Bangalore University: ಬೆಂ.ವಿವಿ ಪ್ರಭಾರ ಕುಲಪತಿ ಪ್ರಕ್ರಿಯೆ ಶುರು

*  ವಿದ್ಯಾರ್ಥಿ, ಬೋಧಕರ ಪ್ರತಿಭಟನೆಯಿಂದ ಎಚ್ಚೆತ್ತ ಸರ್ಕಾರ
*  ಕುಲಸಚಿವರಿಂದ ಹಿರಿಯ ಡೀನ್‌ಗಳ ವಿವರ ಸಲ್ಲಿಕೆ
*  ಪ್ರೊ.ದಶರಥ, ಪ್ರೊ.ಸಿಂಥಿಯಾ ರೇಸ್‌ನಲ್ಲಿ
 

Bangalore University Chancellor Appointment Process Begin grg

ಬೆಂಗಳೂರು(ಏ.02):  ವಿದ್ಯಾರ್ಥಿಗಳು, ಬೋಧಕರ ಸಂಘಟನೆಗಳಿಂದ ಪ್ರತಿಭಟನೆ ತೀವ್ರಗೊಂಡ ಬಳಿಕ ಎಚ್ಚೆತ್ತುಕಂಡಿರುವ ಸರ್ಕಾರ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University) ಪ್ರಭಾರ ಕುಲಪತಿ(Chancellor) ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಕುಲ ಸಚಿವರಿಂದ ಹಿರಿಯ ಡೀನ್‌ಗಳ ಪಟ್ಟಿ ತರಿಸಿಕೊಂಡಿದೆ.

ಕುಲಪತಿ ಸ್ಥಾನ ಖಾಲಿಯಾದಾಗ ನಿಯಮಾನುಸಾರ ವಿವಿಯ ಹಿರಿಯ ಡೀನ್‌ ಅವರನ್ನು ಪ್ರಾಭಾರ ಕುಲಪತಿಯಾಗಿ ನೇಮಕ ಮಾಡಬೇಕು. ಆದರೆ, ಕುಲಪತಿ ಸ್ಥಾನಕ್ಕೆ ಪ್ರೊ.ಕೆ.ಆರ್‌. ವೇಣುಗೋಪಾಲ್‌ ಅವರನ್ನು ನೇಮಕ ಮಾಡಿದ್ದ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್‌(High Court) ರದ್ದುಗೊಳಿಸಿ ಹದಿನೈದು ದಿನಗಳು ಕಳೆದರೂ ಪ್ರಭಾರ ಕುಲಪತಿ ನೇಮಿಸುವ ಕಾರ್ಯ ನಡೆದಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ, ವಿದ್ಯಾರ್ಥಿಗಳಿಂದ(Students) ಪ್ರತಿಭಟನೆ(Protest ) ತೀವ್ರಗೊಂಡಿದೆ. ಇದರಿಂದ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆಯು(Department of Higher Education) ಇದೀಗ ಬೆಂ.ವಿವಿಯ ಕುಲ ಸಚಿವ ಪ್ರೊ.ಕೊಟ್ರೇಶ್‌ ಅವರಿಂದ ಹಿರಿಯ ಡೀನ್‌ಗಳ ಪಟ್ಟಿ ತರಿಸಿಕೊಂಡಿದೆ.

Bangalore University: ಬೆಂಗಳೂರು ವಿವಿ ಫೈಟ್‌ ಗೌರ್ನರ್‌ ಅಂಗಳಕ್ಕೆ..!

ವಿವಿಯ ಮೂಲಗಳ ಪ್ರಕಾರ, ವಿವಿಯ ಕಾನೂನು ವಿಭಾಗದ ಡೀನ್‌ ಪ್ರೊ.ದಶರಥ, ವಾಣಿಜ್ಯ ವಿಭಾಗದ ಡೀನ್‌ ಪ್ರೊ.ಸಿಂಥಿಯಾ ಸೇರಿದಂತೆ ಹಿರಿಯ ಡೀನ್‌ ಸಾಲಿನಲ್ಲಿರುವ ನಾಲ್ವರ ಹೆಸರನ್ನು ಕುಲ ಸಚಿವರು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಿದ್ದಾರೆ. ಈ ಪಟ್ಟಿಯನ್ನು ಇಲಾಖೆಯು ರಾಜ್ಯಪಾಲರಿಗೆ(Governor) ಕಳುಹಿಸಬೇಕಿದೆ. ಬಳಿಕ ಅವರು ತಮ್ಮ ಪರಮಾಧಿಕಾರ ಬಳಸಿ ಒಂದು ಹೆಸರನ್ನು ಹಂಗಾಮಿ ಕುಲಪತಿ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಮಾಡಲಿದ್ದಾರೆ.
ಪ್ರೊ. ದಶರಥ ಅವರು ದೃಷ್ಟಿಹೀನತೆ ಇದ್ದರೂ ಸಾಮಾನ್ಯರಿಗೆ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕುಲಪತಿಯಾಗಿ ನೇಮಕವಾದರೆ ರಾಜ್ಯದಲ್ಲೇ ಇತಿಹಾಸ ದಾಖಲಾಗಲಿದೆ. ಇಲ್ಲದಿದ್ದರೆ ಪ್ರೊ.ಸಿಂಥಿಯಾ ಅವರಿಗೆ ಅದೃಷ್ಟಒಲಿಯಬಹುದು ಎನ್ನಲಾಗುತ್ತಿದೆ. ಇದರ ನಡುವೆ ಇತರೆ ಇಬ್ಬರಲ್ಲಿ ಯಾರನ್ನಾದರೂ ರಾಜ್ಯಪಾಲರು ನೇಮಕ ಮಾಡಿದರೂ ಆಶ್ಚರ್ಯವಿಲ್ಲ.

