25 ಲಕ್ಷ ರೂ. ನಿವೃತ್ತಿ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ ಶಿಕ್ಷಕ, ಶ್ಲಾಘಿಸಿದ ಮೋದಿ

*ಆಂಧಪ್ರದೇಶದ ಮಾರ್ಕಪುರಂ ರಾಮ ಭೂಪಾಲ್ ರೆಡ್ಡಿ ಶಿಕ್ಷಕರಿಂದ ದಾನ
*ನಿವೃತ್ತಿಯ ನಂತರ ಬಂದು ಅಷ್ಟೂ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಕಾಣಿಕೆ
*ಕುಟುಂಬದ ಸದಸ್ಯರೊಂದಿ ಚರ್ಚಿಸಿ ಈ ದೊಡ್ಡ ನಿರ್ಧಾರ ಕೈಗೊಂಡ ಶಿಕ್ಷಣ

A teacher donates his retirement benefits up to RS 25 lakh to poor students

ಬಹುಶಃ ಇಂತಹ ಶಿಕ್ಷಕರು (Teacher) ಸಿಗುವುದು ಬಹಳ ಅಪರೂಪ. ತಮ್ಮ ಜೀವಮಾನವಿಡೀ ಮಕ್ಕಳ ಏಳ್ಗೆಗೆ ಶ್ರಮಿಸಿದ ಈ ಶ್ರಮಜೀವಿ, ಕೊನೆಗಾಲದಲ್ಲಿ ತಮ್ಮ ಕಷ್ಟಕ್ಕೆ ನೆರವಾಗಬೇಕಿದ್ದ ಹಣವನ್ನೂ ಬಡ ಮಕ್ಕಳಿಗಾಗಿ ನೀಡಿದ್ದಾರೆ. ತನ್ನ ಎಲ್ಲಾ ನಿವೃತ್ತಿ ಪ್ರಯೋಜನಗಳನ್ನು ಬಡ ಮಕ್ಕಳ ಶಿಕ್ಷಣಕ್ಕೆ ನೀಡಿ ಉದಾರತೆ ಮೆರೆದಿದ್ದಾರೆ. ಆಂಧ್ರಪ್ರದೇಶ (Andra Pradesh)ದ ಪ್ರಕಾಶಂ (Prakasham) ಜಿಲ್ಲೆಯ ನಿವೃತ್ತ ಶಿಕ್ಷಕ ಮಾರ್ಕಪುರಂ ರಾಮಭೂಪಾಲ್ ರೆಡ್ಡಿ (Markapuram Ram Bhupal Reddy) ಅವರ ಉದಾರತೆಗೆ ಮಾರು ಹೋಗದವರಿಲ್ಲ. ತಮ್ಮ ಪ್ರದೇಶದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ತೋರಿದ ಕಾಳಜಿ ಅಷ್ಟಿಷ್ಟಲ್ಲ. ರಾಚರ್ಲ ಮಂಡಲದ ಯಡವಳ್ಳಿ ಗ್ರಾಮದ ಜಿಲ್ಲಾ ಪರಿಷತ್‌ ಪ್ರೌಢಶಾಲೆಯಲ್ಲಿ ರಾಮಭೂಪಾಲರೆಡ್ಡಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರಾಗಿ ತಮ್ಮ ವೃತ್ತಿಜೀವನದ ಪ್ರಾರಂಭದಿಂದಲೂ, ಅವರು ಬಡ ಮಕ್ಕಳನ್ನು ಶಿಕ್ಷಣವನ್ನು ಮುಂದುವರಿಸಲು ತಮ್ಮ ಪರೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸೇವೆಯಿಂದ ನಿವೃತ್ತರಾದ ಅವರು ಸುಮಾರು 25 ಲಕ್ಷ ರೂ.ಗಳ ನಿವೃತ್ತಿ ಪ್ರಯೋಜನಗಳನ್ನು ಪಡೆದರು. ಆದ್ರೆ ಆ ಹಣವನ್ನೂ  ಬಡ ಕುಟುಂಬದ ಮಕ್ಕಳ ಭವಿಷ್ಯಕ್ಕಾಗಿ ಧಾರೆ ಎರೆದಿದ್ದಾರೆ.

ತಮ್ಮ ಕುಟುಂಬದೊಂದಿಗೆ ಚರ್ಚಿಸಿದ ನಂತರ ರಾಮ್ ಭೂಪಾಲ್ ರೆಡ್ಡಿ ಅವರು, ತಮ್ಮ ನಿವೃತ್ತಿ ಬಳಿಕ ಬಂದ ಎಲ್ಲಾ ಹಣವನ್ನು ಮಕ್ಕಳಿಗೆ ನೀಡುವ ನಿರ್ಧಾರವನ್ನು ಕೈಗೊಂಡರು. ಯಡವಳ್ಳಿ, ಅಂಕಿರೆಡ್ಡಿ ಪಲ್ಲಿ ಮತ್ತು ಚೆರ್ಲೋಪಲ್ಲಿ ಗ್ರಾಮಗಳ ಬಡ ಕುಟುಂಬಗಳಿಗೆ ಸೇರಿದ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 90 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಸ್ವಯಂಸೇವಕರ ಸಹಾಯದಿಂದ ಗುರುತಿಸಿದ್ರು. ಅವರ ಹೆಸರಿನಲ್ಲಿ ಅಂಚೆ ಕಚೇರಿ ಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳನ್ನು ತೆರೆದರು. 

