Asianet Suvarna News Asianet Suvarna News

RRB NTPC result date: ಜನವರಿ 15ರೊಳಗೆ ರೈಲ್ವೇ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟ

  • NTPC ಕಂಪ್ಯೂಟರ್ ಆಧಾರಿತ ಪರೀಕ್ಷಾ ಫಲಿತಾಂಶದ ದಿನಾಂಕ ಅಧಿಸೂಚನೆ ಪ್ರಕಟ
  • ಜನವರಿ 15, 2022 ರೊಳಗೆ ಫಲಿತಾಂಶ ಪ್ರಕಟ
  • CBT-2 ಫೆಬ್ರವರಿ 14 ರಿಂದ 18ರೊಳಗೆ ನಡೆಸಲು ತೀರ್ಮಾನ
     
rrb ntpc result date CBT-2 exam schedule announced
Author
Bengaluru, First Published Dec 6, 2021, 3:34 PM IST

ನವದೆಹಲಿ (ಡಿ.6): ರೈಲ್ವೇ ನೇಮಕಾತಿ ಮಂಡಳಿ (RRB) 2019ರ NTPC ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1)  ಮತ್ತು CBT-2 ರ ಪರೀಕ್ಷಾ ಫಲಿತಾಂಶದ ದಿನಾಂಕದ ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. CBT-1ರ ಫಲಿತಾಂಶವನ್ನು ಜನವರಿ 15, 2022 ರೊಳಗೆ ಪ್ರಕಟಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ http://rrbald.gov.in/ ವೆಬ್‌ಸೈಟ್ಗೆ ಭೇಟಿ ನೀಡಬಹುದು. CBT-1 ರ ಪರೀಕ್ಷೆಯಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯು (CBT-2) ಫೆಬ್ರವರಿ 14 ರಿಂದ 18ರೊಳಗೆ ನಡೆಸಲು ತೀರ್ಮಾನಿಸಲಾಗಿದ್ದು, ಬದಲಾವಣೆ ಇದ್ದರೆ ಸರಕಾರದ ನಿಯಮಗಳಿಗೆ ಮತ್ತು ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. 

ರೈಲ್ವೆ ನೇಮಕಾತಿ ಮಂಡಳಿಯು ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (RRB NTPC )  ಕಂಪ್ಯೂಟರ್ ಆಧಾರಿತ ಹಂತ 1 ಪರೀಕ್ಷೆಯನ್ನು ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ ನಡೆಸಿತ್ತು. ವರದಿಗಳ ಪ್ರಕಾರ ಸುಮಾರು 1.9 ಕೋಟಿ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ.  COVID-19 ಎರಡನೇ ಅಲೆಯಿಂದ  ಮೊದಲ CBT ಯ ಏಳನೇ ಹಂತವು ವಿಳಂಬವಾಯಿತು. ಪರೀಕ್ಷೆಯನ್ನು ಮತ್ತೆ ನಿಗದಿಪಡಿಸಿ ಜುಲೈನಲ್ಲಿ ನಡೆಸಲಾಯಿತು.

ಕೋವಿಡ್ ಭಯ: ಶೇ.90 ಜನರಿಗೆ ಇಷ್ಟವಿಲ್ಲದ ಉದ್ಯೋಗದಲ್ಲಿರಲು ಸಿದ್ಧರಿಲ್ಲ!

RRB NTPC ಫಲಿತಾಂಶದ ಘೋಷಣೆಯ ನಂತರ, RRB ಗಳು ಮೊದಲ CBT ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡುತ್ತವೆ. RRB NTPC CBT-2 ಪ್ರವೇಶ ಕಾರ್ಡ್ ಅನ್ನು RRB ಗಳ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ನೋಂದಣಿ ವಿವರಗಳನ್ನು ಬಳಸಿಕೊಂಡು ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

