EWISR Bengaluru Schools:ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ 6 ಅಂತರಾಷ್ಟ್ರೀಯ ಶಾಲೆಗಳು

  • 2021-22ನೇ ಸಾಲಿನ ಪಟ್ಟಿ ಪಟ್ಟಿ ಬಿಡುಗಡೆ ಮಾಡಿದ EWISR
  • ಬೆಂಗಳೂರಿನ ಆರು ಅಂತರರಾಷ್ಟ್ರೀಯ ಶಾಲೆಗಳಿಗೆ ಮನ್ನಣೆ
  • 2020-2021ರ ಶ್ರೇಯಾಂಕಕ್ಕಿಂತಲೂ ಹೆಚ್ಚು  ಮನ್ನಣೆ ಗಳಿಸಿದ ರಾಜ್ಯ
according to EWISR six international schools from bengaluru  got top national rankings gow

ಬೆಂಗಳೂರು (ಡಿ16): ಎಜುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ಶ್ರೇಯಾಂಕ (EducationWorld India School Rankings -EWISR) 2021-22ನೇ ಸಾಲಿನ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ಆರು ಅಂತರರಾಷ್ಟ್ರೀಯ ಶಾಲೆಗಳು (International Schools) ಅಗ್ರಸ್ಥಾನ ಅಲಂಕರಿಸಿಕೊಂಡಿದೆ. ಭಾರತದ ಅತ್ಯುತ್ತಮ ದಿನ ಮತ್ತು ದಿನ-ಕಮ್-ಬೋರ್ಡಿಂಗ್ (day-cum-boarding schools) ಶಾಲೆಗಳ ಪಟ್ಟಿಯಲ್ಲಿ ಬೆಂಗಳೂರಿನ ಆರು ಶಾಲೆಗಳು ಟಾಪ್-10 ರಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದ ಅತ್ಯುತ್ತಮ ಅಂತರಾಷ್ಟ್ರೀಯ ಡೇ-ಕಮ್-ಬೋರ್ಡಿಂಗ್ ಶಾಲೆ  ಎಂಬ ಹೆಗ್ಗಳಿಕೆಗೆ ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ (Indus International School) ಬಾಜನವಾಗಿದ್ದು ಮೊದಲ ಸ್ಥಾನ ಅಲಂಕರಿಸಿಕೊಂಡಿದೆ. ಇಂಟರ್‌ನ್ಯಾಶನಲ್ ಸ್ಕೂಲ್, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಮತ್ತು ಸ್ಟೋನ್‌ಹಿಲ್ ಇಂಟರ್‌ನ್ಯಾಶನಲ್ ಸ್ಕೂಲ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಶ್ರೇಯಾಂಕಗಳನ್ನು ಪಡೆದುಕೊಂಡಿವೆ. ಬೆಂಗಳೂರಿನ ಶರಣ್ಯ ನಾರಾಯಣಿ ಇಂಟರ್‌ನ್ಯಾಶನಲ್ ಸ್ಕೂಲ್ ಇದೇ ವಿಭಾಗದಲ್ಲಿ ಒಂಬತ್ತನೇ ಶ್ರೇಯಾಂಕ ತನ್ನದಾಗಿಸಿಕೊಂಡಿದೆ.

ಅಂತರಾಷ್ಟ್ರೀಯ ದಿನದ ಶಾಲೆಗಳ ವಿಷಯದಲ್ಲಿ EWISR ಪ್ರಕಾರ ಬೆಂಗಳೂರಿನ ಲೆಗಸಿ ಸ್ಕೂಲ್ (Legacy School) ದೇಶದಲ್ಲೇ ಎಂಟನೇ-ಅತ್ಯುತ್ತಮ ಸ್ಥಾನ ತನ್ನದಾಗಿಸಿಕೊಂಡಿದೆ. ಕೋ-ಎಡ್ ಬೋರ್ಡಿಂಗ್ ಶಾಲೆಗಳ (co-ed boardings schools) ಅಡಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ (Jain International Residential School) ದೇಶದಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಅತ್ಯುತ್ತಮ ಬಾಲಕರ ಬೋರ್ಡಿಂಗ್ ಶಾಲೆಯಾಗಿ  ಬೆಂಗಳೂರಿನ ಸರಳಾ ಬಿರ್ಲಾ ಅಕಾಡೆಮಿ (Sarala Birla Academy) ಆರನೇ ಗಿಟ್ಟಿಸಿಕೊಂಡಿದೆ.

