Asianet Suvarna News Asianet Suvarna News

JEE ಪಾಸಾದರೂ ಶುಲ್ಕ ಕಟ್ಟಲು ಅಸಾಧ್ಯ : ದಲಿತ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್!

*IIT JEE ಪರಿಕ್ಷೇ ಪಾಸ್‌ : ಶುಲ್ಕ ಕಟ್ಟಲು ಹಣದ ಕೊರತೆ
*ಸಹೋದರಿಯಿಂದ ವಿದ್ಯಾರ್ಥಿಗೆ  ಹಣ ವರ್ಗಾವಣೆ
*ತಾಂತ್ರಿಕ ದೋಷದಿಂದ ಕಾಲೇಜಿಗೆ ಹಣ ಪಾವತಿ ವಿಳಂಬ
*ದಲಿತ ಹುಡುಗನ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್!

Supreme Court comes to the aid of Dalit student missed out on seat due to non payment of fees mnj
Author
Bengaluru, First Published Nov 18, 2021, 7:41 PM IST

ಮುಂಬೈ(ನ.18): ಇಂಜೀನಿಯರಿಂಗ್‌ (Engineering) ಕೋರ್ಸ್‌ಗಳಿಗೆ ದಾಖಲಾಗಲು ನಡೆಸುವ ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಟಿತ JEE ಪರಿಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಅರ್ಹತೆ ಪಡೆದುಕೊಂಡಿದ್ದ. ಆದರೆ ತಾಂತ್ರಿಕ ದೋಷಗಳಿಂದಾಗಿ ಸರಿಯಾದ ಸಮಯಕ್ಕೆ ಕಾಲೇಜು ಶುಲ್ಕ (College Fees) ಕಟ್ಟಲು  ಸಾಧ್ಯವಾಗಿರಲಿಲ್ಲ. ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (IIT Bombay) ಅರ್ಹತೆ ಪಡೆದಿದ್ದರೂ ಕಾಲೇಜು ಶುಲ್ಕವನ್ನು ಪಾವತಿಸಲು ವಿಫಲವಾದ ಕಾರಣ ಸೀಟು ತಪ್ಪಿಸಿಕೊಂಡ ದಲಿತ ಸಮುದಾಯದ 17 ವರ್ಷದ ಬಾಲಕನಿಗೆ  ಸುಪ್ರೀಂ ಕೋರ್ಟ್ ಗುರುವಾರ ಬೆನ್ನೆಲುಬಾಗಿ ನಿಂತಿದೆ. 

ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ತಪ್ಪಿಸಿದ ಇಸ್ರೋ!

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ (DY Chandrachud) ಮತ್ತು ಎಎಸ್ ಬೋಪಣ್ಣ (AS Bopanna) ಅವರನ್ನೊಳಗೊಂಡ ಪೀಠವು, ಬಾಲಕನ ಪ್ರಕರಣವು ಕಾನೂನಿನಲ್ಲಿ ದುರ್ಬಲವಾಗಿದ್ದರೂ, ನ್ಯಾಯಾಲಯವು ಮಾನವೀಯ ಧೋರಣೆಯನ್ನು ತೋರಿಸಬೇಕು ಮತ್ತು ಅಂತಹ ಸಂದರ್ಭಗಳಲ್ಲಿ ಕಾನೂನಿನಿಂದ ಮೇಲೇರಬೇಕು ಎಂದು ಹೇಳಿದರು. "ನಾವು ಏನನ್ನಾದರೂ ಮಾಡಲು ಸಾಧ್ಯವಿಲ್ಲವೇ? ನಾವು ಅವರಿಗೆ ಐದು ವಿಭಿನ್ನ ಕಾನೂನು ಅಂಶಗಳ ಬಗ್ಗೆ ತಿಳಿಸಬಹುದು. ಆದರೆ ಇದು ಮಾನವೀಯ ವಿಷಯವಾಗಿದೆ. ಕೆಲವೊಮ್ಮೆ ನಾವು ಕಾನೂನನ್ನು ದಾಟಿ ಮುಂದೆ ಸಾಗಬೇಕು" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

10 ವರ್ಷಗಳ ನಂತರ ರಾಷ್ಟ್ರದ ನಾಯಕನಾಗಬಹುದು!

