ಸೋಲಾರ್ ಮರ ಅಭಿವೃದ್ಧಿಪಡಿಸಿದ ಐಐಟಿ ವಿದ್ಯಾರ್ಥಿಗಳು, ಏನೀದರ ವಿಶೇಷ?
*ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರ ಐಟಿಐ ವಿದ್ಯಾರ್ಥಿಗಳಿಂದ ವಿಶಿಷ್ಟ ಪ್ರಯೋಗ
*ಬೆಟ್ಟ ಗುಡ್ಡ ಪ್ರದೇಶದಲ್ಲಿ, ಸೌಲಭ್ಯವಂಚಿತ ಪ್ರದೇಶಗಳ ಜನರಿಗೆ ಇದು ವರದಾನ
*ಸೋಲಾರ್ ಟ್ರೀ ತಯಾರಿಕೆ ತೀರಾ ವೆಚ್ಚವೂ ಇಲ್ಲ ಮತ್ತು ಕಡಿಮೆ ಜಾಗ ಸಾಕು
ಒಡಿಶಾ(Odisha)ದ ಗಂಜಾಂ ಜಿಲ್ಲೆಯ ಬೆರ್ಹಾಂಪುರ (Berhampur) ಕೈಗಾರಿಕಾ ತರಬೇತಿ ಸಂಸ್ಥೆಯ (Industrial Training Institute-ITI) ವಿದ್ಯಾರ್ಥಿಗಳು ಸೌರ ವೃಕ್ಷ (Solar Tree)ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಫಿಟ್ಟರ್/ಎಲೆಕ್ಟ್ರಿಷಿಯನ್ ವಿದ್ಯಾರ್ಥಿಗಳು ಈ ಸೋಲಾರ್ ಟ್ರೀ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದಾರೆ. 12 ಪ್ಯಾನೆಲ್‌ಗಳನ್ನು ಹೊಂದಿರುವ ಸೌರ ವೃಕ್ಷವು ಒಂದು ಕಿಲೋವ್ಯಾಟ್ ಶಕ್ತಿಯನ್ನು ಉತ್ಪಾದಿಸಬಲ್ಲದು. ಇದನ್ನು ದೊಡ್ಡ ಪ್ಯಾನೆಲ್‌ಗಳೊಂದಿಗೆ ಎರಡು ಕಿಲೋವ್ಯಾಟ್‌ವರೆಗೆ ವಿಸ್ತರಿಸಬಹುದು. ಅಂದಹಾಗೇ ಇದರ ಬೆಲೆ ಸುಮಾರು 3.5 ಲಕ್ಷ ರೂ. ಬರ್ಹಾಂಪುರ ಐಟಿಐ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ನಲ್ಲಿ ಸೋಲಾರ್ ಟ್ರೀ ಸ್ಥಾಪಿಸಿದ್ದಾರೆ. ಬೆಟ್ಟದ ತುದಿ, ಭತ್ತದ ಗದ್ದೆಗಳು ಮತ್ತು ಇತರ ಸ್ಥಳಗಳನ್ನು ಒಳಗೊಂಡಂತೆ ಎಲ್ಲಿಯಾದರೂ ಈ ಸೌರ ಮರಗಳನ್ನು ಸುಲಭವಾಗಿ ಅಳವಡಿಸಬಹುದು. ಸಾಂಪ್ರದಾಯಿಕ ಸೌರ ಫಲಕಗಳನ್ನು ನಿರ್ದಿಷ್ಟ ಪ್ರದೇಶದ ರೇಖಾಂಶದ ಲೆಕ್ಕಾಚಾರಗಳ ಪ್ರಕಾರ ಸೂರ್ಯನ ದಿಕ್ಕಿಗೆ ಸ್ವಲ್ಪ ವಾಲಿರುವ ವಿಶಾಲವಾದ ಸ್ಥಳದಲ್ಲಿ ಮಾತ್ರ ಅಳವಡಿಸಬಹುದು. ಆದರೆ ಸೋಲಾರ್ ಮರಗಳ ವಿಷಯದಲ್ಲಿ ಹಾಗಲ್ಲ. ಇದಕ್ಕೆ ಬಹಳ ಸೀಮಿತ ಸ್ಥಳಾವಕಾಶದ ಅಗತ್ಯವಿದ್ದು, ಅದು ಸುಂದರವಾಗಿಯೂ ಕಾಣುತ್ತದೆ.
