ನನ್ನ ಕತೆ ಪಾಠ ಮಾಡೋದು ಬೇಡ: ಸರ್ಕಾರಕ್ಕೆ ಪತ್ರ ಬರೆದ ದೇವನೂರ ಮಹದೇವ
* ಮೌಡ್ಯಕ್ಕೆ ಒಳಗಾಗದ, ವೈಜ್ಞಾನಿಕ ಚಿಂತನೆಯ ಪಾಠ ಕೊಡಲಿ
* ನಾಗೇಶ್ ಅವರ ಭ್ರಮೆ, ಕಲ್ಪನೆಗಳಿಗೆಲ್ಲ ನಾನು ಉತ್ತರ ಕೊಡಬೇಕಾಗಿಲ್ಲ
* ನಾಗೇಶ್ ತಮ್ಮ ಕೆಲಸ ಬಿಟ್ಟು ನನ್ನ ಮನೆಗೆ ಬರೋದು ಬೇಡ
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಮೇ.26): ಪದ್ಮಶ್ರೀ ಪುರಸ್ಕೃತ ಸಾಹಿತಿ ದೇವನೂರ ಮಹದೇವ ತಮ್ಮ ಕಥಾನಕವನ್ನು ಪಠ್ಯಕ್ರಮದಿಂದ ಕೈಬಿಡುವಂತೆ ಬಹಿರಂಗ ಪತ್ರ ಬರೆದಿದ್ದಾರೆ. ಇದರೊಂದಿಗೆ ಪಠ್ಯ ಪುಸ್ತಕ ಪರಿಷ್ಕೃರಣೆ ವಿವಾದ ಮತ್ತಷ್ಟು ತಾರಕಕ್ಕೆ ಏರಿದೆ. ದೇವನೂರ ಮಹದೇವ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರಸ್ಪರ "ಪ್ರಭಾವ" ಟೀಕೆ ಟಿಪ್ಪಣಿ ಮಾಡಿದ್ದಾರೆ.
"
"ನನ್ನ ಕಥನದ ಭಾಗವನ್ನು ಪಠ್ಯದಲ್ಲಿ ಸೇರಿಸಿದದ್ದರೆ ಒಳ್ಳೆಯದ್ದು. ಸೇರಿಸಿದ್ದರೆ ನನ್ನ ಒಪ್ಪಿಗೆ ಇಲ್ಲ." ಸಾಹಿತಿ ದೇವನೂರ ಮಹದೇವ ಹೀಗೊಂದು ಬಹಿರಂಗ ಪತ್ರ ಬರೆಯುವ ಮೂಲಕ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪುಸ್ತಕ ಪ್ರಿಂಟ್ ಆಗಿದೆ. ಈಗ ಪಠ್ಯ ತೆಗೆಯಲು ಸಾಧ್ಯವಿಲ್ಲ. ದೇವನೂರ ಮಹದೇವ ಯಾವ ಪ್ರಭಾವಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಖುದ್ದಾಗಿ ಭೇಟಿ ಮಾಡಿ ಗೊಂದಲ ಬಗೆಹರಿಸುತ್ತೇನೆ ಎಂದಿದ್ದಾರೆ.
