ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಒಂದು ಸಣ್ಣ ಹಳ್ಳಿ, ಅಲ್ಲಿ ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವುದಕ್ಕಿಂತ ಜೀವನೋಪಾಯಕ್ಕೆ ಗಳಿಸುವ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಆದರೆ ಈ ಹಳ್ಳಿಯ ಹುಡುಗನೊಬ್ಬ ಮೊದಲ ಬಾರಿಗೆ ಇಂತಹದ್ದೊಂದು ಸಾಧನೆ ಮಾಡಿದಾಗ ಇಡೀ ಹಳ್ಳಿ ಸಂತೋಷದ ಅಲೆಯಲ್ಲಿ ಮಿಂದ್ದೆದಿತು. 

NEET Result Success Story: ರಾಜಸ್ಥಾನದ ಬಾರ್ಮರ್ ಜಿಲ್ಲೆಯ ದೇದವಾಸ್‌ನ ಗೋಲಿಯಾ ಗ್ರಾಮದಲ್ಲಿ ಇದುವರೆಗೆ ಯಾವುದೇ ಹುಡುಗ ವೈದ್ಯನಾಗಿಲ್ಲ. ಆದರೆ ಜೋಧರಾಮ್ ಎಂಬ ಯುವಕ ಈ ಸಾಧನೆಯನ್ನು ಮಾಡಿದಾಗ ಎಲ್ಲರೂ ಆಶ್ಚರ್ಯಚಕಿತರಾದರು. ಇದು ವಿದ್ಯಾರ್ಥಿಯ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಅವರು ತಮ್ಮ ಗ್ರಾಮದಲ್ಲಿ NEET ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ವ್ಯಕ್ತಿಯಾದರು . ಹಲವು ವರ್ಷಗಳ ಹಿಂದೆ ಜೋಧರಾಮ್ ಅವರ ಕುಟುಂಬದ ಸ್ಥಿತಿ ತುಂಬಾ ಎಷ್ಟು ಕೆಟ್ಟದಾಗಿತ್ತು ಎಂಬ ಕಥೆಯಿದು.

ಹೆಚ್ಚುತ್ತಿರುವ ಸಾಲ ಮತ್ತು ಕಡಿಮೆ ಮಳೆಯಿಂದಾಗಿ ಕೃಷಿಯನ್ನೇ ನಂಬಿ ಬದುಕುವುದು ಕಷ್ಟಕರ. ಹಾಗಾಗಿ 2010 ರಲ್ಲಿ, ಜೋಧರಾಮ್ ಅವರ ತಂದೆ ನರಿಂಗರಾಮ್‌ಜಿ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 70 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಬೇಕು ಅಥವಾ ಓದುವುದನ್ನು ಬಿಟ್ಟು ಮುಂಬೈಗೆ ಹೋಗಿ ಅಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಆದರೆ ಅವರ ಮಗ ಮುಂದೆ ಎಂಥಹ ಅದ್ಭುತ ಕೆಲಸಗಳನ್ನು ಮಾಡಲಿದ್ದಾನೆಂದು ತಂದೆಗೆ ಕಿಂಚಿತ್ತು ಸುಳಿವಿರಲಿಲ್ಲ. ತನ್ನ ತಂದೆ ಸವಾಲು ಹಾಕಿದ ನಂತರ, 2012 ರಲ್ಲಿ, ಜೋಧರಾಮ್ 70 ರ ಬದಲು ಕೇವಲ 65 ಪ್ರತಿಶತ ಅಂಕಗಳನ್ನು ಗಳಿಸಿದನು. ಆದರೆ ತಂದೆ ಮುಂದೆ ಓದಲು ಬಿಡುವುದಿಲ್ಲ ಎಂದು ಅವನು ಹೆದರುತ್ತಿದ್ದನು. ಆದರೆ ಅದೃಷ್ಟವಶಾತ್ ಅದು ಆಗಲಿಲ್ಲ.

