Asianet Suvarna News Asianet Suvarna News

Suicide; ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!

* ಶಿಕ್ಷಕನಿಂದನಿರಂತರ ಲೈಂಗಿಕ ದೌರ್ಜನ್ಯ
* ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣು
* ಸೆಕೆಂಡ್ ಪಿಯು ಓದುತ್ತಿದ್ದ ಬಾಲಕಿ ಮೇಲೆ ನಿರಂತರ ದೌರ್ಜನ್ಯ
*ಶಿಕ್ಷಕ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

17-year-old Coimbatore girl dies by suicide, allegations of sexual assault by teacher Crime News mah
Author
Bengaluru, First Published Nov 15, 2021, 10:02 PM IST
  • Facebook
  • Twitter
  • Whatsapp

ಕೊಯಂಬತ್ತೂರು(ನ. 15)  ಇದು ನಿಜಕ್ಕೂ ಒಂದು ಆಘಾತಕಾರಿ (Coimbatore)  ಪ್ರಕರಣ.  ತನ್ನ ಶಾಲೆಯ ಶಿಕ್ಷಕರೊಬ್ಬರಿಂದ ನಿರಂತರ ದೌರ್ಜನ್ಯವಾಗುತ್ತಿದ್ದ ಕಾರಣ 17  ವರ್ಷದ ಬಾಲಕಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 

ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತನ್ನ ಶಿಕ್ಷಕ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ (Sexual Harassment) ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ.  ಆಕೆಯ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಪೋಷಕರು ನೇರವಾಗಿ ಆರೋಪಿಸಿದ್ದಾರೆ. ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಸಹ ನಡೆದಿದೆ.

ಆರ್ ಎಸ್ ಪುರಮ್ ನ ಶಾಲೆಯಲ್ಲಿ ವಿದ್ಯಾರ್ಥಿನಿ ಸೆಕೆಂಡ್ ಪಿಯು  ವ್ಯಾಸಂಗ ಮಾಡುತ್ತಿದ್ದರು. ಈಕೆಗೆ ಭೌತಶಾಸ್ತ್ರ ಕಲಿಸುತ್ತಿದ್ದ ಕೆ.ಮಿಥುನ್ ಚಕ್ರವರ್ತಿ (31) ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಿಕ್ಷಕನ ಕಿರುಕುಳ ತಾಳಲಾರದೇ ಉಕ್ಕಡಮ್ ನಲ್ಲಿನ ತನ್ನ ನಿವಾಸದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ .

ಪ್ರಸಾದವೆಂದು ನಿದ್ರೆ ಮಾತ್ರೆ ಕೊಡ್ತಿದ್ದ ಕಪಟ ಸ್ವಾಮಿಯ ಹೀನ ಕೆಲಸ

 ಆರೋಪಿ ಚಕ್ರವರ್ತಿ ತನ್ನ ವಿದ್ಯಾರ್ಥಿನಿ ಮೇಲೆ ಮಾರ್ಚ್ ನಲ್ಲಿ ನಡೆದ ವಿಶೇಷ ತರಗತಿಗಳ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ವಿದ್ಯಾರ್ಥಿನಿ ಶಾಲಾ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದಳು. ಶಾಲಾ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಕ್ರಮವನ್ನೂ ಜರುಗಿಸಿತ್ತು ಎಂದು ಪೊಲೀಸರು  ಹೇಳಿದ್ದರೆ ವಿದ್ಯಾರ್ಥಿನಿಯ ಪೋಷಕರು ತಳ್ಳಿ ಹಾಕಿದ್ದಾರೆ.

ವಿದ್ಯಾರ್ಥಿನಿಯ ತಾಯಿ ಹೇಳುವಂತೆ ಮಗಳು ಶಿಕ್ಷನಕ ಕರ್ಮಕಾಂಡವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾಳೆ. ಈ ವೇಳ ಕರೆಸಿ ಮಾತನಾಡಿ ಇದನ್ನು ಇಲ್ಲಿಗೆ ಬಿಡಿ ಎಂದು ರಾಜಿ ಪಂಚಾಯಿತಿ ಮಾಡಲಾಗಿದೆ. ಮತ್ತೆ ಶಿಕ್ಷಕನ ಕಾಮ ಪುರಾಣ ಮುಂದುವರಿದಿದೆ.  ಪ್ರಶ್ನೆ ಮಾಡಿದಕ್ಕೆ  ಬಾಲಕಿಯ ಮೇಲೆ ಕೆಲವರು ಹಲ್ಲೆ ಮಾಡಿ ಬಸ್ ನೊಳಕ್ಕೆ ದೂಡಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾಳೆ. 

ಇಷ್ಟೆಲ್ಲ ಗೊಂದಲಗಳ ನಡುವೆ ವಿದ್ಯಾರ್ಥಿನಿಯನ್ನು ಬೇರೆ ಶಾಲೆಗೆ ಸೇರಿಸುವ ನಿರ್ಧಾರ ಮಾಡಲಾಗಿದೆ.  ಇದೆಲ್ಲ ನಡೆಯುತ್ತಿರುವಾಗಲೆ ತಾನು ಒತ್ತಡಕ್ಕೆ ಒಳಗಾಗಿದ್ದು ಈ ಜೀವನ ಸಾಕಾಗಿದೆ ಎಂದು ಗೆಳೆಯರಿಗೆ ತಿಳಿಸಿದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪತ್ರದಲ್ಲಿ ವಿದ್ಯಾರ್ಥಿನಿ ತನ್ನ ಶಿಕ್ಷಕನಷ್ಟೇ ಅಲ್ಲದೇ ಇನ್ನೂ ಇಬ್ಬರು ತನಗೆ ಕಿರುಕುಳ ನೀಡಿರುವುದಾಗಿ ಹೇಳಿದ್ದಾಳೆ. ಸಂತ್ರಸ್ತೆ ಹಾಗೂ ಆರೋಪಿಯ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಕ್ಲಿಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದು ಶಿಕ್ಷನಕ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಆರ್ ಎಸ್ ಪುರಂ ಎಲ್ಲಾ ಮಹಿಳಾ ಪೊಲೀಸ್ ಠಾಣೆ (ಎಡಬ್ಲ್ಯೂಪಿಎಸ್) ಪ್ರಸ್ತುತ ತನಿಖೆ ನಡೆಸುತ್ತಿದೆ. AWPS ವೆಸ್ಟ್ ಶಿಕ್ಷಕನ ವಿರುದ್ಧ IPC 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 9 (L) (ಮಗುವಿನ ಮೇಲೆ ಒಂದಕ್ಕಿಂತ ಹೆಚ್ಚು ಬಾರಿ ಅಥವಾ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುವವನು) POCSO (ಮಕ್ಕಳ ಮೇಲೆ ಉಗ್ರವಾದ ಲೈಂಗಿಕ ದೌರ್ಜನ್ಯ)  ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. 

 

Follow Us:
Download App:
  • android
  • ios