ಈ ಹುಡುಗನಿಗೆ ಸ್ಕಾಲರ್‌ಶಿಪ್‌ ಜತೆಗೆ 27 ವಿವಿ, ಕಾಲೇಜ್‌ಗಳಿಂದ ಆಫರ್!

*ಅಮೆರಿಕದ ಫ್ಲೋರಾಡಾ ನಗರದ ವಿದ್ಯಾರ್ಥಿ ಜೋನಾಥನ್ ವಾಕರ್‌ಗೆ ಅವಕಾಶಗಳ ಸುರಿಮಳೆ
* ವಾರ್ಷಿಕ 4 ಮಿಲಿಯನ್ ಡಾಲರ್ ವಿದ್ಯಾರ್ಥಿವೇತನ ಆಫರ್ ನೀಡಿದ ಕಾಲೇಜುಗಳು
*ಸೈನ್ಸ್ ಆಂಡ್ ಟೆಕ್ನಾಲಜಿ ವಿಷಯದಲ್ಲಿ ಅಪ್ರತಿಮ ಪ್ರತಿಭಾವಂತ ಈ ಅಮೆರಿಕದ ಹುಡುಗ

A student from USA got seat offers from 27 universities with scholarship

ನವದೆಹಲಿ(ಏ.21): ಪ್ರತಿಷ್ಟಿತ ಕಾಲೇಜುಗಳಲ್ಲಿ ಸೀಟು ಪಡೆಯುವುದು ಅಷ್ಟು ಸುಲಭವಲ್ಲ. ಎಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ತಮ್ಮ ಆಸೆ ಈಡೇರುವುದೇ ಇಲ್ಲ. ತನ್ನಿಷ್ಟದ ಕಾಲೇಜಿನಲ್ಲಿ ಸೀಟು ಪಡೆಯಲು ವಿದ್ಯಾರ್ಥಿ (Students) ಗಳು ಮತ್ತು ಪೋಷಕರು (Parents) ಹತ್ತಾರು ಸರ್ಕಸ್ ಮಾಡುತ್ತಾರೆ. ಮಗ/ಮಗಳು ಬಯಸಿದ ಕಾಲೇಜಿನಲ್ಲೇ ಓದಿಸಲು ಹೆತ್ತವರು ಪಡೋ ಪ್ರಯತ್ನ ಅಷ್ಟಿಷ್ಟಲ್ಲ. ಆದ್ರೆ ಇಲ್ಲೊಬ್ಬ ಪೋರನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 27 ಪ್ರತಿಷ್ಟಿತ ಕಾಲೇಜು (Collages) ಗಳು ಸೀಟು ಕೊಡಲು ಮುಂದೆ ಬಂದಿವೆ.

 ಅಮೆರಿಕದ ಫ್ಲೋರಿಡಾ (Florida) ಪ್ಯಾನ್‌ಹ್ಯಾಂಡಲ್ ನಗರದ ಹೈಸ್ಕೂಲ್ ವಿದ್ಯಾರ್ಥಿ, 18 ವರ್ಷದ ಜೊನಾಥನ್ ವಾಕರ್ (Jonathan Walker)ನನ್ನು , ಹಾರ್ವರ್ಡ್ (Harvard), ಸ್ಟ್ಯಾನ್‌ಫೋರ್ಡ್ (Stanford) ಮತ್ತು MIT ಸೇರಿದಂತೆ 27 ಕಾಲೇಜುಗಳು ಆಯ್ಕೆ ಮಾಡಿಕೊಂಡಿವೆ. ರುದರ್ ಪೋರ್ಡ್  ಹೈಸ್ಕೂಲಿನಲ್ಲಿ ಓದುತ್ತಿರುವ ಜೊನಾಥನ್ ವಾಕರ್, ತನ್ನಿಷ್ಟದ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸ ಕ್ಕಾಗಿ  ಅರ್ಜಿ ಸಲ್ಲಿಸಿದ್ದ. ಹಾರ್ವರ್ಡ್‌ ವಿವಿ, ಜಾನ್ ಹ್ಯಾಪ್ಕಿನ್ಸ್ ವಿವಿ, ಯಾಲೆ ವಿವಿ, ಪೆನ್ಸಿಲ್ವೇನಿಯಾ ವಿವಿಯಂತಹ ಪ್ರತಿಷ್ಟಿತ ವಿವಿಗಳು ಸೇರಿದಂತೆ 27 ಕಾಲೇಜುಗಳು ಜೋನಾಥನ್ ಗೆ ಸೀಟು‌ ಕೊಡಲು ಮುಂದೆ ಬಂದಿವೆ. ಅಷ್ಟೇ ಅಲ್ಲ, ವಾರ್ಷಿಕ 4 ಮಿಲಿಯನ್ ಡಾಲರ್ ವಿದ್ಯಾರ್ಥಿವೇತನ ನೀಡಲು ಸಿದ್ಧವಾಗಿವೆ.