ಮಾರ್ಕಾಪುರಂ ಚಿನ್ನಾ ವೆಂಕಟರೆಡ್ಡಿ ಸ್ಮಾರಕ ಬಡ ಬಾಲಕಿಯರ ಆರ್ಥಿಕ ಸಹಾಯ ನಿಧಿಯಡಿ ರಾಮ್ ಭೂಪಾಲ್ ರೆಡ್ಡಿ ಅವರು ಅಂಚೆ ಕಚೇರಿಯಲ್ಲಿ 25 ಲಕ್ಷ ರೂ. ಜಮಾ ಮಾಡಿ, ಆ ಹಣದ ಬಡ್ಡಿಯನ್ನು ಬಾಲಕಿಯರ ಖಾತೆಗೆ ಸಮಾನವಾಗಿ ವಿತರಿಸುವಂತೆ ಸೂಚನೆ ನೀಡಿದರು. ಠೇವಣಿಯು ಪ್ರತಿ ತ್ರೈಮಾಸಿಕಕ್ಕೆ 1,20,000 ಬಡ್ಡಿಯನ್ನು ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ ಮತ್ತು ಹುಡುಗಿಯರು ತಮ್ಮ SSY ಖಾತೆಗಳಲ್ಲಿ 1,200 ರೂ. SSY ಖಾತೆಯನ್ನು ಹೊಂದಿರುವ ತನ್ನ ಮೊದಲ ವರ್ಷದ ಮಗುವಿಗೆ 18 ವರ್ಷ ತುಂಬಿದಾಗ ಆಕೆಯ ಖಾತೆಯಲ್ಲಿ ರೂ 1.85 ಲಕ್ಷ ಮತ್ತು 21 ವರ್ಷ ಪೂರ್ಣಗೊಳ್ಳುವ ವೇಳೆಗೆ ಖಾತೆಯನ್ನು ಮುಚ್ಚುವ ವೇಳೆಗೆ ರೂ 2.50 ಲಕ್ಷವನ್ನು ಪಡೆಯುವ ನಿರೀಕ್ಷೆಯಿದೆ.

ಸೋಲಾರ್ ಮರ ಅಭಿವೃದ್ಧಿಪಡಿಸಿದ ಐಐಟಿ ವಿದ್ಯಾರ್ಥಿಗಳು, ಏನೀದರ ವಿಶೇಷ?    

ಠೇವಣಿ ಮೊತ್ತದ ಚೆಕ್ ಹಾಗೂ ಎಸ್‌ಎಸ್‌ವೈ ಖಾತೆ ಪುಸ್ತಕಗಳನ್ನು ಅ.30ರಂದು ನಡೆದ ಕಾರ್ಯಕ್ರಮದಲ್ಲಿ ಗಿಡ್ಡಲೂರು ಶಾಸಕ ಅಣ್ಣಾ ರಾಂಬಾಬು ಅವರ ಮುಖಾಂತರ ಅಂಚೆ ಇಲಾಖೆ ಅಧಿಕಾರಿಗಳಿಗೆ ರಾಮಭೂಪಾಲರೆಡ್ಡಿ ಹಸ್ತಾಂತರಿಸಿದರು. ಶಿಕ್ಷಕ ರಾಮ್ ಭೂಪಾಲ್ ರೆಡ್ಡಿ ಅವರ ಈ ಸಾಧನೆ ಮನಸ್ಥಿತಿ ಬಗ್ಗೆ ತಿಳಿದ ಪ್ರಧಾನಿ ನರೇಂದ್ರರ ಮೋದಿ (Narendra Modi),  'ಮನ್ ಕಿ ಬಾತ್' (Mann Ki Baat)ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ರು. ಭಾನುವಾರದ ತಮ್ಮ ಮಾಸಿಕ ಕಾರ್ಯಕ್ರಮ 'ಮನ್ ಕಿ ಬಾತ್' ನ 89 ನೇ ಸಂಚಿಕೆಯಲ್ಲಿ, ಪ್ರಧಾನ ಮಂತ್ರಿ ಅವರು ತಮ್ಮ ಎಲ್ಲಾ ನಿವೃತ್ತಿ ಪ್ರಯೋಜನಗಳಾದ 25 ಲಕ್ಷ ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೀಡುವ ಮೂಲಕ ಹುಡುಗಿಯರ ಶಿಕ್ಷಣಕ್ಕಾಗಿ ವ್ಯವಸ್ಥೆ ಮಾಡಿದ್ದಕ್ಕಾಗಿ ಶಿಕ್ಷಕರನ್ನು ಶ್ಲಾಘಿಸಿದರು. 

ಕಾಶ್ಮೀರದ ವಿದ್ಯಾರ್ಥಿಗೆ 51 ಲಕ್ಷ ರೂ. ವಿದ್ಯಾರ್ಥಿ ವೇತನ!

Latest Videos
Follow Us:
Download App:
  • android
  • ios