ಐಐಟಿಗಳಲ್ಲಿ ಓದಬೇಕಾ? ಈ ಆನ್‌ಲೈನ್ ಕೋರ್ಸಿಗೆ ದಾಖಲಾಗಿ
ಪಿವಿ ಮಾಡ್ಯೂಲ್ (PV Module)ಗೆ 10 ರಿಂದ 12 ಎಕರೆ ಬೇಕಾಗುತ್ತದೆ. ಆದರೆ ಸೋಲಾರ್ ಮರಕ್ಕೆ 0.10 ರಿಂದ 0.12 ಎಕರೆ ಇದ್ದರೆ ಸಾಕು. ಸೌರ ಶಕ್ತಿಯನ್ನು ಪರಿಣಾಮಕಾರಿಯಾಗಿ ಉತ್ಪಾದಿಸಲು ಸೋಲಾರ್ ಟ್ರೀ (Solar Tree) ಅತ್ಯುತ್ತಮ ನವೀನ ಮಾರ್ಗವಾಗಿದೆ. ಇದ್ರಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯಬಹುದು. ಸೌರ ಮರಗಳು ಎಲ್ಲಾ ಪ್ರದೇಶಗಳಲ್ಲೂ ಹೊಂದಿಕೊಳ್ಳುತ್ತವೆ. ಇವುಗಳಿಂದ ಗರಿಷ್ಠ ಪ್ರಮಾಣದ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಐಟಿಐ (ITI) ಆವರಣದಲ್ಲಿರುವ ಅತಿ ದೊಡ್ಡ ಓಪನ್ ಏರ್ ಸ್ಕ್ರ್ಯಾಪ್ ಪಾರ್ಕ್‌ನಲ್ಲಿ ಸೋಲಾರ್ ಟ್ರೀ ಅಳವಡಿಸಿದ್ದೇವೆ. ಸೋಲಾರ್ ಟ್ರೀಗೆ 12 ಸೌರ ಫಲಕಗಳನ್ನು ಅಳವಡಿಸಲಾಗಿದೆ. ಆದರೆ 4 ಕಿಲೋವ್ಯಾಟ್ ಶಕ್ತಿ ಉತ್ಪಾದಿಸುವ 48 ಪ್ಯಾನೆಲ್‌ಗಳ ಸೋಲಾರ್ ಟ್ರೀ ವಿನ್ಯಾಸಗೊಳಿಸಲು ಯೋಜಿಸುತ್ತಿದ್ದೇವೆ ಎಂದು ಬೆರ್ಹಾಂಪುರ ಐಟಿಐ ಪ್ರಾಂಶುಪಾಲ ಡಾ.ರಜತ್ ಕುಮಾರ್ ಪ್ರಾಣಿಗ್ರಾಹಿ ಹೇಳಿದ್ದಾರೆ.
ಬೋಧಕ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸೋಲಾರ್ ಮರವನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು ಸುಮಾರು ಐದು ದಿನಗಳನ್ನು ತೆಗೆದುಕೊಂಡರು. "ಪ್ರತಿ ಸೌರ ಫಲಕವು ಸೂರ್ಯನ ಬೆಳಕನ್ನು ಗರಿಷ್ಠವಾಗಿ ಒಡ್ಡಿಕೊಳ್ಳುವ ರೀತಿಯಲ್ಲಿ ಮರವನ್ನು ವಿನ್ಯಾಸಗೊಳಿಸಲಾಗಿದೆ. ಮರದಲ್ಲಿ 12 ಸೌರ ಫಲಕಗಳಿವೆ, ಇದು 12 ಅಡಿ ಎತ್ತರವಿದೆ. ಇದನ್ನು ಅಭಿವೃದ್ಧಿಪಡಿಸಲು ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಸೋಲಾರ್ ಟ್ರೀ ಪರಿಕಲ್ಪನೆಯು ಹೊಸದಲ್ಲವಾದರೂ, ಐಟಿಐ ಬರ್ಹಮ್‌ಪುರ್ ಇದನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ" ಎಂದು ಪಾಣಿಗ್ರಾಹಿ ಹೇಳಿದ್ದಾರೆ.
ಅಗ್ರಿಕಲ್ಚರ್ ಎಂಜನಿಯರಿಂಗ್ ಓದಿದರೆ ಎಷ್ಟೆಲ್ಲಾ ನೌಕರಿಗಳಿವೆ?
ಐಟಿಐ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಸೋಲಾರ್ ಟ್ರಿ ಬಹಳ ಮಹತ್ವ ಎನಿಸಿಕೊಂಡಿದೆ. ಯಾಕೆಂದರೆ, ಬೆಟ್ಟದಂತ ಪ್ರದೇಶಗಳಲ್ಲಿ ಅಥವಾ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವೇ ಇಲ್ಲದಂತ ಪ್ರದೇಶಗಳಲ್ಲಿ ಈ ಸೋಲಾರ್ ಮರ ಸಾಕಷ್ಟು ಉಪಯೋಗಕ್ಕೆ ಬರಲಿದೆ ಎಂದು ಹೇಳಬಹುದು. ಯಾಕೆಂದರೆ, ಈಗಾಗಲೇ ಕೇಳಿದಂತೆ ಪಿವಿ ಮಾಡ್ಯೂಲ್‌ಗಳಂತ ಪ್ರಾಜೆಕ್ಟ್ ಸಾಕಷ್ಟು ಜಾಗ ಬೇಕಾಗುತ್ತದೆ ಮತ್ತು ವೆಚ್ಚದಾಯಕವೂ ಹೌದು. ಸೌಲಭ್ಯದಿಂದ ದೂರ ಇರುವ ಪ್ರದೇಶಗಳಲ್ಲಿರುವ ಜನರು ಇದನ್ನು ಭರಿಸುವುದು ಕಷ್ಟ. ಅಂಥ ಸಂದರ್ಭದಲ್ಲಿ ಈ ಸೋಲಾರ್ ಟ್ರೀ ಹೆಚ್ಚು ಪರಿಣಾಮಕಾರಿ ಎನಿಸಿಕೊಳ್ಳುತ್ತದೆ. ಇದಕ್ಕೆ ತುಂಬ ಜಾಗವೂ ಬೇಕಿಲ್ಲ ಮತ್ತು ಖರ್ಚು ಕೂಡ ಕಮ್ಮಿ. ಆದ್ದರಿಂದ ಬೆರ್ಹಾಂಪುರ್ ಐಟಿಐ ವಿದ್ಯಾರ್ಥಿಗಳ ಈ ಸಾಧನೆ ವಿಶೇಷ ಎನಿಸಿಕೊಂಡಿದೆ.