"ಇವನು ಐಐಟಿ ಬಾಂಬೆ ಕಾಲೇಜಿಗೆ ಅರ್ಹತೆ ಪಡೆದ ದಲಿತ ಹುಡುಗ. ನಮಗೆ ತಿಳಿದಿರುವಂತೆ ಅವನು 10 ವರ್ಷಗಳ ನಂತರ ರಾಷ್ಟ್ರದ ನಾಯಕನಾಗಬಹುದು" ಎಂದು ನ್ಯಾಯಾಧೀಶರು ಹೇಳಿದರು.  ನಂತರ ನ್ಯಾಯಾಲಯವು ಅರ್ಜಿದಾರ ಹುಡುಗನಿಗೆ ಅವಕಾಶ ಕಲ್ಪಿಸಬಹುದೇ ಎಂದು ಪರಿಶೀಲಿಸಲು ಐಐಟಿ ಬಾಂಬೆಯ ಪ್ರವೇಶ ಪಟ್ಟಿಯ ವಿವರಗಳನ್ನು ಪಡೆಯಲು ಕೇಂದ್ರ ಸರ್ಕಾರದ ವಕೀಲರನ್ನು (Lawyer) ಕೇಳಿತು.

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

ನ್ಯಾಯಮೂರ್ತಿ ಚಂದ್ರಚೂಡ್ ಅವರು ಪ್ರತಿವಾದಿಗಳ ಪರ ಹಾಜರಾದ ವಕೀಲರಿಗೆ ಈ ಪ್ರಕರಣವನ್ನು ಪೂರ್ವನಿದರ್ಶನವಾಗಿ ಬಳಸಲಾಗುವುದಿಲ್ಲ ಎಂದು ಭರವಸೆ ನೀಡಿದರು. " ಈ ನಿರ್ದಿಷ್ಟ ಪ್ರಕರಣಕ್ಕಾಗಿ ನಾವು ಆರ್ಟಿಕಲ್ 142 ರ ಅಡಿಯಲ್ಲಿ ನಮ್ಮ ವಿಶೇಷ ಅಧಿಕಾರವನ್ನು ಬಳಸುತ್ತಿದ್ದೇವೆ" ಎಂದು ಅವರು ಹೇಳಿದರು. ಅರ್ಜಿದಾರರು 2021 ರ JEE ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಅಖಿಲ ಭಾರತ ಶ್ರೇಣಿ (CRL) 25,894 Rank ಮತ್ತು SC (ಪರಿಶಿಷ್ಟ ಜಾತಿ) 864 Rank ಗಳಿಸಿದ್ದಾರೆ. ಹಾಗೂ ಅಕ್ಟೋಬರ್ 27 ರಂದು ಐಐಟಿ ಬಾಂಬೆ ಸಿವಿಲ್ ಎಂಜಿನಿಯರಿಂಗ್ (Civil Engineering) ವಿಷಯದಲ್ಲಿ ವಿದ್ಯಾರ್ಥಿಗೆ ಸೀಟು ಹಂಚಿಕೆಯಾಗಿದೆ.

ಶುಲ್ಕ ಪಾವತಿಸಲು ಹಣದ ಕೊರತೆ!