ಹೌದು, ಜೋಧರಾಮ್ ಅವರ ಸಹೋದರ ಮೇವರಮ್ ಸಪೋರ್ಟ್ ಮಾಡಿದರು. ಕುಟುಂಬದ ಮನವೊಲಿಸಿದರು. ನಂತರ ಜೋಧರಾಮ್ ಜೋಧ್‌ಪುರದ ಕೆ.ಆರ್. ಪಬ್ಲಿಕ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶ ಪಡೆದರು. ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದರಿಂದ ಅಲ್ಲಿ ಅವರ

ಶಾಲಾ ಶುಲ್ಕವನ್ನು ಭಾಗಶಃ ಮನ್ನಾ ಮಾಡಲಾಯಿತು. 11 ಮತ್ತು 12 ನೇ ತರಗತಿಯಲ್ಲಿದ್ದಾಗ, ಶಾಲೆಯ ಪ್ರಾಂಶುಪಾಲ ಕುಪರಂಜಿ ಅವನ ಕಠಿಣ ಪರಿಶ್ರಮವನ್ನು ನೋಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಂತೆ ಸಲಹೆ ನೀಡಿದರು. ಆದರೆ ಜೋಧರಾಮ್ ನೀಟ್‌ನಂತಹ ಪರೀಕ್ಷೆಗಳ ಬಗ್ಗೆ ಹಿಂದೆಂದೂ ಕೇಳಿರಲಿಲ್ಲ ಮತ್ತು ಪಠ್ಯಕ್ರಮವನ್ನು ನೋಡಿದಾಗ ಅದು ತುಂಬಾ ಕಷ್ಟವೆನಿಸಿತು. ಅವನು ಅದನ್ನು ಮಾಡಲು ಸಾಧ್ಯವಾಗದಿರಬಹುದು ಎಂದು ಯೋಚಿಸಲು ಪ್ರಾರಂಭಿಸಿದನು. ಆದರೆ ಒಂದು ಕೈ ನೋಡೋಣವೆಂದು ಪ್ರಯತ್ನಿಸಲು ನಿರ್ಧರಿಸಿದನು.

ಆದರೆ ಜೋಧರಾಮ್ ತನ್ನ ಮೊದಲ ಪ್ರಯತ್ನದಲ್ಲಿ ವಿಫಲನಾದನಲ್ಲದೆ, ಅದನ್ನು ತೇರ್ಗಡೆಯಾಗಲು 5 ​​ಪ್ರಯತ್ನ ಮಾಡಬೇಕಾಯಿತು. ತನ್ನ ನಾಲ್ಕನೇ ಪ್ರಯತ್ನದಲ್ಲಿ, ಅವನು 12903 ರ‍್ಯಾಂಕ್ ಗಳಿಸಿದನು. ಕೋಟಾದಲ್ಲಿ ತರಬೇತಿ ಪಡೆಯುವ ಮೂಲಕ ತಯಾರಿ ಮಾಡುವ ಸೌಲಭ್ಯವನ್ನು ಪಡೆದನು ಮತ್ತು ಶುಲ್ಕದಲ್ಲಿ ಸ್ವಲ್ಪ ರಿಯಾಯಿತಿಯನ್ನು ಪಡೆದನು.

ಕೋಟಾದಲ್ಲಿದ್ದಾಗ ತರಬೇತಿಯ ಸಹಾಯದಿಂದ, ಜೋಧರಾಮ್ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಿದರು ಮತ್ತು ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ ನಂತರ, ಅವರು ಅಂತಿಮವಾಗಿ ತಮ್ಮ ಐದನೇ ಪ್ರಯತ್ನದಲ್ಲಿ AIR 3886 ರ ಅಖಿಲ ಭಾರತ ಶ್ರೇಣಿಯನ್ನು ಪಡೆದರು. ಈಗ ಅವರ ಕನಸು ವೈದ್ಯರಾಗುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವುದು. ಅವರು ಹೃದ್ರೋಗ ತಜ್ಞರಾಗಲು ಬಯಸುತ್ತಾರಂತೆ.