ಸಾಲು ಸಾಲು ರಜೆ, ಶಾಲೆಗಳಲ್ಲಿ Covid ಲಸಿಕೆ ಅಭಿಯಾನಕ್ಕೆ ಹಿನ್ನಡೆ
ಬೇಸಿಗೆ ರಜೆ, ಪರೀಕ್ಷೆ ಮತ್ತು ಯುಗಾದಿ ರಜೆಯಿಂದಾಗಿ ಶಾಲೆಗಳಲ್ಲಿ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಹಿನ್ನಡೆಯಾಗಿದೆ.
ಬೆಂಗಳೂರು(ಎ.2): ಬೇಸಿಗೆ ರಜೆ (Summer holidays), ಪರೀಕ್ಷೆ (examinations) ಮತ್ತು ಯುಗಾದಿ ರಜೆಯಿಂದಾಗಿ (Ugadi holidays ) ಶಾಲೆಗಳಲ್ಲಿ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನಕ್ಕೆ (vaccination drive) ಹಿನ್ನಡೆಯುಂಟಾಗಿದೆ. ಏಪ್ರಿಲ್ 1ರಿಂದ ಈ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ನೀಡಲಾಗಿತ್ತು. ಆರೋಗ್ಯ ಇಲಾಖೆ (health department) ಶುಕ್ರವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 12-14 ವರ್ಷ ವಯಸ್ಸಿನ ಒಟ್ಟು 98,689 ಮಕ್ಕಳಿಗೆ ಲಸಿಕೆ (vaccination) ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ.
ರಜೆ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿವೆ. ಇನ್ನು ಎಸ್ಎಸ್ಎಲ್'ಸಿ ಪರೀಕ್ಷೆಗಳೂ ನಡೆಯುತ್ತಿವೆ. ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಹಿಂಜರಿಯುತ್ತಿದ್ದು, ಅವರ ಮನವೊಲಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದಲ್ಲಿ 12-14 ವಯೋಮಾನದ 20 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದುವರೆಗೆ 9,83,944 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಆದರೆ, ಕೊಡಗಿನಲ್ಲಿ ಲಸಿಕೆಗಳ ಪೂರೈಕೆಯಲ್ಲಿ ವಿಳಂಬವಾಗಿದ್ದು, ಇದರಿಂದ ಶಾಲೆಗಳಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನಡೆಯುಂಟಾಗುತ್ತಿದೆ. ಜಿಲ್ಲೆಗಳಲ್ಲಿರುವ ಶಾಲೆಗಳಲ್ಲಿ ಲಸಿಕೆ ಅಭಿಯಾನ ನಡೆಸಲು ಸೂಕ್ಷ್ಮ ಯೋಜನೆ ರೂಪಿಸುವಂತೆ ಡಿಡಿಪಿಐಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.
SC/ST ನೌಕರರ ಬಡ್ತಿ ಮೀಸಲಾತಿ ರದ್ದು ಮಾಡಿದ್ರೆ ಅಶಾಂತಿಗೆ ಕಾರಣ: ಸುಪ್ರೀಂಗೆ ಕೇಂದ್ರ
ನಾವು ಇನ್ನೂ ಯೋಜನೆಯನ್ನು ರೂಪಿಸಿಲ್ಲ. ಆದರೆ, ಈ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿವೆ. ಸೋಮವಾರದಿಂದ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಗೋಪಿನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ 53 ಶಾಲೆಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ವರೆಗೆ 4,278 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಕೆಲವು ಶಾಲೆಗಳು ರಜೆ ಪ್ರಾರಂಭವಾಗುವುದಕ್ಕೂ ಎರಡು ದಿನಗಳ ಮೊದಲು ಲಸಿಕೆ ಅಭಿಯಾನಕ್ಕೆ ಅನುಮತಿ ಪಡೆದುಕೊಂಡಿದ್ದವು. ನೆಲಮಂಗಲದ ಸರ್ಕಾರಿ ಶಾಲೆಯಲ್ಲಿ ಗುರುವಾರ ಲಸಿಕೆ ಅಭಿಯಾನ ಪೂರ್ಣಗೊಂಡಿತು ಎಂದು ನೆಲಮಂಗಲ (Nelamangala ) ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಥಾಯ್ಲೆಂಡ್ ಜತೆ ಶಿಕ್ಷಣ , ಐಟಿ , ಬಿಟಿ ಸಹಕಾರಕ್ಕೆ ರಾಜ್ಯದ ಒಲವು
ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi ) ಅವರು ವಿದ್ಯಾರ್ಥಿಗಳಿಗೆ ತಮ್ಮ ವಾರ್ಷಿಕ ಪರೀಕ್ಷಾ ಪೆ ಚರ್ಚಾ (Pariksha Pe Charcha) ಟಾಕ್‌ನಲ್ಲಿ, ಪರೀಕ್ಷೆಗಳಿಗೆ (Exam) ತಯಾರಿ ನಡೆಸುವಾಗ ಸಾಮಾಜಿಕ ಮಾಧ್ಯಮದಂತಹ (Social media) ಗೊಂದಲ ಮತ್ತು ಅವುಗಳಿಂದ ದೂರ ಇರುವ ಕುರಿತು ಸಲಹೆಗಳನ್ನು ನೀಡಿದರು.
ದಿನದಲ್ಲಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಇಲ್ಲದ ಕ್ಷಣಗಳಿವೆ ಎಂದು ದೃಢಪಡಿಸಿಕೊಳ್ಳಿ, ಆದರೆ ಇನ್‌ಲೈನ್‌ನಲ್ಲಿ ಇರುವುದನ್ನು ಮರೆಯದಿರಿ ಎಂದು "ಪರೀಕ್ಷಾ ಪೇ ಚರ್ಚಾ" ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು.
ನಿಮ್ಮ ಮೂಲಭೂತ ಅಂಶಗಳನ್ನು ಸುಧಾರಿಸಲು ಮತ್ತು ನಿಮ್ಮ ಆಫ್‌ಲೈನ್ ಶಿಕ್ಷಣವನ್ನು (Offline education) ಹೆಚ್ಚಿಸಲು ಆನ್‌ಲೈನ್ ಬಳಸಿ. ನಿಮ್ಮ ಅಧ್ಯಯನವನ್ನು ವಿಸ್ತರಿಸಲು ಆನ್‌ಲೈನ್ ನಿಮಗೆ ಸಹಾಯ ಮಾಡುತ್ತದೆ. ಆದರೆ ನೀವು ವಿಚಲಿತರಾಗುತ್ತಿದ್ದರೆ, ನಿಮ್ಮನ್ನು ಶಿಸ್ತುಬದ್ಧವಾಗಿ ಇರಿಸಿಕೊಳ್ಳಲು ನಿಮ್ಮ ಗ್ಯಾಜೆಟ್‌ಗಳಲ್ಲಿ ಪರಿಕರಗಳನ್ನು ಬಳಸಿ. ನಿಮ್ಮ ವ್ಯಕ್ತಿತ್ವವನ್ನು ರೂಪಿಸುವುದು ಗ್ಯಾಜೆಟ್‌ಗಳನ್ನು ಬಳಸುವಷ್ಟೇ ಮುಖ್ಯವಾಗಿದೆ ಎಂದು ಮೋದಿ ಮಕ್ಕಳಿಗೆ ಸಲಹೆ ನೀಡಿದರು.