Asianet Suvarna News Asianet Suvarna News

NEET Exam: ವಿದ್ಯಾರ್ಥಿನಿ ಆತ್ಮಹತ್ಯೆ, ನೀಟ್ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಕುಮಾರಸ್ವಾಮಿ ಆಗ್ರಹ

* ನೀಟ್‌ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದಿರುವುದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ 
* ದ್ವಿತೀಯ ಪಿಯುಸಿಯಲ್ಲಿ  ಶೇ.96ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿನಿ
* ಘಟನೆಗೆ ಮಾಜಿ ಸಿಎಂ ಎಚ್.ಡಿ.‌ಕುಮಾರಸ್ವಾಮಿ ತೀವ್ರ ಆತಂಕ

HD Kumaraswamy Reacts on Shivamogga Student suicide over Neet Exam rbj
Author
Bengaluru, First Published Nov 27, 2021, 6:39 PM IST
  • Facebook
  • Twitter
  • Whatsapp

ಬೆಂಗಳೂರು, (ನ.27): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (Second PUC Exam) ಅತ್ಯಧಿಕ  ಅಂಕ ಗಳಿಸಿದ್ದರೂ, ನೀಟ್ ಪರೀಕ್ಷೆಯಲ್ಲಿ(NEET Exam) ನಿರೀಕ್ಷಿತ ಅಂಕ ಬಾರದಿರುವ ಕಾರಣಕ್ಕೆ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Student suicide) ಮಾಡಿಕೊಂಡಿರುವ ಘಟನೆಗೆ ಮಾಜಿ ಸಿಎಂ ಎಚ್.ಡಿ.‌ಕುಮಾರಸ್ವಾಮಿ (HD Kumaraswamy) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ಸೊರಬ ತಾಲೂಕಿನ ಚನ್ನಪಟ್ಟಣ ಗ್ರಾಮದ ಸಂಕಲ್ಪ ಎಂಬ ವಿದ್ಯಾರ್ಥಿನಿ Student) ಸಾವಿಗೆ ಶರಣಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಹೀಗೆ ಜೀವವನ್ನು ಕೊನೆ ಮಾಡಿಕೊಂಡ ಆ ಯುವತಿಯ ದುರ್ಮರಣ ಎಲ್ಲರಿಗೂ ಪಾಠ ಆಗಬೇಕಿದೆ ಎಂದು ಹೇಳಿದ್ದಾರೆ.

Suicide; ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!

ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ. ಈಗಾಗಲೇ ತಮಿಳುನಾಡು ಸರ್ಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರ್ಕಾರವೂ ಇಂತಹ ನಿಲುವಿಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಒತ್ತಾಯಿಸಿದ್ದಾರೆ.

ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿಯಲ್ಲಿ  ಶೇ.96ರಷ್ಟು ಅಂಕ ಗಳಿಸಿದ್ದರೂ ಅವರಿಗೆ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದೇ ಸರಕಾರಿ ಸೀಟು ಸಿಗಲಿಲ್ಲ. ಈ ಕಾರಣಕ್ಕೆ ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಕಾಶಗಳು ಆಕಾಶದಷ್ಟು ಇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಾರ್ಗಗಳು ಕೂಡ ಇವೆ. ದೃಢ ಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಕಲ್ಪ ಅವರಂತೆ ಜೀವ ತೆಗೆದುಕೊಳ್ಳಬಾರದು. ಇದು ನನ್ನ ಕಳಕಳಿಯ ಮನವಿಯಾಗಿದೆ ಎಂದು ಹೇಳಿದ್ದಾರೆ.

ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ
ನೀಟ್ ರದ್ದತಿಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ (Ashwath Narayan), ಇದು ಹೆಚ್ಚು ಕಡಿಮೆ ತಿಳಿವಳಿಕೆ ಕೊರತೆ ಅಂತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನೀಟ್ ಬರದಂತೆ ತಡೆಯಲು ಬಹಳಷ್ಟು ಶಕ್ತಿಗಳು ಯತ್ನಿಸಿದ್ದವು. ಇಂದು ನೀಟ್ನಿಂದಾಗಿ ಮೆರಿಟ್ ಇಲ್ಲದೆ ಸೀಟ್ ಸಿಗಲ್ಲ. ನೀಟ್ ಜನಪರ ಮತ್ತು ವಿದ್ಯಾರ್ಥಿಗಳ ಪರವಾಗಿ ಇದೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ (Dr CN Ashwath narayan)ಅಭಿಪ್ರಾಯಪಟ್ಟರು.

ಸೊರಬದ ವಿದ್ಯಾರ್ಥಿನಿ ಆತ್ಮಹತ್ಯೆ ದುಃಖಕರ ವಿಷಯ. ವಿದ್ಯಾರ್ಥಿಗಳ ಮೆರಿಟ್ ಹೆಚ್ಚಿಸಲು ಕೆಲಸ ಮಾಡಬೇಕು. ನೀಟ್​ನಿಂದ ಇಂದು ಬಡವರಿಗೆ ಅನುಕೂಲವಾಗಿದೆ. ಸರ್ಕಾರಿ ಕಾಲೇಜು, ಗ್ರಾಮೀಣ ವಿದ್ಯಾರ್ಥಿಗಳಿಗೆ ರ್ಯಾಕಿಂಗ್ ಬರಬೇಕು. ಮೊದಲು ಯುಪಿಎಸ್​ಸಿಯಲ್ಲಿ ರಾಜ್ಯದವರು ಕಡಿಮೆ ಇರುತ್ತಿದ್ದರು. ಈಗ ಅದನ್ನು ಬಗೆಹರಿಸಿಕೊಂಡಿಲ್ವಾ? ಹಾಗಂತ ಯುಪಿಎಸ್​ಸಿ ಪರೀಕ್ಷೆ ಬೇಡ ಎಂದು ಹೇಳಲು ಆಗುತ್ತಾ?  ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios