ಕಾಶ್ಮೀರದ ವಿದ್ಯಾರ್ಥಿಗೆ 51 ಲಕ್ಷ ರೂ. ವಿದ್ಯಾರ್ಥಿ ವೇತನ!
*ಶ್ರೀನಗರದ ತಶಾಫೀ ಮಸೂದಿ ವಿದ್ಯಾರ್ಥಿಗೆ ಕತಾರ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿ ವೇತನ
*ಮಸೂದಿ ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ, ಶಾಲೆ ಸಂತಸ ವ್ಯಕ್ತಪಡಿಸಿದೆ
*ಜಾರ್ಜ್‌ಟೌನ್ ಯುನಿವರ್ಸಿಟಿ ಆಫ್ ಫಾರೇನ್ ಸರ್ವೀಸ್‌ನಿಂದ ದೊರೆತ ಸ್ಕಾಲರ್‌ಶಿಫ್
ಜಮ್ಮು ಕಾಶ್ಮೀರ (Jammu and Kashmir) ದಲ್ಲಿ ಪ್ರತಿನಿತ್ಯ ಭಯೋತ್ಪಾದಕ ಚಟುವಟಿಕೆಗಳದ್ದೇ (Terror Activities) ಸದ್ದು ಅಲ್ಲಿನ ನಾಗರಿಕರು (Citizens) ನಿತ್ಯ ಜೀವಭಯದಲ್ಲೇ ವಾಸಿಸುವ ಪರಿಸ್ಥಿತಿ ಉದ್ಭವವಾಗಿದೆ. ಇನ್ನು ಶಾಲೆ (School)ಗಳಲ್ಲಿ ಮಕ್ಕಳ ಕಲಿಕೆಯ ಹಾದಿಯೂ ಅಷ್ಟು ಸುಲಭವಾಗಿಲ್ಲ. ನಿತ್ಯ ಗುಂಡಿನ ಸದ್ದಿನ ಆತಂಕದಲ್ಲೇ ಮಕ್ಕಳು ಶಾಲೆಗೆ ಹೋಗುತ್ತಾರೆ. ಅಂಥದರಲ್ಲಿ ಕಣಿವೆ ನಾಡಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದು ಕನಸಿನ ಮಾತೇ ಸರಿ. ಹೀಗಿದ್ರೂ ಕೆಲವರು ವಿದೇಶಿ ಸ್ಕಾಲರ್ಶಿಪ್ (Foreign Scholarship) ಪಡೆದು ತಮ್ಮ ಕನಸ್ಸನ್ನು ನನಸಾಗಿಸಿಕೊಳುತ್ತಾರೆ. ಇದೀಗ ಅದೇ ಹಾದಿಯಲ್ಲಿ ಶ್ರೀನಗರದ ವಿದ್ಯಾರ್ಥಿನಿ ಪಟ್ಟ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಶ್ರೀನಗರದ (Srinagar) ದೆಹಲಿ ಪಬ್ಲಿಕ್ ಸ್ಕೂಲ್ (Delhi Public School)ನ 12 ನೇ ತರಗತಿ ವಿದ್ಯಾರ್ಥಿನಿ ತಶಾಫೀ ಮಸೂದಿ (Tashafee Masoodi), ಕತಾರ್ (Qatar)ನ ಪ್ರತಿಷ್ಠಿತ ಜಾರ್ಜ್‌ಟೌನ್ ಯೂನಿವರ್ಸಿಟಿ ಸ್ಕೂಲ್ ಆಫ್ ಫಾರಿನ್ ಸರ್ವೀಸ್ (Georgetown University School of Foreign Service)ನಲ್ಲಿ 70,000 ಡಾಲರ್ (ಸುಮಾರು 51 ಲಕ್ಷ ರೂಪಾಯಿ) ವಿದ್ಯಾರ್ಥಿವೇತನವನ್ನು ಗಳಿಸಿದ್ದಾರೆ.
ಐಐಟಿಗಳಲ್ಲಿ ಓದಬೇಕಾ? ಈ ಆನ್‌ಲೈನ್ ಕೋರ್ಸಿಗೆ ದಾಖಲಾಗಿ
ಹ್ಯುಮಾನಿಟೀಸ್ ವಿದ್ಯಾರ್ಥಿನಿಯಾದ 18 ವರ್ಷದ ತಶಾಫೀ, ಸಂಸ್ಕೃತಿ ಮತ್ತು ರಾಜಕೀಯದಲ್ಲಿ ಪ್ರಮುಖವಾದ ವಿದೇಶಿ ಸೇವೆಗಳಲ್ಲಿ ಪದವಿಯನ್ನು ಪಡೆಯಲು ಕತಾರ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ. "ನಾನು ಶಾಲೆಯ ವೃತ್ತಿ ಮಾರ್ಗದರ್ಶನ ವಿಭಾಗಕ್ಕೆ ಋಣಿಯಾಗಿದ್ದೇನೆ. ನನಗೆ ಶಿಫಾರಸು ಪತ್ರಗಳು ಮತ್ತು ನಿಯಮಿತ ಸಮಯಕ್ಕೆ ಮಾರ್ಗದರ್ಶನ ಮತ್ತು ಸಮಾಲೋಚನೆ ಸೇರಿದಂತೆ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಡಿಪಿಎಸ್ ಬಹಳ ಸಹಾಯ ಮಾಡಿದೆ ಅಂತಾರೆ ತಶಾಪೀ (Tashafee).