ಬಜೆಟ್ ಅಡಿಯಲ್ಲಿ ಬರುವ ಖಾಸಗಿ ಶಾಲಾ ವಿಭಾಗದಲ್ಲಿ ದೇಶದಲ್ಲೇ ನ್ಯೂ ಬ್ಲಾಸಮ್ಸ್ ಎಜುಕೇಶನ್ ಸೊಸೈಟಿ ಏಳನೇ ಸ್ಥಾನ ಮತ್ತು ಮತ್ತು ಅಶ್ವಿನಿ ಪಬ್ಲಿಕ್ ಸ್ಕೂಲ್ ಎಂಟನೇ ಸ್ಥಾನ  ಪಡೆದುಕೊಂಡಿದೆ.

Private Aided Schools: ಅನುದಾನಿತ ಖಾಸಗಿ ಶಾಲೆ ಹುದ್ದೆ ಭರ್ತಿಗೆ ಹೊರಟ್ಟಿ ಸೂಚನೆ!

ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ ಈ ವರ್ಷ ಮತ್ತಷ್ಟು ಮುನ್ನಡೆ ಕಾಯ್ದುಕೊಂಡಿದ್ದು, 2020-2021ರ ಶ್ರೇಯಾಂಕಕ್ಕಿಂತ ಈ ಬಾರಿ ಹಲವಾರು ಶಾಲೆಗಳು ಶ್ರೇಯಾಂಕದಲ್ಲಿ ಗುರುತಿಸಲ್ಪಟ್ಟಿವೆ.

Opposes To Egg: ಮೊಟ್ಟೆ ಕೈಬಿಡಿ, ಇಲ್ಲವಾದಲ್ಲಿ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಮಾಡುವಂತೆ ಆಗ್ರಹ

ಶಾಲಾ ಮಾನ್ಯತೆ ನಿಯಮ ಸರಳೀಕರಣ: ರಾಜ್ಯದ ಅನುದಾನ ರಹಿತ (Unaided) ಮತ್ತು ಅನುದಾನ ಸಹಿತ (Aided Schools) ಶಾಲೆಗಳ ಮಾನ್ಯತೆ ನವೀಕರಣ ಮಾಡಲು ಶಿಕ್ಷಣ ಇಲಾಖೆ ರೂಪಿಸಿರುವ ನಿಯಮಾವಳಿ ಸರಳೀಕರಣಕ್ಕೆ ಸಂಬಂಧಿಸಿದ ಸಂಕನೂರು ಸಮಿತಿ ನೀಡಿರುವ ವರದಿ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚಿಸಿ ಈ ಅಧಿವೇಶನ ಮುಗಿಯುವುದರೊಳಗೆ ಹೊಸ ಸುತ್ತೋಲೆ ಹೊರಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B C Nagesh) ಭರವಸೆ ನೀಡಿದ್ದಾರೆ.

Malnutrition In Children : 7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ

ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ,ಎಸ್‌. ಬೋಜೇಗೌಡ, ಮರಿತಿಬ್ಬೇಗೌಡ ಮತ್ತು ಪುಟ್ಟಣ್ಣ ಅವರು ಪ್ರಸ್ತಾಪಿಸಿದ ಈ ವಿಷಯದ ಬಗ್ಗೆ ಉತ್ತರಿಸಿದ ಸಚಿವರು, ಹೊಸ ಸುತ್ತೋಲೆ ಹೊರಡಿಸುವವರೆಗೂ ಅನುದಾನ ರಹಿತ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ತಡೆ ಹಿಡಿದಿರುವ ಶಿಕ್ಷಕರ ವೇತನವನ್ನು ಶೀಘ್ರದಲ್ಲೇ ಕೊಡಿಸಲಾಗುವುದು. ಮಾನ್ಯತೆ ನವೀಕರಣ ಆಗದಿದ್ದರೂ ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

Private Schools Association: ಸಿಡಿದೆದ್ದ ಖಾಸಗಿ ಶಾಲಾ ಒಕ್ಕೂಟ, ಸರ್ಕಾರಕ್ಕೆ ಡೆಡ್‌ಲೈನ್

Latest Videos
Follow Us:
Download App:
  • android
  • ios