ಐಐಎಂ-ಎ ವಿದ್ಯಾರ್ಥಿ ಯುಗಾಂತರ್ ಗುಪ್ತಾ ಚಾಟ್‌ಜಿಪಿಟಿ ಬಳಸಿ ಮಾರ್ಕೆಟಿಂಗ್ ಪ್ರಾಜೆಕ್ಟ್ ಪೂರ್ಣಗೊಳಿಸಿ ಎ+ ಪಡೆದಿದ್ದಾರೆ. ಕ್ಷೇತ್ರಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿ, ಚಾಟ್‌ಜಿಪಿಟಿಗೆ ನೀಡಿ ಪ್ರಾಜೆಕ್ಟ್ ಸಿದ್ಧಪಡಿಸಿದರು. ಎಐ ಬಳಕೆಗೆ ಕಾಲೇಜಿನಲ್ಲಿ ಅವಕಾಶವಿದ್ದರೂ, ಎ+ ಅಂಕ अप्रत्याशित ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಎಐ ಬಳಕೆಯ ಸಲಹೆಗಳನ್ನೂ ನೀಡಿದ್ದಾರೆ.

ಅಹ್ಮದಾಬಾದ್‌: ಕೃತಕ ಬುದ್ಧಿಮತ್ತೆ ಚಾಟ್‌ ಜಿಪಿಟಿ ಬಳಸಿ ಇಂಟರ್ವ್ಯೂ ಎದುರಿಸಿ ಯಶಸ್ವಿಯಾಗಿದ್ದಾಗಿ ಕೆಲವರು ಹೇಳಿಕೊಂಡಿದ್ದರು, ಇದೀಗ ಐಐಎಂ ಅಹ್ಮದಾಬಾದ್‌ನ ವಿದ್ಯಾರ್ಥಿಯೋರ್ವ ತಾನ ಚಾಟ್‌ಜಿಪಿಟಿ ಬಳಸಿ ಪ್ರಾಜೆಕ್ಟ್ ಮಾಡಿದ್ದು, ಎ+ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅಹಮದಾಬಾದ್‌ನ ವಿದ್ಯಾರ್ಥಿ ಯುಗಾಂತರ್‌ ಗುಪ್ತಾ ತಮ್ಮ ಸಂಪೂರ್ಣ ಮಾರ್ಕೆಟಿಂಗ್ ಪ್ರಾಜೆಕ್ಟ್ ಅನ್ನು ಚಾಟ್‌ಜಿಪಿಟಿಯನ್ನು ಬಳಸಿ ಮಾಡಿದ್ದಲ್ಲದೇ ಎ+ ಗಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಲಿಂಕ್ಡಿನ್‌ನಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದು, ಅವರ ಈ ಪೋಸ್ಟ್‌ ಅನೇಕರಲ್ಲಿ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.

ವಿದ್ಯಾರ್ಥಿಯೇ ಹೇಳುವಂತೆ ಕಾಲೇಜಿನಲ್ಲಿ, 'ಕೃತಿಚೌರ್ಯವನ್ನು ನಿಷೇಧಿಸಲಾಗಿದೆ, ಆದರೆ ಎಐ ಬಳಕೆಗೆ ಅನುಮತಿ ನೀಡಲಾಗಿದೆ.' ಭಾರತದ ಅತ್ಯಂತ ಸ್ಪರ್ಧಾತ್ಮಕ ಬ್ಯುಸಿನೆಸ್‌ ಶಾಲೆಗಳಲ್ಲಿ ಒಂದಾದ ಐಐಎಂ ಅಹ್ಮದಾಬಾದ್‌ನಲ್ಲಿ AI ಬಳಕೆಯೂ ಅವರಿಗೆ ಹೆಚ್ಚಿನ ಅಂಕಗಳನ್ನು ತರುತ್ತದೆ ಎಂದು ಅವರು ಭಾವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡುವುದೆಂದರೆ ಅದು ಸಂಪೂರ್ಣವಾಗಿ ಅಸೈನ್‌ಮೆಂಟ್, ಪ್ರಾಜೆಕ್ಟ್ ಮತ್ತು ರಿಪೋರ್ಟ್‌ಗಳಿಂದ ತುಂಬಿರುತ್ತದೆ. ಇಲ್ಲಿ ಕೃತಿಚೌರ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಆದರೆ AI ಬಳಕೆಗೆ ಅನುಮತಿ ಇದೆ. ಆದರೆ ಇದರ ಬಳಕೆಯಿಂದ ನಾನು ಉತ್ತಮ ಅಂಕ ಪಡೆಯಬಹುದು ಎಂದು ಊಹೆ ಮಾಡಿರಲಿಲ್ಲ ಎಂದು ಅವರು ಹೇಳಿದರು.