ಇನ್ನು ವಿದ್ಯಾರ್ಥಿಯನ್ನು ಅಭಿನಂದಿಸಿ, ಪ್ರಾಂಶುಪಾಲರಾದ ಶಫಕ್ ಅಫ್ಶಾನ್ (Shafaq Afshan) ಮಾತನಾಡಿ, ಪ್ರತಿ ವರ್ಷ ಡಿಪಿಎಸ್ (DPS) ಶ್ರೀನಗರದ ವಿದ್ಯಾರ್ಥಿಗಳು ಭಾರತದಾದ್ಯಂತದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಮತ್ತು ವಿದೇಶಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಮತ್ತು ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. "ನಮ್ಮ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ವಿಭಾಗವು ತಮ್ಮ ಶೈಕ್ಷಣಿಕ ಪ್ರಯಾಣದ ಮುಂದಿನ ಹಂತಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ವ್ಯಾಪಕ ಶ್ರೇಣಿಯ ಮಾರ್ಗದರ್ಶನ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ತಶಾಫೀಯ ಯಶಸ್ಸು ಕಣಿವೆಯ ಶೈಕ್ಷಣಿಕ ಭೂದೃಶ್ಯವನ್ನು ಪರಿವರ್ತಿಸಲು ಇಲಾಖೆ ಮಾಡುತ್ತಿರುವ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.
ಅಂಧರಿಗಾಗಿಯೇ ವಿಶೇಷ ಸ್ಮಾರ್ಟ್‌ವಾಚ್ ಸಿದ್ಧಪಡಿಸಿದ IIT Kanpur ವಿದ್ಯಾರ್ಥಿಗಳು
ಡಿಪಿಎಸ್ ಅಧ್ಯಕ್ಷ ವಿಜಯ್ ಧರ್ (Vijay Dharr), “ನಾವು ಡಿಪಿಎಸ್ ಶ್ರೀನಗರವನ್ನು ಪ್ರಾರಂಭಿಸಲು ಹೊರಟಾಗ, ಕಣಿವೆಯಲ್ಲಿ ಶಿಕ್ಷಣವನ್ನು ಆಲೋಚಿಸಿದ ಮತ್ತು ಕಲಿಸುವ ವಿಧಾನವನ್ನು ಪರಿವರ್ತಿಸಲು ನಾವು ಬಯಸಿದ್ದೇವೆ. ವರ್ಷಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಉನ್ನತ ವಿಶ್ವವಿದ್ಯಾನಿಲಯಗಳ ಕನಸು ಕಾಣಲು ಸೇತುವೆಯಾಗಿಲ್ಲದ ಹಂತವನ್ನು ನಾವು ತಲುಪಿದ್ದೇವೆ. ತಶಾಫೀ ಅದನ್ನು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಬಹಳಷ್ಟು ಸಂದರ್ಭದಲ್ಲಿ ಪ್ರತಿಭೆ ಇದ್ದು, ಬೆಳಗಲು ಅವಕಾಶವಿರುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇಂಥ ಬೆಳವಣಿಗೆ ನಡೆಯುತ್ತವೆ. ಎಷ್ಟೋ ಪ್ರತಿಭೆಗಳು ಹಣದ ಕೊರತೆಯಿಂದಾಗಿ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಸ್ಕಾಲರ್‌ಶಿಪ್ ವಿದ್ಯಾರ್ಥಿಗಳಿಗೆ ಭಾರೀ ಆರ್ಥಿಕ ನೆರವನ್ನು ಒದಗಿಸಿಕೊಡುತ್ತವೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಶ್ರೀನಗರದ ವಿದ್ಯಾರ್ಥಿಯ ಪ್ರತಿಭೆಗೆ ಈಗ ಕತಾರ್‌ನ ಸ್ಕಾಲರ್‌ಶಿಫ್ ಕೂಡ ಅಂಥದ್ದೇ ಒಂದು ಪ್ರಯತ್ನವಾಗಿದೆ.
ಅಗ್ರಿಕಲ್ಚರ್ ಎಂಜನಿಯರಿಂಗ್ ಓದಿದರೆ ಎಷ್ಟೆಲ್ಲಾ ನೌಕರಿಗಳಿವೆ?
ಈ ವಿದ್ಯಾರ್ಥಿ ವೇತನಗಳಿಂದ ಸಾಕಷ್ಟು ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ನೆರವು ದೊರೆಯುತ್ತಿದೆ. ದೊಡ್ಡ ವಿಶ್ವವಿದ್ಯಾಲಯಗಳು, ವಿದ್ಯಾ ಸಂಸ್ಥೆಗಳು, ಸಾಮಾಜಿಕ ಸಂಘಗಳು ಸ್ಕಾಲರ್‌ಶಿಪ್‌ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪೊರೆಯುತ್ತಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಇದು ಹೆಚ್ಚು ಅವಕಾಶವನ್ನು ಸೃಷ್ಟಿಸಲು ಸಾಧ್ಯವಾಗಿದೆ.