JNU ಹೊಸ ರೂಲ್ಸ್‌: ಕ್ಯಾಂಪಸ್‌ನಲ್ಲಿ ಧರಣಿ ಮಾಡಿದ್ರೆ 20 ಸಾವಿರ ದಂಡ; ಹಿಂಸಾಚಾರಕ್ಕೆ ಪ್ರವೇಶ ರದ್ದು ಜತೆಗೆ ದಂಡ..!

ವಿವಿಯ ಈ ನಿಯಮಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯುನ ಎಬಿವಿಪಿಯ ಕಾರ್ಯದರ್ಶಿ ವಿಕಾಸ್ ಪಟೇಲ್, ಹೊಸ ನಿಯಮಗಳು ಸರ್ವಾಧಿಕಾರಿ ಮನೋಭಾವವನ್ನು ಹೊಂದಿದೆ ಎಂದು ಹೇಳಿದ್ದಾರೆ. 

jnu students to face rs 20k penalty for holding dharnas admission cancellation rs 30k fine for violence ash

ನವದೆಹಲಿ (ಮಾರ್ಚ್ 2, 2023):  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜೆಎನ್‌ಯು ಸದಾ ಒಂದಿಲ್ಲೊಂದು ಕಾರಣಕ್ಕೆ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ವಿದ್ಯಾರ್ಥಿಗಳು ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ ತೋರಿಸಲು ಹೋಗಿ ಸಾಕಷ್ಟು ಟೀಕೆ ಎದುರಿಸಿದ್ದರು. ಅಡಳಿತ ಮಂಡಳಿ ಇದಕ್ಕೆ ಸೂಕ್ತ ಎಚ್ಚರಿಕೆಯನ್ನೂ ನೀಡಿತ್ತು. ಈಗ ಜೆಎನ್‌ಯು ಹೊಸ ನಿಯಮ ಜಾರಿಗೆ ಬಂದಿದೆ. ಅದೇನಂತೀರಾ… 

ಇನ್ಮುಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (Jawaharlal Nehru University) (ಜೆಎನ್‌ಯು) (JNU) ವಿದ್ಯಾರ್ಥಿಗಳು (Students) ಕ್ಯಾಂಪಸ್‌ನಲ್ಲಿ (Campus) ಧರಣಿ ನಡೆಸಿದರೆ 20,000 ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯ ಎಸಗಿ ವಿದ್ಯಾರ್ಥಿಗಳು ಒಂದು ವೇಳೆ ಸಿಕ್ಕಿಬಿದ್ದರೆ ಪ್ರವೇಶ ರದ್ದತಿ (Admission Cancellation) ಮಾಡುವುದರ ಜತೆಗೆ 30 ಸಾವಿರ ರೂ. ದಂಡವನ್ನೂ (Penalty) ವಸೂಲಿ ಮಾಡಲಾಗುತ್ತದೆ ಎಂದೂ ತಿಳಿದುಬಂದಿದೆ. ಪ್ರತಿಭಟನೆ, ಧರಣಿ, ವಿದ್ಯಾರ್ಥಿಗಳ ಘರ್ಷಣೆಗಳು ಮತ್ತು ಇತರೆ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುವ ಹೊಸ ನಿಯಮಗಳನ್ನು ಜೆಎನ್‌ಯು ಬಿಡುಗಡೆ ಮಾಡಿದೆ.

ಇದನ್ನು ಓದಿ: ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು; ಕೆಲವೆಡೆ ಪ್ರದರ್ಶನ: ಸತ್ಯ ಹೊರಗೆ ಬಂದೇ ಬರುತ್ತದೆ ಎಂದ ರಾಹುಲ್‌ ಗಾಂಧಿ

ನಿಯಮಗಳು ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಸರಿಯಾದ ನಡವಳಿಕೆಯ ನೀತಿ ಎಂಬ  10 ಪುಟಗಳ ನಿಯಮ ಪುಸ್ತಕವನ್ನು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು, ಈ ನೂತನ ನಿಯಮಗಳನ್ನು ಫೆಬ್ರವರಿ 3, 2023 ರಿಂದಲೇ ವಿಶ್ವವಿದ್ಯಾನಿಲಯವು ಜಾರಿಗೆ ತಂದಿದೆ ಎಂದೂ ವರದಿ ಹೇಳುತ್ತದೆ. ಬಿಬಿಸಿ ಡಾಕ್ಯುಮೆಂಟರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರದರ್ಶನದ ಕಾರಣ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಸಾಕ್ಷಿಯಾದ ನಂತರ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಯಮಾವಳಿಯನ್ನು ಕಾರ್ಯಕಾರಿ ಮಂಡಳಿಯು ಅನುಮೋದಿಸಿದೆ ಎಂದೂ ವರದಿಗಳು ಹೇಳುತ್ತವೆ.