BSF Recruitment: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆರ್‌ಆರ್‌ಬಿ ಎನ್‌ಟಿಪಿಸಿ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 35.208 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಈ ಹುದ್ದೆಗಳ ಪೈಕಿ ಜೂನಿಯರ್ ಕ್ಲರ್ಕ್‌, ಟೈಪಿಸ್ಟ್‌, ಅಕೌಂಟಂಟ್ಸ್‌, ಗ್ರೂಪ್‌ ಡಿ ಮತ್ತು ಇತರೆ ಹುದ್ದೆಗಳಿವೆ. ಬಹುಸಂಖ್ಯಾತ ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳು 45 ರಿಂದ 80 ಅಂಕಗಳನ್ನು ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮೀಸಲಾತಿ ಕೆಟಗರಿಗಳಿಗೆ 60 ಕ್ಕೆ ಕಟ್‌ ಆಫ್‌ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ.

Land Surveyor Recruitment: 3 ಸಾವಿರ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರ್‌ಆರ್‌ಬಿ ಎನ್‌ಟಿಪಿಸಿ ಸಿಬಿಟಿ ಪರೀಕ್ಷೆ ಮಾದರಿ ಹೇಗಿರುತ್ತದೆ?: 2 ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) ಆರ್‌ಆರ್‌ಬಿ ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳಿಗೆ ನಡೆಸಲಾಗುತ್ತದೆ. ಅವುಗಳಲ್ಲಿ ಸ್ಕಿಲ್‌ ಟೆಸ್ಟ್‌ ಸಹ ಒಂದಾಗಿದ್ದು, ಸ್ಟೇಷನ್‌ ಮಾಸ್ಟರ್, ಟ್ರಾಫಿಕ್ ಅಸಿಸ್ಟಂಟ್ ಹುದ್ದೆಗಳಿಗೆ ನಡೆಸಲಾಗುತ್ತದೆ. ಜೂನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌, ಜೂನಿಯರ್ ಟೈಮ್‌ ಕೀಪರ್, ಅಕೌಂಟ್ಸ್‌ ಕ್ಲರ್ಕ್‌ ಕಮ್‌ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌, ಜೂನಿಯರ್ ಅಕೌಂಟ್ ಅಸಿಸ್ಟಂಟ್‌ ಕಮ್‌ ಟೈಪಿಸ್ಟ್‌ ಮತ್ತು ಸೀನಿಯರ್ ಟೈಮ್‌ ಕೀಪರ್‌ ಹುದ್ದೆಗಳಿಗೆ ಟೈಪಿಂಗ್ ಸ್ಕಿಲ್ ಟೆಸ್ಟ್ ನಡೆಸಲಾಗುತ್ತದೆ. 

Central Government Jobs: ಇಂಡಿಯನ್ ಕೋಸ್ಟ್‌ ಗಾರ್ಡ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಶುರು

ಎರಡು ಹಂತಗಳ ಸಿಬಿಟಿ ಪರೀಕ್ಷೆಯ ನಂತರ ಸಾಮಾನ್ಯವಾಗಿ ಮೂಲ ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ಎಕ್ಸಾಮಿನೇಷನ್‌ ನಡೆಸಲಾಗುತ್ತದೆ. ಟ್ರೈನ್ ಕ್ಲರ್ಕ್‌, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್‌, ಗೂಡ್ಸ್‌ ಗಾರ್ಡ್‌, ಸೀನಿಯರ್ ಕಮರ್ಷಿಯಲ್ ಕಮ್‌ ಟಿಕೆಟ್ ಕ್ಲರ್ಕ್‌, ಕಮರ್ಷಿಯಲ್ ಅಪ್ರೆಂಟಿಸ್ ಹುದ್ದೆಗಳಿಗೂ ಎರಡು ಹಂತದ ಸಿಬಿಟಿ ಪರೀಕ್ಷೆ ಜತೆಗೆ, ಡಾಕ್ಯುಮೆಂಟ್‌ ವೆರಿಫಿಕೇಶನ್‌ ಮತ್ತು ಮೆಡಿಕಲ್ ಟೆಸ್ಟ್‌ ನಡೆಸಲಾಗುತ್ತದೆ.

Follow Us:
Download App:
  • android
  • ios