ಅರ್ಜಿಯ ಪ್ರಕಾರ, ಸೀಟು ಹಂಚಿಕೆಯ ನಂತರ, ಅರ್ಜಿದಾರರು ಅಕ್ಟೋಬರ್ 29 ರಂದು JEE ಸೀಟು ಹಂಚಿಕೆ ಪ್ರಾಧಿಕಾರದ (JOSAA) ವೆಬ್‌ಸೈಟ್‌ಗೆ ಲಾಗ್ ಇನ್ (Log in) ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆದರೆ, ಅರ್ಜಿದಾರರಿಗೆ ಸೀಟು ಸ್ವೀಕಾರ ಶುಲ್ಕ ಪಾವತಿಸಲು ಹಣದ ಕೊರತೆ ಉಂಟಾಗಿದೆ.  ಅವರ ಸಹೋದರಿ ಅಕ್ಟೋಬರ್ 30 ರಂದು ಹಣವನ್ನು ವಿದ್ಯಾರ್ಥಿಗೆ ವರ್ಗಾಯಿಸಿದ್ದಾರೆರ ಮತ್ತು ಅರ್ಜಿದಾರರು ಸುಮಾರು 10 ರಿಂದ 12 ಬಾರಿ ಪಾವತಿ ಮಾಡಲು ಪ್ರಯತ್ನಿಸಿದರು ಆದರೆ ಅದನ್ನು ಮಾಡಲು ವಿಫಲರಾಗಿದ್ದಾರೆ.

 ತಾಂತ್ರಿಕ ದೋಷದಿಂದ ಪಾವತಿ  ಅಸಾಧ್ಯ!

"ಅರ್ಜಿದಾರರು ತಮ್ಮ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Stae Bank of India)  ಬ್ಯಾಂಕ್‌ನ  ಕಾರ್ಡ್  ತಾಂತ್ರಿಕ ದೋಷದಿಂದ ಪಾವತಿ ಮಾಡಲು ಸಾಧ್ಯವಾಗಲಿಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮರುದಿನ, ಅಂದರೆ ಅಕ್ಟೋಬರ್ 31 ರಂದು, ಅರ್ಜಿದಾರರು ಸೈಬರ್ ಕೆಫೆಯಿಂದ (Cyber Cafe) ಪಾವತಿ ಮಾಡಲು ಪ್ರಯತ್ನಿಸಿದರು ಆದರೆ ಅದು ಫಲ ನೀಡಲಿಲ್ಲ. ಹೀಗಾಗಿ ನಿಗದಿತ ಗಡುವಿನೊಳಗೆ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ನಂತರ, ಅವರು ಭೌತಿಕವಾಗಿ ಐಐಟಿ ಖರಗ್‌ಪುರಕ್ಕೆ ಹೋಗಿ ಮತ್ತು ಪರ್ಯಾಯ ಪಾವತಿ ವಿಧಾನವನ್ನು ಸ್ವೀಕರಿಸಿ ಮತ್ತು ತನಗೆ ಸೀಟು ನೀಡುವಂತೆ ವಿನಂತಿಸಿದರು ಆದರೆ ಅಲ್ಲಿ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ನಂತರ ಅರ್ಜಿದಾರರು ಪರಿಹಾರಕ್ಕಾಗಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು ಆದರೆ ನ್ಯಾಯಾಲಯವು ತಾಂತ್ರಿಕ ದೃಷ್ಟಿಕೋನವನ್ನು ಪರಿಗಣಿಸಿ  ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ವಿದ್ಯಾರ್ಥಿಯ ನೆರವಿಗೆ ನಿಂತಿದೆ. 

ಪ್ರತಿ ಅಭ್ಯರ್ಥಿಗೆ ಐಐಟಿ ಜೆಜೆಇಇಗೆ ಎರಡು ಪ್ರಯತ್ನಗಳನ್ನು ಅನುಮತಿಸಲಾಗಿದೆ ಮತ್ತು ಇದು ಅರ್ಜಿದಾರರ ಎರಡನೇ ಪ್ರಯತ್ನವಾಗಿದೆ ಎಂದು ಮನವಿಯಲ್ಲಿ ಹೈಲೈಟ್ ಮಾಡಲಾಗಿದೆ.

Follow Us:
Download App:
  • android
  • ios