Asianet Suvarna News Asianet Suvarna News

ಕೋವಿಡ್ ಭಯ: ಶೇ.90 ಜನರಿಗೆ ಇಷ್ಟವಿಲ್ಲದ ಉದ್ಯೋಗದಲ್ಲಿರಲು ಸಿದ್ಧರಿಲ್ಲ!

* ಕೋವಿಡ್ ಕಾಲದಲ್ಲಿ ಉದ್ಯೋಗಗಳನ್ನು ಬದಲಿಸುತ್ತಿರುವ ಜನ
* ಇಷ್ಟವಿಲ್ಲದ ಉದ್ಯೋಗದಲ್ಲಿರುವುದು ಅರ್ಥವಿಲ್ಲ ಎನ್ನುವ  ಅಭಿಪ್ರಾಯ
* ಸಮೀಕ್ಷೆಯೊಂದು ಹೊರ ಹಾಕಿದ ಮಾಹಿತಿ

Life is too short to stay in a job they weren't passionate about, Says 90% people
Author
Bengaluru, First Published Dec 5, 2021, 4:57 PM IST

ಬೆಂಗಳೂರು, (ಡಿ.05): ಮಹಾಮಾರಿ ಕೋವಿಡ್ ವೈರಸ್ (Covid-19) ಜಗತ್ತಿನಲ್ಲಿ ಹುಟ್ಟಿಕೊಂಡಿದ್ದೇ ತಡ, ಎಲ್ಲ ವ್ಯವಸ್ಥೆಗಳು ಬುಡಮೇಲಾಗಿಬಿಟ್ಟಿವೆ. ಯಾವಾಗ ಜೀವ ಹೋಗುತ್ತೋ.. ಈ ಲೈಫು (Life) ಇಷ್ಟೇನೆ ಎಂಬ ನಿರಾಶದಾಯಕ ಮಾತುಗಳು ಪದೇ ಪದೇ ಕೇಳಿಬರ್ತಿವೆ.  

ಕೋವಿಡ್ ಬರೋ ಮುಂಚೆ ಹೃದಯಾಘಾತದಿಂದಲೋ..ಎಚ್ಐವಿ, ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಗಳಿಂದ ಹೆಚ್ಚಾಗಿ ಸಾವನ್ನಪ್ಪುತ್ತಿದ್ದರು. ಆದ್ರೀಗ ಕಳೆದೆರಡು ವರ್ಷಗಳಿಂದ ಆ ಮನಸ್ಥಿತಿ ಸಂಪೂರ್ಣ ಬದಲಾಗಿ ಹೋಗಿದೆ. ಆ ಮಾರಣಾಂತಿಕ ಖಾಯಿಲೆಗಳಿಗಿಂತ ಭೀಕರವಾಗಿ ಕೋವಿಡ್ ಕಹಿನೆನಪು ಕಾಡುತ್ತಿವೆ.

ಬಿಟ್ಟು ಬಿಡದೇ ಹೊಸ ಹೊಸ ರೂಪ ಪಡೆದು ಕೋವಿಡ್ (Covid-19) ವೈರಸ್ ಬರ್ತಾನೆ ಇರೋದು ಜೀವನದ ಮೇಲಿನ ಆಸೆಯನ್ನ ಕೈಚೆಲ್ಲಿ ಕೂರುವಂತೆ ಮಾಡಿದೆ. ಹೀಗಾಗಿಯೇ ಜಗತ್ತಿನಾದ್ಯಂತ ಬಹುತೇಕ ಯುವಕರು ವೃತ್ತಿಜೀವನ (Proffessional Life)ದ ಮೇಲಿನ ಅವಲಂಬನೆಯನ್ನ ಕೈಬಿಡುತ್ತಿದ್ದಾರೆ.

ಉದ್ಯೋಗಗಳನ್ನ ತ್ಯಜಿಸುವವರ ಸಂಖ್ಯೆ ಹೆಚ್ಚಾಗ್ತಿದೆ.  ಮೊದಲನೆ ಅಲೆಯ ಸಂದರ್ಭದಲ್ಲಿ ಕೋವಿಡ್ ವೈರಸ್ ಭಯದಿಂದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸದಿಂದ ವಿಮುಖರಾದರು. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಸಹಸ್ರಾರು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು. ಶಿಶುಪಾಲನಾ ಸಮಸ್ಯೆಗಳು ಅಥವಾ ಅನಾರೋಗ್ಯಕ್ಕೆ ಒಳಗಾಗುವ ಭಯದಂತಹ ವಿಭಿನ್ನ ಕಾರಣಗಳಿಗಾಗಿ ಕೆಲವರು ಉದ್ಯೋಗಳನ್ನು ಸಂಪೂರ್ಣವಾಗಿ ತೊರೆದರು.  ಸಾಂಕ್ರಾಮಿಕ ವೈರಸ್ನ ಭೀತಿಯಿಂದ ಉದ್ಯೋಗ(Jobs)ಗಳನ್ನು ತ್ಯಜಿಸುವುದು ಮತ್ತು ವೃತ್ತಿಜೀವನವನ್ನು ಬದಲಾಯಿಸುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. 

ಕೆಲವರು 6 ತಿಂಗಳ ಕಾಲ ಉದ್ಯೋಗವನ್ನು ತ್ಯಜಿಸಿ ಮತ್ತೆ ಮರಳಿದ್ದಾರೆ. ಹೆಚ್ಚಿನ ವೇತನ, ಪ್ರಯೋಜನಗಳು, ಸುರಕ್ಷತಾ ಕ್ರಮಗಳು ಅಥವಾ ಪೂರೈಸುವಿಕೆಯ ಅನ್ವೇಷಣೆಯಲ್ಲಿರುವಂತೆ ತೋರುವ ಕಾರ್ಮಿಕರನ್ನು ಮರಳಿ ಪಡೆಯಲು ಉದ್ಯೋಗದಾತರು ಹರಸಾಹಸ ಪಡುತ್ತಿದ್ದಾರೆ ಎಂದು ಅಮೆರಿಕಾದ ಹೊಸ ಇಂಡೀಡ್ ಸರ್ವೆ (Indeed survey) ಯೊಂದು ಹೇಳಿದೆ. 

