SC/ST ನೌಕರರ ಬಡ್ತಿ ಮೀಸಲಾತಿ ರದ್ದು ಮಾಡಿದ್ರೆ ಅಶಾಂತಿಗೆ ಕಾರಣ: ಸುಪ್ರೀಂಗೆ ಕೇಂದ್ರ

ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸುವುದರಿಂದ ಉದ್ಯೋಗಿಗಳ ಅಶಾಂತಿ ಮತ್ತು ಬಹು ವ್ಯಾಜ್ಯಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರಕಾರ ಅಭಿಪ್ರಾಯ ಪಟ್ಟಿದೆ.

Quashing of reservation in promotion to SC ST employees may lead to unrest gow

ನವದೆಹಲಿ(ಎ.2): ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಯನ್ನು (Reservation) ರದ್ದುಗೊಳಿಸುವುದರಿಂದ ಉದ್ಯೋಗಿಗಳ ಅಶಾಂತಿ ಮತ್ತು ಬಹು ವ್ಯಾಜ್ಯಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ (Central Government) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಕೇಂದ್ರ ಸರ್ಕಾರ (Union Government) ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮೀಸಲಾತಿ ನೀತಿಯು ಸಂವಿಧಾನ ಮತ್ತು ಈ ನ್ಯಾಯಾಲಯ ರೂಪಿಸಿದ ಕಾನೂನಿಗೆ ಅನುಗುಣವಾಗಿದೆ ಎಂದು ತಿಳಿಸಿದೆ.

"ಬಡ್ತಿ ಮೀಸಲಾತಿ ರದ್ದುಗೊಳಿಸಿದರೆ SC/ST ನೌಕರರಿಗೆ ನೀಡಲಾದ ಬಡ್ತಿ ಮೀಸಲಾತಿಯ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಇದು SC ಮತ್ತು ST ನೌಕರರನ್ನು ಹಿಮ್ಮೆಟ್ಟಿಸಲು ಕಾರಣವಾಗಬಹುದು, ಪಿಂಚಣಿ ಮರು-ನಿಗದಿ ಸೇರಿದಂತೆ ಅವರ ವೇತನವನ್ನು ಮರು-ನಿಗದಿಗೊಳಿಸುವಿಕೆಗೆ ಕಾರಣವಾಗಬಹುದು.

ಈ ಮಧ್ಯೆ ನಿವೃತ್ತರಾಗಿರುವ ಅನೇಕ ಉದ್ಯೋಗಿಗಳು, ಅವರಿಗೆ ಪಾವತಿಸಿದ ಹೆಚ್ಚುವರಿ ಸಂಬಳ/ಪಿಂಚಣಿ ವಾಪಸ್ ಪಡೆಯಬೇಕಾಗುತ್ತದೆ. ಇದು ಬಹು ವ್ಯಾಜ್ಯಗಳ ಸೃಷ್ಟಿಗೆ ಮತ್ತು ನೌಕರರ ಅಶಾಂತಿಗೆ ಕಾರಣವಾಗುತ್ತದೆ" ಕೇಂದ್ರ ಹೇಳಿದೆ.

DRDO RECRUITMENT 2022: ಸಂಶೋಧನಾ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಾತಿ

ಬಡ್ತಿ ಮೀಸಲಾತಿಯನ್ನು ಸಮರ್ಥಿಸಿಕೊಂಡ ಕೇಂದ್ರ, ಭಾರತೀಯ ಒಕ್ಕೂಟದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯ ಅಸಮರ್ಪಕವಾಗಿದೆ ಮತ್ತು ಬಡ್ತಿ ಮೀಸಲಾತಿಯಿಂದ ಆಡಳಿತಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಯ ಮೂಲಕ ಪ್ರತಿ ಅಧಿಕಾರಿಯ ಕೆಲಸ, ವೈಯಕ್ತಿಕ ಗುಣಲಕ್ಷಣಗಳು ಮತ್ತು ಕ್ರಿಯಾತ್ಮಕ ಸಾಮರ್ಥ್ಯದ ಮೌಲ್ಯಮಾಪನ ಮಾಡುವ ಮೂಲಕ  ಆಡಳಿತಾತ್ಮಕ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಹೇಳಿದೆ.

IFFCO Recruitment 2022 ಕೃಷಿ, ಕಾನೂನು ಪದವಿ ಪಡೆದವರಿಗೆ ಇಫ್ಕೊನಲ್ಲಿ ಉದ್ಯೋಗವಕಾಶ 

ಸಚಿವಾಲಯಗಳು/ಇಲಾಖೆಗಳು ಒದಗಿಸಿದ ಮಾಹಿತಿಯ ಪ್ರಕಾರ, 2007 ರಿಂದ 2020 ರ ಅವಧಿಯಲ್ಲಿ SC ಮತ್ತು ST ವರ್ಗಗಳಿಗೆ ಸೇರಿದ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಲ್ಲಿ ಬಡ್ತಿ ನೀಡಲಾಗಿದೆ. ಏಕೆಂದರೆ ಬಡ್ತಿಯಲ್ಲಿ ಮೀಸಲಾತಿ ನೀತಿಯು ಅನ್ವಯಿಸುತ್ತದೆ. ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಸಾರ್ವಜನಿಕ ವಿಮಾ ಕಂಪನಿಗಳು ಮತ್ತು ಭಾರತ ಸರ್ಕಾರದ ಅಡಿಯಲ್ಲಿನ ಇತರ ಸಂಸ್ಥೆಗಳು, ಈ ಸಂಸ್ಥೆಗಳಲ್ಲಿನ ಎಸ್‌ಸಿ/ಎಸ್‌ಟಿ ಉದ್ಯೋಗಿಗಳು ಸಹ ಕೆಳಮಟ್ಟದ ಹುದ್ದೆಗಳಿಗೆ ಹಿಂತಿರುಗುವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಬಡ್ತಿಗಳಲ್ಲಿ ಮೀಸಲಾತಿ ಒದಗಿಸುವುದಕ್ಕಾಗಿ ಎಸ್‌ಸಿ ಮತ್ತು ಎಸ್‌ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ನಿರ್ಧರಿಸಲು ಸಮಕಾಲೀನ ಕೇಡರ್‌ವಾರು ಡೇಟಾ ಮತ್ತು ದತ್ತಾಂಶದ ಪರಿಗಣನೆಯ ವಿವರಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಭಾರತ ಒಕ್ಕೂಟಕ್ಕೆ ನಿರ್ದೇಶನ ನೀಡಿತ್ತು.

ಈ ಹಿಂದೆ, ಎಸ್‌ಸಿ/ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಮೊದಲು ರಾಜ್ಯ ಸರ್ಕಾರಗಳು ಪ್ರಮಾಣೀಕರಿಸಬಹುದಾದ ಡೇಟಾವನ್ನು ಸಂಗ್ರಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಸಂವಿಧಾನ ಪೀಠದ ನಿರ್ಧಾರಗಳ ನಂತರ ಹೊಸ ಮಾನದಂಡವನ್ನು ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ  ಹೇಳಿದೆ. ಎಸ್‌ಸಿ ಮತ್ತು ಎಸ್‌ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯದ ಕುರಿತು ತನ್ನ ನಿರ್ಧಾರವನ್ನು ಮತ್ತೆ ತೆರೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು ಮತ್ತು ಅದನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ರಾಜ್ಯಗಳು ನಿರ್ಧರಿಸಬೇಕು ಎಂದು ಹೇಳಿತ್ತು.

Latest Videos
Follow Us:
Download App:
  • android
  • ios