ಪಠ್ಯ ಹೊರ ಬರುವುದಕ್ಕೆ ಮುಂಚೆ ಜನಿವಾರವೋ, ಉಡುದಾರವೋ, ಶಿವದಾರವೋ ಎಂದು ನೋಡುವುದು ತಪ್ಪು: ಸಿ.ಟಿ.ರವಿ
ಇದಕ್ಕೆ ತಿರುಗೇಟು ನೀಡಿರುವ ಮಹದೇವ, ನೀವು ನಾಗಪುರದ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿದ್ದೀರಿ. ಸರ್ಕಾರ, ಅಧಿಕಾರ ಎಲ್ಲ ನಿಮ್ಮ ಬಳಿಯೇ ಇದೆ. ನನ್ನ ಕತೆ ಪಾಠ ಮಾಡೋದು ಬೇಡ ಅಂತ ಆದೇಶ ಮಾಡಿ ಅಂತ ಸಲಹೆ ನೀಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ನಾಡು- ನುಡಿ- ಸಂಸ್ಕೃತಿ ಬಗ್ಗೆ ತಿಳಿವಳಿಕೆ ಇಲ್ಲ ಅನ್ನೋದು ಮಹದೇವ ಅವರ ವಾದ. ಬ್ರಿಟಿಷರ ಕಾಲದ ಪಠ್ಯವನ್ನು ತೆಗೆದಿದ್ದೇವೆ ಅನ್ನೋದು ಶಿಕ್ಷಣ ಸಚಿವರ ಸಮರ್ಥನೆ. ಇಬ್ಬರಲ್ಲಿ ಯಾರು ಸರಿ, ಯಾರು ತಪ್ಪು ಅನ್ನೋದು ಬೇರೆ ವಿಚಾರ. ಇಬ್ಬರ ಜಗಳದಲ್ಲಿ ಶಾಲಾ ಮಕ್ಕಳಿಗೆ ಸಮಸ್ಯೆ ಆಗಬಾರದು ಅಷ್ಟೆ.
ಅವರ ಪಠ್ಯಕ್ಕೆ ಪ್ರತಿಯಾಗಿ ನಾವೂ ವಿಚಾರವನ್ನ ಮಕ್ಕಳಿಗೆ ತಿಳಿಸುತ್ತೇವೆ
ಇನ್ನು ಪಠ್ಯ ಪರಿಷ್ಕರಣೆ ವಿರೋಧದ ಬಗ್ಗೆ ಸವಿವರವಾಗಿ ಮಾತಾನಡಿದ ದೇವನೂರು ಮಹದೇವ 'ಅವರು ಹೆಡೆಗೆವಾರ್ ರನ್ನ ಸ್ವತಂತ್ರ ಹೋರಾಟಗಾರ ಅಂತ ಬರೆಯಬಹುದು. ನಾವು ಹೆಡೆಗೆವಾರ್ ಜೈಲಿಗೆ ಹೋಗಿದ್ದು ಖೈದಿಗಳನ್ನ ಆರ್‌ಎಸ್‌ಎಸ್‌ಗೆ ಸೆರೆಸೋಕೆ ಹೋಗಿದ್ರು ಅನ್ನೊದನ್ನ ಹೇಳ್ತೀವಿ ಎಂದಿದ್ದಾರೆ. ಹೆಡೆಗೆವಾರ್ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಡಿ ಎಂದಿದ್ದರ ಬಗ್ಗೆ ಹೇಳುತ್ತೇವೆ. ನಾನು ವಾಟ್ಸ್‌ಪ್, ಫೇಸ್‌ಬುಕ್ ಸೇರಿ ಸೋಷಿಯಲ್ ಮೀಡಿಯಾ ಜೊತೆ ಇರುತ್ತೇನೆ. ಅವರ ಪುಸ್ತಕ ಪಾಠಕ್ಕೆ ಪರ್ಯಾಯವಾಗಿ ಇವುಗಳ ಮುಲಕ ಮಕ್ಕಳನ್ನು ತಲುಪುತ್ತೇವೆ ಎನ್ನುವ ಮೂಲಕ ಪಠ್ಯ ಪರಿಷ್ಕರಣೆ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಎಲ್.ಬಸವರಾಜ್ ಪಿ.ಲಂಕೇಶ್, ಅಬುಬಕರ್, ಎ.ಎನ್.ಮೂರ್ತಿರಾವ್ ಪಾಠ ತೆಗೆದಿದ್ದಾರೆ. ಅದಕ್ಕೆ ಬದಲು ಸ್ವತಂತ್ರ ಹೋರಾಟದಿಂದ ವಿಮುಖರಾದ ಹೆಡೆಗೆವಾರ್ ಪಾಠ ಸೇರಿಸಿದ್ದಾರೆ.
