವಾತಂತ್ರ್ಯವಿದೆ ಇದು ಪ್ರಜಾಪ್ರಭುತ್ವವಾಗಿದ್ದು ಯಾರನ್ನು ಬಲವಂತ ಮಾಡಲಾಗುವುದಿಲ್ಲ ಎಂದರು.ಈ ಪರೀಕ್ಷಾ ಕೇಂದ್ರದಲ್ಲಿ ಕೂಡ ಸಾಕಷ್ಟು ವಿದ್ಯಾರ್ಥಿನಿಯರು ಬಂದಿದ್ದಾರೆ ,ಪರೀಕ್ಷೆ ಬರೆಯುತ್ತಿದ್ದಾರೆ. ಆದ್ರೆ ಅ ಆರು ಜನ ವಿದ್ಯಾರ್ಥಿಗಳ ಹಿಂದೆ ಕಾಣದ ಶಕ್ತಿ ಇದೆ , ಆ ಶಕ್ತಿಯಿಂದ ಅವರನ್ನು ಬಿಡಿಸುವುದಕ್ಕೆ ಸಾಕಷ್ಟು ಸಮಯ ಬೇಕೆಂದರು.

Latest Videos
Follow Us:
Download App:
  • android
  • ios