ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ ಕೈಜೋಡಿಸುವಂತೆ ಆಕ್ಸಿಸ್ ಬ್ಯಾಂಕ್‌ಗೆ Basavaraj Bommai ಮನವಿ

 ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳುವಂತೆ  ಆಕ್ಸಿಸ್ ಬ್ಯಾಂಕ್ ಗೆ ಸಿಎಂ ಬೊಮ್ಮಾಯಿ  ಮನವಿ ಮಾಡಿದ್ದಾರೆ.

CM basavaraj Bommai suggests Axis Bank to join hands with Govt to upgrade educational institutions gow

ದಾವೋಸ್ (ಮೇ.26): ಆಕ್ಸಿಸ್ ಬ್ಯಾಂಕ್ (Axis Bank) ಸಂಸ್ಥೆಯು  ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj Bommai) ಅವರು ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ ನಲ್ಲಿ ( Davos) ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ (World Economic Forum Meet ) ಆಕ್ಸಿಸ್ ಬ್ಯಾಂಕ್ ನ ವ್ಯಸ್ಥಾಪಕ ನಿರ್ದೇಶಕರ ಹಾಗೂ ಸಿಇಓ ಅಮಿತಾಬ್ ಚೌಧರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

"

 

 
ಆಕ್ಸಿಸ್ ಬ್ಯಾಂಕ್ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ. ಸಂಸ್ಥೆಯು  ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿಗಳು ಸಲಹೆ ನೀಡಿದರು.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ!

ಆಕ್ಸಿಸ್ ಬ್ಯಾಂಕ್ ಸಂಸ್ಥೆಯು ಭಾರತದ ಮೂರನೇ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಬೃಹತ್, ಮಧ್ಯಮ ಉದ್ದಿಮೆಗಳಿಗೆ, ಸಣ್ಣ ಕೈಗಾರಿಕೆ, ಕೃಷಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಿದ್ದು, ದೇಶಾದ್ಯಂತ 4000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಸಿಂಗಾಪುರ, ಹಾಂಕಾಂಗ್, ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.

 

ನೋಕಿಯಾ ಸಂಸ್ಥೆ: ಕರ್ನಾಟಕದಲ್ಲಿ ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಲು ನೋಕಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ BC Nagesh

ನೋಕಿಯಾ (Nokia) ಸಂಸ್ಥೆ  ಬೆಂಗಳೂರು ನಗರದಲ್ಲಿ ಅತಿದೊಡ್ಡ ಸಂಶೋಧನಾ ಕೇಂದ್ರವನ್ನು ಹೊಂದಿದೆ. ಇಲ್ಲಿ 5ಜಿ, ಅಡ್ವಾನ್ಸಡ್ 5ಜಿ ಮತ್ತು 6ಜಿ ತಾಂತ್ರಿಕತೆಯ ಬಗ್ಗೆ ಸಂಶೋಧನೆ ಕೈಗೊಳ್ಳಲಾಗಿದ್ದು, 7000 ಕ್ಕೂ ಹೆಚ್ಚು ಸಂಶೋಧಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೇಪಾಲ್ ಸಂಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೇಪಾಲ್ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಹೂಡಿಕೆಗಳ ಬಗ್ಗೆ ಚರ್ಚಿಸಿದರು. ಆನ್ ಲೈನ್ ಪಾವತಿಗಳ ಸಂಸ್ಥೆಯಾದ ಪೇ ಪಾಲ್ ಬೆಂಗಳೂರಿನಲ್ಲಿ ಭದ್ರವಾಗಿ ನೆಲೆಯೂರಿರುವ ಸಂಸ್ಥೆಯಾಗಿದೆ. ಜಾಗತಿಕ ಪಾವತಿಗಳ ಸೌಲಭ್ಯದಿಂದಾಗಿ ಪೇಪಾಲ್ ಸಂಸ್ಥೆ, ಭಾರತದ ರಫ್ತುದಾರರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ.

Latest Videos
Follow Us:
Download App:
  • android
  • ios