2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ
ಕರ್ನಾಟಕ ಶಿಕ್ಷಣ ಇಲಾಖೆಯು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಶೈಕ್ಷಣಿಕ ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ಈ ವರ್ಷದ ದಸರಾಗೆ 14 ದಿನ ರಜೆ ಘೋಷಿಸಲಾಗಿದೆ.
ಬೆಂಗಳೂರು(ಏ.21): 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ (karnataka education department) ಬಿಡುಗಡೆಗೊಳಿಸಿದೆ. ಕೊರೊನಾ ಸಾಂಕ್ರಾಮಿಕದ ಬಳಿಕ ಮೂರು ವರ್ಷಗಳಿಂದ ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಆದರೆ ಈ ವರ್ಷ ಪೂರ್ಣ ಪ್ರಮಾಣದ ತರಗತಿಗಳು ನಡೆಸಲು ಮುಂದಾಗಿದ್ದು, ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ವಿದ್ಯಾರ್ಥಿಗಳು (Student), ಪೋಷಕರು, ಶಿಕ್ಷಕರು (Techers) ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.
ಈ ಶೈಕ್ಷಣಿಕ (education) ವರ್ಷದಲ್ಲಿ 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ಈ ವರ್ಷದ ದಸರಾಗೆ 14 ದಿನ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಈ ಬಾರಿ ಹಮ್ಮಿಕೊಂಡಿದೆ. ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನ, ಸಾವಿತ್ರ ಬಾಯಿ ಫುಲೆ, ವಿವೇಕಾನಂದರು ಸೇರಿದಂತೆ ಹಲವು ದಿನಾಚರಣೆ ಮತ್ತು ದಾರ್ಶನಿಕರ ಜಯಂತಿ ಆಚರಣೆಗೆ ಆದೇಶಿಸಲಾಗಿದೆ.
Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ
2022-23ನೇ ಸಾಲಿನ ಶಾಲಾ ಕರ್ತವ್ಯದ ಮೊದಲನೇ ಅವಧಿಯು ಮೇ.16, 2022ರಿಂದ ಅಕ್ಟೋಬರ್ 2, 2022ರವರೆಗೆ ಇರಲಿದೆ. ಎರಡನೇ ಅವಧಿಯು ಅಕ್ಟೋಬರ್ 17, 2022ರಿಂದ ಎಪ್ರಿಲ್ 10, 2023ರವರೆಗೆ ಇರಲಿದೆ. ಅಕ್ಟೋಬರ್ 3 ರಿಂದ 16ರವರೆಗೆ ದಸರಾ ರಜೆ ಇರಲಿದ್ದು, ಎಪ್ರಿಲ್ 11, 2023 ರಿಂದ ಮೇ 28, 2023ರವರೆಗೆ ಬೇಸಿಗೆ ರಜೆ ಇರಲಿದೆ.
ಮಿಕ್ಕಂತೆ ವಿವರಗಳು ಈಕೆಳಗಿನಂತಿದೆ
ಮೇ 16 ರಿಂದ 20 ರವರೆಗೆ ಶಾಲಾ ದಾಖಲಾತಿ ಪ್ರಕ್ರಿಯೆ,
ಮೇ 17 ರಿಂದ 31 ಕಲಿಕಾ ಚೇತರಿಕೆ ಕಾರ್ಯಕ್ರಮ,
ಮೇ 28 ಕ್ಕೆ ಪೋಷಕರು, ತಾಯಂದಿರ ಸಭೆ
ಜೂನ್ 1 ಕ್ಕೆ ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
ಅಕ್ಟೋಬರ್ 17 ರಿಂದ 25 – ಅರ್ಧ ವಾರ್ಷಿಕ ಪರೀಕ್ಷೆಗಳು
2023 ಫೆಬ್ರವರಿ 20 ರಿಂದ 25 – ಪೂರ್ಣ ಸಿದ್ದತಾ ಪರೀಕ್ಷೆ
2023 ಮಾರ್ಚ್ 23 ರಿಂದ 31 – ವಾರ್ಷಿಕ ಪರೀಕ್ಷೆ
Kodagu VA Recruitment 2022: ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60 ಸರ್ಕಾರಿ ರಜಾ ದಿನಗಳು ಇದ್ದು, 270 ಶಾಲಾ ಕರ್ತವ್ಯದ ದಿನಗಳಾಗಿವೆ. ಆದರೆ ಒಟ್ಟು ಶಾಲಾ ಕರ್ತವ್ಯದ ದಿನಗಳು 256 ಎಂದು ಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಪಠ್ಯೇತರ ಚಟುವಟಿಕೆಗಳಿಗೆ 10 ದಿನಗಳು, ಪರೀಕ್ಷೆಗಳು ಮತ್ತು ಸಿಸಿಇ ಮೌಲ್ಯಾಂಕನ ವಿಶ್ಲೇಷಣೆಗಾಗಿ 12 ದಿನಗಳು ಮೀಸಲಿಡಲಾಗಿದೆ. ಹೀಗಾಗಿ ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆಗೆ 228 ದಿನಗಳು ಉಳಿಯುತ್ತವೆ. 228 ದಿನದಲ್ಲಿ ಶಿಕ್ಷಕರು ಪಠ್ಯ ಚಟುವಟಿಕೆಯನ್ನು ಮುಗಿಸಬೇಕಾಗುತ್ತದೆ.
ಇನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು (Moral science ) ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು (moral studies) ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಹೇಳಿದ್ದಾರೆ. ಕೋವಿಡ್ (Covid-19) ಸಾಂಕ್ರಾಮಿಕ ಸಮಯದಲ್ಲಿ ಕುಸಿದು ಹೋಗಿದ್ದ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಪೂರ್ವಸಿದ್ಧತಾ ತರಗತಿಗಳು, ಕಲಿಕಾ ಚೆತಾರಿಕೆ ವಿದ್ಯಾರ್ಥಿಗಳಿಗೆ ಹಾಡು ಮತ್ತು ನೃತ್ಯದ ಮೂಲಕ ಕಲಿಸುವತ್ತ ಗಮನ ಹರಿಸಲಾಗುತ್ತಿದ್ದು, ಅದು ಮೇ 16 ರಂದು ಪ್ರಾರಂಭವಾಗಲಿದೆ.