ಜೆಎನ್‌ಯುನಲ್ಲಿ ಮಾರಾಮಾರಿ: ವಿದ್ಯಾರ್ಥಿಗಳು ದೊಣ್ಣೆ ಹಿಡಿದು ತಿರುಗುತ್ತಿರುವ ವಿಡಿಯೋ ವೈರಲ್
ಈ ಹಿಂದೆ ಸಾಕಷ್ಟು ಮಾರಾಮಾರಿಗಳು ಸಂಭವಿಸಿದ್ದ ದಿಲ್ಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಗುರುವಾರ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಘರ್ಷಣೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ನವದೆಹಲಿ: ಈ ಹಿಂದೆ ಸಾಕಷ್ಟು ಮಾರಾಮಾರಿಗಳು ಸಂಭವಿಸಿದ್ದ ದಿಲ್ಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಗುರುವಾರ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಘರ್ಷಣೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕ್ಯಾಂಪಸ್‌ನಲ್ಲೇ ಕೈಯಲ್ಲಿ ದೊಣ್ಣೆ ಹಿಡಿದು ವಿದ್ಯಾರ್ಥಿಗಳು ಓಡುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ವಿಶ್ಯವಿದ್ಯಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು(Police), ‘ಇಬ್ಬರು ಹುಡುಗರ (Boys) ನಡುವೆ ವೈಯಕ್ತಿಕ ಕಾರಣಕ್ಕಾಗಿ ಮೊದಲು ಜಗಳ ನಡೆದಿದ್ದು ಬಳಿಕ ಅವರವರ ಸ್ನೇಹಿತರ ಗುಂಪು (Friends Group) ಸೇರಿಕೊಂಡು ಹೊಡೆದಾಡಿವೆ. ಆದರೆ ಈ ಕುರಿತು ನಮಗೆ ಯಾವುದೇ ದೂರು ಬಂದಿಲ್ಲ. ಇದು ವೈಯಕ್ತಿಕ ಜಗಳವಾಗಿದ್ದು ಯಾವುದೇ ರಾಜಕೀಯ ಗುಂಪು (Political group) ಭಾಗಿಯಾಗಿಲ್ಲ’ ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯ ಕೂಡ ಇದೇ ಮಾತನ್ನು ಹೇಳಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಉದ್ದೇಶದಿಂ ವರದಿ ನೀಡುವಂತೆ ವಿವಿಯ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದೆ. ಈ ಹಿಂದೆ, ಎಡಪಂಥೀಯ (Leftist) ಹಾಗೂ ಬಲಪಂಥೀಯ ವಿದ್ಯಾರ್ಥಿಗಳ (Rightist Student) ನಡುವೆ ವಿವಿಯಲ್ಲಿ ಸಂಘರ್ಷಗಳು ಸಂಭವಿಸಿದ್ದವು.
2 ದಿನದ ಹಿಂದೆ ವಿವಿಯ ನರ್ಮದಾ ಹಾಸ್ಟೆಲ್‌ನಲ್ಲಿ (Narmada Hostel) ಪಾರ್ಟಿಯೊಂದು ಆಯೋಜನೆಯಾಗಿತ್ತು. ಅಲ್ಲಿ ಆರಂಭವಾದ ಜಗಳ ಗುರುವಾರ ಸಂಜೆ 5 ಗಂಟೆಗೆ ಹೊಡೆದಾಟಕ್ಕೆ ತಲುಪಿದೆ. ಬಳಿಕ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಜೆಎನ್‌ಯುನಲ್ಲಿ ಉಗ್ರ ನಿಗ್ರಹ ಕೋರ್ಸ್: ಭಾರೀ ವಿವಾದ!
ತಂದೆಗೆ ಜೀವ ಬೆದರಿಕೆ ಹಾಕಿದ 'ಹೋರಾಟಗಾರ್ತಿ' ಶೆಹ್ಲಾ ರಶೀದ್!