Bengaluru University ಪರೀಕ್ಷೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬೆಂಗಳೂರು ವಿವಿ!
ಬ್ಯಾಕ್‌ಲಾಗ್ ಪರೀಕ್ಷೆ ಬರೆಯಲು ಇದ್ದ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ ಬೆಂಗಳೂರು ವಿಶ್ವವಿದ್ಯಾಲಯ ಈಗ ಅವರ ಭವಿಷ್ಯವನ್ನೇ ಅತಂತ್ರ ಸ್ಥಿತಿಗೆ ತಂದಿಟ್ಟಿದೆ.
ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಎ.6): ಏನಾಗಿದೆ ಅಂತಲೇ ಗೊತ್ತಾಗದೇ ಗೊಂದಲವಾಗಿರೋ ಒಂದಿಷ್ಟು ಮಂದಿ. ಅಲ್ಲಿರೋ ಸಿಬ್ಬಂದಿಯನ್ನು ಕೇಳಿದ್ರೂ ಸರಿಯಾಗಿ ಉತ್ತರ ಸಿಗದೆ ಕಂಗಾಲಾಗಿರೋ ಮತ್ತೊಂದಷ್ಟು ವಿದ್ಯಾರ್ಥಿಗಳು. ಇನ್ನು ಇವರನ್ನು ನೋಡಿ ಯಾಕ್ ಹೀಗೆ ಒದ್ದಾಡ್ತಿದ್ದಾರೆ. ಈ ರೀತಿ ಗೊಂದಲಮಯ ವಾತಾವರಣ ಕಂಡುಬಂದಿದ್ದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ. ಇದಕ್ಕೆಲ್ಲಾ ಕಾರಣವಾಗಿದ್ದು ಬ್ಯಾಕ್‌ಲಾಗ್ ಪರೀಕ್ಷೆ (Backlog Examination ) ಬರೆಯಲು ಬಂದಿದ್ದ ವಿದ್ಯಾರ್ಥಿಗಳಿಗೆ, ನಿಮ್ಮ ಪರೀಕ್ಷೆ ಈಗಾಗಲೇ ಮುಗಿದುಹೋಗಿದೆ ಎಂಬ ಉತ್ತರದಿಂದ. ಯಾರೋ ಮಾಡಿದ ತಪ್ಪಿಗೆ ಇವರ ಬಾಳು ಅತಂತ್ರವಾಗಿದೆ.
ಇವರೆಲ್ಲಾ 2016ರ ಬ್ಯಾಚ್‌ನಲ್ಲಿ ಡಿಗ್ರಿ ಸೇರಿದ್ರು. ಲೆಕ್ಕಾಚಾರದ ಪ್ರಕಾರ 2019ಕ್ಕೆ ಇವರ ಡಿಗ್ರಿ ಮುಗಿದಿತ್ತು. ಆದ್ರೆ. ಕಾರಣಾಂತರಗಳಿಂದ ಪರೀಕ್ಷೆಯ ಕೆಲ ವಿಷಯಗಳಲ್ಲಿ ಇವರು ಪಾಸ್ ಆಗದೇ ಬ್ಯಾಕ್‌ಲಾಗ್ ಉಳಿಸಿಕೊಂಡಿದ್ರು. ನಿಯಮದ ಪ್ರಕಾರ ಇವರಿಗೆ 2021ರವರೆಗೂ ಪರೀಕ್ಷೆ ಬರೆಯಲು ಅವಕಾಶ ಇತ್ತು. ಇದ್ದ ಒಂದು ಅವಕಾಶವನ್ನೂ ಬೆಂಗಳೂರು ವಿಶ್ವವಿದ್ಯಾಲಯ (Bangalore University ) ಕಿತ್ತುಕೊಂಡು ಇವರ ಬಾಳಲ್ಲಿ ಆಟವಾಡಿದೆ ಅಂತ ಆರೋಪಿಸಿದ್ದಾರೆ.