ಐಐಎಂ ಅಹಮದಾಬಾದ್‌ನಲ್ಲಿ ಎ+ ಶ್ರೇಣಿಗಳು ಸಿಗುವುದು ಬಹಳ ಅಪರೂಪವಂತೆ, ಇವು ಹೆಚ್ಚಾಗಿ ಮೊದಲ ಟಾಪ್ 5 ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತವೆ. ಹಾಗೂ ಅಧ್ಯಾಪಕರ ನೀತಿಯಿಂದಾಗಿ ಕೆಲವು ಸಂದರ್ಭಗಳಲ್ಲಿ ಅವುಗಳನ್ನು ನೀಡುವುದಿಲ್ಲ. ಆದರೂ ಎಐ ಸಹಾಯದಿಂದ ಮಾಡಿದ ತನ್ನ ಪ್ರಾಜೆಕ್ಟ್ ಎ+ ಅಂಕ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ. ಅರ್ಥಹೀನವಾಗಿದ್ದರೂ A+ ಯಾವಾಗಲೂ ಪದಕದಂತೆ ಭಾಸವಾಗುತ್ತದೆ. ಆದರೆ ನಾನು ಇದಕ್ಕಾಗಿ ಹೆಚ್ಚು ಸಮಯವನ್ನೂ ವ್ಯಯಿಸಿರಲಿಲ್ಲ. ಗ್ರೂಪ್‌ಗಳಲ್ಲಿ ಸ್ಟಡಿ ಮಾಡ್ತಿದ್ದೆವು ತಡರಾತ್ರಿಯವರೆಗೆ ಚರ್ಚೆ ಮಾಡುತರ್ತಿದ್ದೆವು. ಸೌಂದರ್ಯವರ್ಧಕಗಳ ಮೇಲೆ ಮಾರ್ಕೆಟಿಂಗ್ ತಮ್ಮ ಪ್ರಾಜೆಕ್ಟ್‌ ವಿಚಾರವಾಗಿತ್ತು. ಇದಕ್ಕಾಗಿ ಹತ್ತಿರವ ಮಾಲ್‌ಗೆ ಹೋದೆ, ಫಾರೆಸ್ಟ್ ಎಸೆನ್ಷಿಯಲ್ಸ್‌ನಿಂದ ಸ್ಮಿಟನ್‌ವರೆಗಿನ ಸುಮಾರು ಎಂಟು ಸೌಂದರ್ಯವರ್ಧಕ ಅಂಗಡಿಗಳಿಗೆ ಭೇಟಿ ನೀಡಿದೆ, ಖರೀದಿದಾರರನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದೆ. ಶಾಪ್‌ಗಳಲ್ಲಿ ಖರೀದಿ ಮಾಡುವ ಗ್ರಾಹಕರು ಕೇಳಿದ ಪ್ರಶ್ನೆಗಳನ್ನು ಆಲಿಸಿದೆ, ಅವರು ಖರೀದಿಸುವ ರೀತಿಯನ್ನು ನೋಡಿದೆ ಹಾಗೂ ಕಾಲ್ಪನಿಕ ಗೆಳತಿಗಾಗಿ ಉಡುಗೊರೆಗಳನ್ನು ಖರೀದಿಸುವ ನೆಪದಲ್ಲಿ ಮಾರಾಟಗಾರರೊಂದಿಗೆ ಸಂಭಾಷಣೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಅಲ್ಲಿನ ಪ್ರತಿ ಮಾತುಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಬಳಿಕ ಕ್ಯಾಂಪಸ್‌ಗೆ ಬಂದು ಅದನ್ನು ಚಾಟ್‌ಜಿಪಿಟಿಗೆ ನೀಡಿದ್ದಾರೆ. ಅಲ್ಲದೇ ಪ್ರಾಜೆಕ್ಟ್‌ನ ಅಗತ್ಯತೆಯನ್ನು ವಿವರಿಸಿದ್ದಾರೆ ಉಳಿದ ಕೆಲಸವನ್ನು ಎಐಗೆ ಮಾಡಲು ಬಿಟ್ಟಿದ್ದಾರೆ. ಇದಾದ ನಂತರ ಬಂದ ಫಲಿತಾಂಶಕ್ಕೆ ಈಗ ಎ+ ಗ್ರೇಡ್ ಸಿಕ್ಕಿದೆ.

ಯುಗಾಂತರ್‌ ಗುಪ್ತಾ ತಮ್ಮ ಪೋಸ್ಟ್‌ನಲ್ಲಿ ಅನ್ನು ಶೈಕ್ಷಣಿಕ ಕ್ಷೇತ್ರದಲ್ಲಿ AI ಬಳಸುವ ವಿದ್ಯಾರ್ಥಿಗಳಿಗೆ ಮೂರು ಪ್ರಮುಖ ಸಲಹೆ ನೀಡಿದ್ದಾರೆ.
1. ಬರೆಯುವ ಸಮಯವನ್ನು ವ್ಯರ್ಥ ಮಾಡಬೇಡಿ ಎಐ ಏನನ್ನು ರೆಡಿ ಮಾಡುತ್ತದೆ ಎಂಬುದನ್ನು ಪರಿಶೀಲಿಸಲು ಆ ಸಮಯವನ್ನು ಕಳೆಯಿರಿ.
2.AI ವಿಷಯವನ್ನು ನಿಮ್ಮದಾಗಿಸಲು ಪ್ರಯತ್ನಿಸಬೇಡಿ, ನಿಜವಾದ ಮನುಷ್ಯರೊಂದಿಗೆ ಮಾತನಾಡಿ.
3. ನಿಮ್ಮ ಚರ್ಚೆಗಳನ್ನು ಗೆಳೆಯರ ಗುಂಪುಗಳಿಗೆ ಸೀಮಿತಗೊಳಿಸಬೇಡಿ, ವೃತ್ತಿಪರರನ್ನು ಸಂಪರ್ಕಿಸಿ ಮತ್ತು ಅವರಿಂದ ಕಲಿಯಿರಿ.

ಇದು ಪ್ರಾಜೆಕ್ಟ್ ಮಾಡುವುದಕ್ಕಾಗಿ ಬಹಳ ಸಮಯ ವ್ಯರ್ಥ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಲ್ಲದು. ಆದರೆ ಯಂತ್ರಗಿಂತಲೂ ಮನುಷ್ಯರ ಅನುಭವ ಬೇರೆಯೇ ಆಗಿರುತ್ತದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.