ಕುಲಪತಿ ಸ್ಥಾನ ವಹಿಸಿಕೊಳ್ಳಿ: ಕುಲಸಚಿವರಿಗೆ ವೇಣು ಪತ್ರ!

ಹೈಕೋರ್ಟ್‌ ಆದೇಶದಿಂದ ಕುಲಪತಿ ಸ್ಥಾನ ಕಳೆದುಕೊಂಡ ಬಳಿಕ ಪ್ರೊ.ಕೆ.ಆರ್‌.ವೇಣು ಗೋಪಾಲ್‌ ಅವರು ಕುಲ ಸಚಿವ ಪ್ರೊ. ಕೊಟ್ರೇಸ್‌ ಅವರಿಗೆ ಪತ್ರ ಬರೆದು ತಾವೇ ಕುಲಪತಿ ಸ್ಥಾನದ ಉಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಹಾಲಿ ಕುಲಪತಿ ದೀರ್ಘ ರಜೆ ಹೋದ ಸಂದರ್ಭ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಈ ರೀತಿ ಪತ್ರ ಬರೆದು ಉಸ್ತುವಾರಿಯನ್ನು ಮತ್ತೊಬ್ಬರಿಗೆ ವಹಿಸಲು ನಿಯಮಾವಳಿಯಲ್ಲಿ ಅವಕಾಶವಿದೆ. ಆದರೆ, ಇಲ್ಲಿ ವೇಣುಗೋಪಾಲ್‌ ಕುಲಪತಿ ಸ್ಥಾನವನ್ನೇ ಕಳೆದುಕೊಂಡಿರುವಾಗ ಈ ರೀತಿ ಪತ್ರ ಬರೆದಿರುವುದು ಕಾನೂನಾತ್ಮಕವಾಗಿ ಸರಿಯೇ, ಆ ಪತ್ರದ ಆಧಾರದಲ್ಲಿ ತಾನು ಕುಲಪತಿ ಸ್ಥಾನದ ಉಸ್ತುವಾರಿ ವಹಿಸಬಹುದೇ ಎಂದು ಸ್ಪಷ್ಟನೆ ಕೋರಿ ಕುಲಸಚಿವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

Bangalore University ಯಡವಟ್ಟು: ಬಿ.ಕಾಂ ಪರೀಕ್ಷೆ 70 ಅಂಕಗಳಿಗೆ, ಸಿಕ್ಕಿದ್ದು 73 ಮಾರ್ಕ್ಸ್‌!

ಇದೇ ವೇಳೆ, ಏ.8ಕ್ಕೆ ನಿಗದಿಯಾಗಿದ್ದ ಬೆಂ.ವಿವಿಯ ಘಟಿಕೋತ್ಸವವನ್ನು(Convocation) ಮುಂದೂಡುವಂತೆಯೂ ಕೋರಿ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರಿಗೆ ಮತ್ತೊಂದು ಪತ್ರ ಬರೆದಿರುವುದಾಗಿಯೂ ಕುಲಸಚಿವ ಪ್ರೊ.ಕೊಟ್ರೇಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕುಲಪತಿ ನೇಮಕ ರದ್ದಾದರೂ ಮುಗಿಯದ ಗೊಂದಲ

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸ್ಥಾನಕ್ಕೆ ಪ್ರೊ.ವೇಣುಗೋಪಾಲ್‌ ಅವರನ್ನು ನೇಮಕ ಆದೇಶವನ್ನು ಹೈಕೋರ್ಟ್‌(High court) ರದ್ದು ಮಾಡಿ ಎರಡು ದಿನ ಕಳೆದರೂ ಮುಂದೇನು ಮಾಡಬೇಕೆಂದು ಸರ್ಕಾರ ಮತ್ತು ರಾಜ್ಯಪಾಲರಿಂದ ಯಾವುದೇ ನಿರ್ದೇಶನ ಬಾರದ ಹಿನ್ನೆಲೆಯಲ್ಲಿ ವಿವಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದರು. 

ನ್ಯಾಯಾಲಯದ ಆದೇಶವಾದ ತಕ್ಷಣದಿಂದಲೇ ಕುಲಪತಿ ಹುದ್ದೆ ಅಧಿಕೃತವಾಗಿ ಖಾಲಿಯಾಗಿದೆಯಾ ಅಥವಾ ಕೋರ್ಟ್‌ ಆದೇಶದ ಮೇಲೆ ರಾಜ್ಯಪಾಲರಿಂದ(Governor) ಏನಾದರೂ ನಿರ್ದೇಶನಗಳಾಗಬೇಕಾ ಎಂಬ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಈ ಅನಿಶ್ಚಿತತೆಯ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಕೋರಿ ಅಧಿಕಾರಿಗಳು ಸರ್ಕಾರಕ್ಕೆ(Government of Karnataka) ಪತ್ರ ಬರೆದಿದ್ದರು.
 

Latest Videos
Follow Us:
Download App:
  • android
  • ios