ಸಮಾಜದಲ್ಲಿ ದ್ವೇಷ ಹುಟ್ಟು ಹಾಕುತ್ತಿರುವ ಸೂಲಿಬೆಲೆ ಪಾಠ ಅಳವಡಿಸಿದ್ದಾರೆ. ಇಂತಹ ಅನಾರೋಗ್ಯರ ಪರಿಸ್ಥಿತಿಯಲ್ಲಿ ನನ್ನ ಪಠ್ಯ ಬೇಡ. ಅದಕ್ಕೆ ಪಠ್ಯವನ್ನು ಹಿಂದಕೆ ಪಡೆಯುತ್ತಿದ್ದೇನೆ. ಪಠ್ಯ ಪುಸ್ತಕ ಪ್ರಿಂಟ್ ಆಗಿದೆ ಅಂದ್ರೆ ಪಾಠ ಮಾಡಬೇಡಿ ಅಂತ ಸರ್ಕಾರ ಹೇಳಲಿ. ನಾನು ಪ್ರಚೋಧನೆಗೆ ಒಳಗಾಗಿದ್ದೀನಿ ಅಂದ್ರೆ ಇವರು ಯಾರ ಪ್ರಚೋದನೆಗೆ ಒಳಗಾಗಿದ್ದಾರಾ ಅಂತ ಕೇಳಬೇಕಾಗುತ್ತೆ ಎಂದು ಶಿಕ್ಷಣ ಸಚಿವ ಬಿಸಿ.ನಾಗೇಶ್‌ಗೆ ಪ್ರಶ್ನೆ ಮಾಡಿದ್ದಾರೆ.
NewsHour ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಣ ಸಚಿವರ ಖಡಕ್ ಉತ್ತರ
ಇದೇ ವಿಚಾರಕ್ಕೆ ಮಾತು ಮುಂದುವರಿಸಿದ ಅವರು ನಾಗೇಶ್ ಅವರ ಭ್ರಮೆ, ಕಲ್ಪನೆಗಳಿಗೆಲ್ಲ ನಾನು ಉತ್ತರ ಕೊಡಬೇಕಾಗಿಲ್ಲ. ನಾಗೇಶ್ ತಮ್ಮ ಕೆಲಸ ಬಿಟ್ಟು ನನ್ನ ಮನೆಗೆ ಬರೋದು ಬೇಡ. ಪಠ್ಯ ಪ್ರಿಂಟ್ ಆಗಿದ್ದರೆ ಆ ಪಾಠ ಮಾಡಬೇಡಿ ಅಂತ ಹೇಳಲಿ. ಅದು ನನಗೆ ಹೆಚ್ಚು ಸಂತೋಷ ಆಗುತ್ತೆ ಎಂದರು.
ಕನ್ನಡ ಭಾಷೆಗೆ ಸತ್ವ ತಂದುಕೊಟ್ಟವರು ಲಂಕೇಶ್, ಪ್ರಭುದ್ದವಾದ ಪಾಂಡಿತ್ಯ ತಂದು ಕೊಟ್ಟವರು ಎಲ್.ಬಸವರಾಜು, ಮಾನವೀಯ ಸ್ಪರ್ಷದ ಕತೆ ಕೊಟ್ಟವರು ಸಾರಾ.ಅಬುಬಕರ್. ಅಂತಹವರನ್ನ ತೆಗೆದು ಹಾಕಿದ್ರೆ ಹೇಗೆ. ಈಗಾಗಿ ನಾನು ಈ ನಿರ್ಧಾರ ಮಾಡಿರೋದು. ಮೌಡ್ಯಕ್ಕೆ ಒಳಗಾಗದ, ವೈಜ್ಞಾನಿಕ ಚಿಂತನೆಯ ಪಾಠ ಕೊಡಲಿ. ನಾನಂತು ಪರಿಷ್ಕೃತ ಪಾಠದಕ್ಕೆ ಪರ್ಯಾಯ ವಾಟ್ಸಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳು ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ಗಟ್ಟಿಗೊಳಿಸುತ್ತೇವೆ ಅಂತ ದೇವನೂರು ಮಹದೇವ ಹೇಳಿದರು.