Central Government Jobs: ಇಂಡಿಯನ್ ಕೋಸ್ಟ್‌ ಗಾರ್ಡ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಶುರು

ಅಮೆರಿಕನ್ನರು ಏಕೆ ತೊರೆಯುತ್ತಿದ್ದಾರೆ ಎಂಬ ಬಗ್ಗೆ ಸಮೀಕ್ಷೆ ಸಾಕಷ್ಟು ಕಾರಣಗಳನ್ನು ಹುಡುಕಿಕೊಟ್ಟಿದೆ.  "ಗ್ರೇಟ್ ರಾಜೀನಾಮೆ", "ಗ್ರೇಟ್ ರಿಷಫಲ್" ಅಥವಾ "ಗ್ರೇಟ್ ರಿಯಲೈಸೇಶನ್" ಎಂದು ಕರೆಯಲ್ಪಡುವ ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.  "ಮಾರ್ಚ್ 2020 ರಿಂದ ಕನಿಷ್ಠ ಎರಡು ಉದ್ಯೋಗಗಳಿಗೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ 1,000 ಜನರನ್ನು ಸಮೀಕ್ಷೆ ನಡೆಸಲಾಗಿದೆ’

ಉತ್ಸಾಹವಿಲ್ಲದ ಕೆಲಸದಲ್ಲಿ ಉಳಿಯಲು ಜೀವನವು ತುಂಬಾ ಚಿಕ್ಕದಾಗಿದೆ ಅನ್ನೋದು ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದ ಶೇ.92ರಷ್ಟು ಮಂದಿ. ಜನರು ಕೇವಲ ಸ್ಥಾನಗಳನ್ನು ಬದಲಾಯಿಸುವುದಿಲ್ಲ ಆದರೆ ಉದ್ಯಮಗಳನ್ನು ಬದಲಾಯಿಸುತ್ತಿದ್ದಾರೆ. ವಾಸ್ತವವಾಗಿ ಸಮೀಕ್ಷೆಯ ಪ್ರಕಾರ, "85% ಉದ್ಯೋಗಾಕಾಂಕ್ಷಿಗಳು ತಮ್ಮ ಪ್ರಸ್ತುತ ಉದ್ಯಮದ ಹೊರಗಿನ ಕೆಲಸವನ್ನು ನೋಡುತ್ತಿದ್ದಾರೆ." ಅವರಲ್ಲಿ 97%ರಷ್ಟು ಜನರಿಗೆ, ಸಾಂಕ್ರಾಮಿಕವು ವೃತ್ತಿಜೀವನವನ್ನು ಬದಲಾಯಿಸುವ ಪ್ರಚೋದನೆಯಾಗಿದೆ.

ಈ ಸಮೀಕ್ಷೆಯ ವರದಿಯು ಕಹಿ ಸತ್ಯವೊಂದನ್ನು ಹೊರಹಾಕಿದೆ ಎಂದು ಹೇಳಬಹುದು. ಕೊರೋನಾ ಸಮಾಜದ ಎಲ್ಲ ಸ್ತರದ ಜನಜೀವನ ಕ್ರಮವನ್ನು ಹೊಸದಾಗಿ ರೂಪಿಸಿದೆ. ಇಲ್ಲಿ ಯಾವುದು ಮೊದಲಿನಂತಿಲ್ಲ. ಎಲ್ಲವೂ ಹೊಸ ಆಯಾಮಗಳಿಗೆ ಅನುಗುಣವಾಗಿ ಮರು ರೂಪುಗೊಂಡಿದೆ. ಹಾಗಾಗಿಯೇ, ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಇಂಥ ಮನೋಭೂಮಿಕೆಗಳನ್ನು ಕಾಣಬಹುದು ಮತ್ತು ಅದೇ ವಿಷಯವನ್ನು ಸಮೀಕ್ಷೆಯನ್ನು ಹೊರ ಹಾಕಿದೆ.

BSF Recruitment: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೋವಿಡ್‌ನಿಂದಾಗಿ ಜೀವನವು ತುಂಬ ಚಿಕ್ಕದು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ ಮತ್ತು ಬಹುತೇಕರು ಹಾಗೆ ಭಾವಿಸುತ್ತಿದ್ದಾರೆ ಕೂಡ. ಅದರ ಪ್ರತಿಫಲನವನ್ನ ಸಮೀಕ್ಷೆಯಲ್ಲಿ ಕಾಣಬಹುದು. ಆದರೆ, ಕೋವಿಡ್ ಪೂರ್ವ ಸ್ಥಿತಿಗೆ ಜಗತ್ತು ಮರಳುತ್ತಿದೆ ಎಂದು ಎಷ್ಟೇ ಹೇಳಿದರೂ ಸಂಪೂರ್ಣವಾಗಿ ಅದು ಮೊದಲಿನ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂಬುದು ಅನೇಕ ವಲಯಗಳಲ್ಲಿ ಕಾಣುತ್ತಿರುವ ಅನಿವಾರ್ಯ ಬದಲಾವಣೆಗಳಿಂದ ತಿಳಿದುಕೊಳ್ಳಬಹುದು.

Follow Us:
Download App:
  • android
  • ios