Asianet Suvarna News Asianet Suvarna News

ಎಸ್‌ಸಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ಯೋಜನೆ, ಏನೆಲ್ಲ ಲಾಭಗಳಿವೆ?

*ಬಡ ಎಸ್‌ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಗುರಿ
*ಈ ಶ್ರೇಷ್ಠ ಯೋಜನೆಯಡಿ 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದೆ.
* ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಮೂಲಕ ಈ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಆಯ್ಕೆ

Central Government started SRESHTA for SC students
Author
Bengaluru, First Published Jun 7, 2022, 5:52 PM IST

ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ(ಎಸ್‌ಸಿ) ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಾನಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರವು ಈಗ SRESHTA ಯೋಜನೆಯನ್ನು ಪ್ರಾರಂಭಿಸಿದೆ.  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಸಾಂವಿಧಾನಿಕ ಆದೇಶದ ಪ್ರಕಾರ ಬಡ ಎಸ್‌ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಉದ್ದೇಶಿತ ಪ್ರದೇಶಗಳಲ್ಲಿ (SRESHTA) ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದ್ದು, ಒಂಬತ್ತನೇ ತರಗತಿಯಲ್ಲಿ 1,300 ಸೀಟುಗಳು ಮತ್ತು 11ನೇ ತರಗತಿಯಲ್ಲಿ 1,700 ಸೀಟುಗಳನ್ನು ಈ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ SRESHTA (NETS) ಗಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಪಾರದರ್ಶಕ ಕಾರ್ಯವಿಧಾನದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕಾಶ್ಮೀರದ ವಿದ್ಯಾರ್ಥಿಗೆ 51 ಲಕ್ಷ ರೂ. ವಿದ್ಯಾರ್ಥಿ ವೇತನ!

ಶ್ರೇಷ್ಠ (SRESHTA) ಯೋಜನೆಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳ ಪೋಷಕರ ಆದಾಯವು ವರ್ಷಕ್ಕೆ 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು ಮತ್ತು ವಿದ್ಯಾರ್ಥಿವೇತನವು ಶಾಲಾ ಶುಲ್ಕ (ಬೋಧನಾ ಶುಲ್ಕ ಸೇರಿದಂತೆ) ಮತ್ತು ಹಾಸ್ಟೆಲ್ ಶುಲ್ಕ (ಮೆಸ್ ಶುಲ್ಕಗಳು ಸೇರಿದಂತೆ) ಒಳಗೊಂಡಿರುತ್ತದೆ. ಇನ್ನು ಶ್ರೇಷ್ಟ ಯೋಜನೆಯಡಿ ಗ್ರೇಡ್ ಒಂಬತ್ತರ ವಿದ್ಯಾರ್ಥಿವೇತನದ ಮೊತ್ತವು ಒಂದು ಲಕ್ಷ ರೂ., ಗ್ರೇಡ್ 10ರ ವಿದ್ಯಾರ್ಥಿ ವೇತನವು ರೂ. 1.10 ಲಕ್ಷ, ಗ್ರೇಡ್ 11ನೇ ಸ್ಕಾಲರ್ಶಿಪ್ ರೂ. 1.25 ಲಕ್ಷ ಮತ್ತು ಗ್ರೇಡ್ 12ನೇ ವರ್ಷಕ್ಕೆ ರೂ. 1.35 ಲಕ್ಷ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿರೇಂದ್ರ ಕುಮಾರ್ (Virendra Kumar), ಈ ಯೋಜನೆಯ ಮೂಲಕ ಎಸ್‌ಸಿ ಸಮುದಾಯದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. "ಒಳ್ಳೆಯ ಶಾಲೆಯಲ್ಲಿ ಓದುತ್ತಿರುವ ಯಾವುದೇ ವಿದ್ಯಾರ್ಥಿಗಳು ಪಡೆಯುತ್ತಿರುವ ಮಾನ್ಯತೆಯನ್ನು ನಾವು, ಎಸ್ಸಿ ವಿದ್ಯಾರ್ಥಿಗಳಿಗೆ ನೀಡಲು ಬಯಸುತ್ತೇವೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ರಾಷ್ಟ್ರವ್ಯಾಪಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತದೆ. ಶಾಲೆಗಳಲ್ಲಿ ಪ್ರವೇಶವು ರಾಷ್ಟ್ರವ್ಯಾಪಿ ಪರೀಕ್ಷೆಯಲ್ಲಿ ಪಡೆದ ಅರ್ಹತೆಯ ಆಧಾರದ ಮೇಲೆ ಇರುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೆಬ್ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆಯ ಮೂಲಕ ಶಾಲೆಗಳ ಆಯ್ಕೆಯನ್ನು ನೀಡಲಾಗುವುದು ಎಂದಿದ್ದಾರೆ.

ಸೋಲಾರ್ ಮರ ಅಭಿವೃದ್ಧಿಪಡಿಸಿದ ಐಐಟಿ ವಿದ್ಯಾರ್ಥಿಗಳು, ಏನೀದರ ವಿಶೇಷ?
 
ದೇಶದ ಉನ್ನತ ಖಾಸಗಿ ವಸತಿ ಶಾಲೆ (Residential School)ಗಳಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಪರಿಶಿಷ್ಟ ಜಾತಿಗಳ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. CBSE-ಸಂಯೋಜಿತ ಖಾಸಗಿ ಶಾಲೆಗಳಲ್ಲಿ 9 ಮತ್ತು 11 ನೇ ತರಗತಿಗಳಲ್ಲಿ ಪ್ರವೇಶ ಲಭ್ಯವಿರುತ್ತದೆ. ಸರ್ಕಾರದ ಯೋಜನೆಗಳು ಮತ್ತು ಯೋಜನೆಗಳ ವಿತರಣೆಯನ್ನು ಸಾಧ್ಯವಾದಷ್ಟು ಸರಳಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಪ್ರಗತಿ ಮತ್ತು ಸಾಮಾನ್ಯ ಬೆಳವಣಿಗೆಯನ್ನು ಉತ್ತೇಜಿಸುವ ವಾತಾವರಣವನ್ನು ಸ್ಥಾಪಿಸುವುದು. ಪರಿಶಿಷ್ಟ ಜಾತಿಗಳ (ಎಸ್‌ಸಿ) ಪ್ರಾಬಲ್ಯ ಹೊಂದಿರುವ ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಅಂತರವನ್ನು ಮುಚ್ಚಲು ಸ್ವಯಂಸೇವಕ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದೆ.  ಪ್ರತಿಭಾವಂತ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು. ಇದರಿಂದ ಅವರು ಭವಿಷ್ಯದ ಅವಕಾಶಗಳನ್ನು ಹುಡುಕಬಹುದು. ಈ ಶ್ರೇಷ್ಠ ಯೋಜನೆಯು ವಿದ್ಯಾರ್ಥಿಗಳಲ್ಲಿ ಹೊಸ ಶೈಕ್ಷಣಿಕ ಅವಕಾಶವನ್ನುಸೃಷ್ಟಿಸುವುದು ಮಾತ್ರವಲ್ಲದೇ, ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದು ಹೇಳಬಹುದು.

Follow Us:
Download App:
  • android
  • ios