ಇನ್ನು, 5ನೇ ಸೆಮಿಸ್ಟರ್‌ನ ವಿಷಯವಾಗಿರೋ Advanced Accounting ಪರೀಕ್ಷೆ ವಿಚಾರವಾಗಿ ತೀವ್ರವಾದ ಗೊಂದಲ ಉಂಟು ಮಾಡಿದ್ದಾರೆ. ಏಪ್ರಿಲ್ 1 ರಂದು Elective Paper 1 ರ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 5ರಂದು Elective Paper 1 Advanced Accounting ಎಂದು ನಮೂದು ಮಾಡಲಾಗಿದೆ.
ಸಾಲು ಸಾಲು ರಜೆ, ಶಾಲೆಗಳಲ್ಲಿ Covid ಲಸಿಕೆ ಅಭಿಯಾನಕ್ಕೆ ಹಿನ್ನಡೆ
ಬ್ಯಾಕ್‌ಲಾಗ್ ಇದ್ದ ವಿದ್ಯಾರ್ಥಿಗಳು ಇಂದು ತಮ್ಮ ಪರೀಕ್ಷೆ ಇದೆ ಅಂತ ಕೇಂದ್ರಗಳತ್ತ ಹೋದಾಗ ನಿಮ್ಮ ಪರೀಕ್ಷೆ ಏಪ್ರಿಲ್ 1ರಂದೇ ನಡೆದುಹೋಗಿದೆ ಎಂದಿದ್ದಾರೆ. ಇಂದು ಇದ್ದ ಪರೀಕ್ಷೆ ಕೇವಲ ಫ್ರೆಶರ್‌ಗಳಿಗೆ, ನೀವೆಲ್ಲಾ ರೀಪೀಟರ್ಸ್ ಆಗಿರೋದ್ರಿಂದ 1ನೇ ತಾರಿಖಿನಂದೇ ಮುಗಿದುಹೋಗಿದೆ ಎಂದಿದ್ದಾರೆ. ಅತ್ತ ಕಾಲೇಜುಗಳಿಂದಲೂ ಸೂಕ್ತ ಮಾಹಿತಿ ಇಲ್ಲದೇ, ಬೆಂಗಳೂರು ವಿವಿಯಿಂದಲೂ ಮಾಹಿತಿಯಿಲ್ಲದೇ ವಿದ್ಯಾರ್ಥಿಗಳ ಬಾಳು ಅತಂತ್ರವಾಗಿದೆ.
GOVERNMENT MODEL SCHOOL: ಸರ್ಕಾರಿ ಮಕ್ಕಳಿಗೆ ‘ಸ್ಪೋಕನ್ ಇಂಗ್ಲಿಷ್’: ನಾಗೇಶ್
ವರ್ಷದ ಡಿಗ್ರೀ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಇದ್ದ ಕೊನೆಯ ಚಾನ್ಸ್ ಇದಾಗಿತ್ತು. ಇದನ್ನು ಯೂನಿವರ್ಸಿಟಿಯ ತಪ್ಪಿನಿಂದಾಗಿ ಕಳೆದುಕೊಂಡಿದ್ದಾರೆ. ಮತ್ತೆ ಇವರು ಪರೀಕ್ಷೆ ಬರೆಯಬೇಕಂದ್ರೆ 4 ವರ್ಷದ ಕೋರ್ಸ್‌ಗೆ ಹೊಸ ಅಡ್ಮೀಶನ್ ಪಡೆಯಬೇಕಿದೆ. ಇದೇ ವಿಚಾರವಾಗಿ ಬೆಂಗಳೂರು ವಿವಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪರ್ಕ ಮಾಡಿದ್ರೂ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬೆಂಗಳೂರು ವಿವಿ ಅದ್ಯಾವಾಗ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಂತ ಕೆಲಸ ಮಾಡೋತ್ತೋ, ಆ ದೇವನೇ ಬಲ್ಲ.