ಎಬಿವಿಪಿ ವಿರೋಧ
ಇನ್ನು, ವಿವಿಯ ಈ ನಿಯಮಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯುನ ಎಬಿವಿಪಿಯ ಕಾರ್ಯದರ್ಶಿ ವಿಕಾಸ್ ಪಟೇಲ್, ಹೊಸ ನಿಯಮಗಳು ಸರ್ವಾಧಿಕಾರಿ ಮನೋಭಾವವನ್ನು ಹೊಂದಿದೆ ಹಾಗೂ ನಿರ್ದಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ವಿಶ್ವವಿದ್ಯಾನಿಲಯದ ಎಬಿವಿಪಿ ವಿಭಾಗವು, ಈ ನಿಯಮಗಳನ್ನು ಜೆಎನ್‌ಯು ಹಿಂಪಡೆಯಬೇಕೆಂದು ಸಹ ಆಗ್ರಹಿಸುತ್ತಿದೆ.

ಇದನ್ನೂ ಓದಿ: ಬ್ಯಾನ್‌ ಆದರೂ ಹೈದರಾಬಾದ್‌ ವಿವಿಯಲ್ಲಿ ಮೋದಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕೇರಳ, ಜೆಎನ್‌ಯೂನಲ್ಲೂ ಸ್ಕ್ರೀನಿಂಗ್..!

ಇನ್ನು, ಈ ನಿಯಮಗಳು ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ನಿಯಮಗಳ ಅನುಷ್ಠಾನದ ಮೊದಲು ಮತ್ತು ನಂತರ ಪ್ರವೇಶ ಪಡೆದ ಅರೆಕಾಲಿಕ ವಿದ್ಯಾರ್ಥಿಗಳಿಗೆ ಸಹ ವಿವಿಯ ಈ ನಿಯಮಗಳು ಜಾರಿಗೆ ಬರುತ್ತದೆ ಎಂದು ತಿಳಿದುಬಂದಿದೆ. ತಡೆಗಟ್ಟುವಿಕೆ, ಜೂಜಾಟದಲ್ಲಿ ತೊಡಗುವುದು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ಆಕ್ರಮಿಸುವುದು, ನಿಂದನೀಯ ಮತ್ತು ಅವಹೇಳನಕಾರಿ ಭಾಷೆಯ ಬಳಕೆ ಮತ್ತು ಫೋರ್ಜರಿ ಮಾಡುವುದು ಸೇರಿದಂತೆ 17 "ಅಪರಾಧಗಳಿಗೆ" ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ ಎಂದೂ ಪಿಟಿಐ ವರದಿ ಮಾಡಿದೆ. 

ಅಲ್ಲದೆ, ಇಂತಹ ಅಪರಾಧಗಳನ್ನು ಮಾಡಿರುವ ವಿದ್ಯಾರ್ಥಿಗಳ ತಪ್ಪಿನ ಪ್ರತಿಯನ್ನು ಅವರ ಪೋಷಕರಿಗೆ ಹಾಗೂ ಗಾರ್ಡಿಯನ್‌ಗಳಿಗೆ ರವಾನಿಸಲಾಗುತ್ತದೆ. ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಚಟುವಟಿಕೆಯನ್ನು ಅಡ್ಡಿಪಡಿಸುವ ಘೇರಾವ್‌, ಪ್ರತಿಭಟನೆ, ಅಥವಾ ಯಾವುದೇ ಇತರ ಚಟುವಟಿಕೆಗಳಂತಹ ಹಿಂಸಾಚಾರಕ್ಕೆ ಕಾರಣವಾಗಬಹುದಾದ ಕೃತ್ಯಗಳಿಗಾಗಿ, ವಿದ್ಯಾರ್ಥಿಗಳು ತಮ್ಮ ಪ್ರವೇಶವನ್ನು ರದ್ದುಗೊಳಿಸುವುದನ್ನು ಮತ್ತು 30,000 ರೂ. ವರೆಗೆ ದಂಡವನ್ನು ವಿಧಿಸಲಾಗುತ್ತದೆ ಎಂದೂ ತಿಳಿದುಬಂದಿದೆ.

 

ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ, ವರದಿ ಕೇಳಿದ ಕುಲಪತಿ!

ಒಮ್ಮೆ, ದೂರು ಕೇಳಿ ಬಂದ ನಂತರ, ಮುಖ್ಯ ಪ್ರಾಕ್ಟರ್ ಅವರು ವರದಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ ಮತ್ತು ಅದರಂತೆ ಪ್ರಾಕ್ಟೋರಿಯಲ್‌ ವಿಚಾರಣೆಯನ್ನು ಸ್ಥಾಪಿಸುತ್ತಾರೆ ಎಂದೂ ತಿಳಿದುಬಂದಿದೆ. ಇನ್ನು, ನ್ಯಾಯಾಲಯದ ವಿಚಾರಗಳಿಗೆ ನಿರ್ದಿಷ್ಟವಾಗಿ ನಿಯಮಗಳನ್ನು ರಚಿಸಲಾಗಿದೆ ಎಂದು ಜೆಎನ್‌ಯುನ ಅನೇಕ ಅಧಿಕಾರಿಗಳು ಪಿಟಿಐಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜೆಎನ್‌ಯುನಲ್ಲಿ ಮಾರಾಮಾರಿ: ವಿದ್ಯಾರ್ಥಿಗಳು ದೊಣ್ಣೆ ಹಿಡಿದು ತಿರುಗುತ್ತಿರುವ ವಿಡಿಯೋ ವೈರಲ್ 

Latest Videos
Follow Us:
Download App:
  • android
  • ios