 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ

ಇಷ್ಟೊಂದು ಕಾಲೇಜುಗಳಲ್ಲಿ ಸೀಟು ಸಿಕ್ಕಿದ್ದಕ್ಕೆ ಬಹಳ ಉತ್ಸಾಹವಾಗಿತ್ತು. ನನ್ನ ಪಟ್ಟಿಯಲ್ಲಿರುವ ಪ್ರತಿಯೊಂದು ಶಾಲೆಯು, ನಾನು ಅಲ್ಲಿ ನನ್ನನ್ನು ನೋಡಬಲ್ಲೆ, ಮತ್ತು ನಾನು ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ನಾನು ಎಲ್ಲಿಯೂ ಅನ್ನಿಸಲಿಲ್ಲ. ಹಾಗಾಗಿ ನಾನು ಕಾಲೇಜುಗಳ ಪಟ್ಟಿಯನ್ನು ಮಾಡಿ, ಅರ್ಜಿ ಸಲ್ಲಿಸಿದ್ದೆ ಎಂಬ ವಾಕರ್ ಹೇಳಿಕೆಯನ್ನು ಉಲ್ಲೇಖಿಸಿ ದಿ ರೂಟ್ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇದೀಗ 27 ಕಾಲೇಜು (Collage) ಗಳ‌ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕಿದೆ. ಆಶಾದಾಯಕವಾಗಿ ಮುಂದಿನ ಎರಡು ವಾರಗಳಲ್ಲಿ, ನಾನು ಸಾಕಷ್ಟು ಆತ್ಮವಿಶ್ವಾಸದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನಾನು ಹೆಚ್ಚಾಗಿ ಎಂಜಿನಿಯರಿಂಗ್ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿದ್ದೇನೆ, ಲಾಭರಹಿತ ಮಾರ್ಗದಂತೆ ಆಶಾದಾಯಕವಾಗಿ ಇಳಿಯುತ್ತಿದ್ದೇನೆ, ಜನರಿಗೆ ಸಹಾಯ ಮಾಡಲು ಸಾಧನಗಳನ್ನು ರಚಿಸುತ್ತೇನೆ. ಆದರೆ ನಾನು ಹಲವಾರು ವಿಭಿನ್ನ ಆಸಕ್ತಿಗಳನ್ನು ಹೊಂದಿರುವುದರಿಂದ ನನ್ನದೇ ಆದ ಮಷಿನ್ ಅನ್ನು ರಚಿಸಲು ಅನ್ವೇಷಿಸುತ್ತಿದ್ದೇನೆ ಅಂತಾರೆ ಜೋನಾಥನ್.

ಅಂದಹಾಗೆ ಇಷ್ಟೊಂದು ಕಾಲೇಜುಗಳಲ್ಲಿ ಜೋನಾಥನ್ ಗೆ ಸೀಟ್ ಸಿಗಲು ಕಾರಣವಾಗಿದ್ದು,  ಪ್ರತಿಭೆ. ವಿಜ್ಞಾನ ತಂತ್ರಜ್ಞಾನ (Science and Technology) ದಲ್ಲಿ ಜೋನಾಥನ್ ಗೆ ಇರುವ ಟ್ಯಾಲೆಂಟ್ ನಿಂದಾಗಿ ಇಷ್ಟು ದೊಡ್ಡ ಆಫರ್ ಗಳು ಹುಡುಕಿ ಬಂದಿವೆ. ಸೈನ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಜೋನಾಥನ್, ಸಾಕಷ್ಟು ಮಿಷನ್ ಗಳನ್ನು ತಯಾರಿಸಿದ್ದಾನೆ. ಭವಿಷ್ಯದಲ್ಲಿ ದಿವ್ಯಾಂಗರ ನೆರವಿಗೆ ಏನಾದರೂ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದಾನೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದರಲ್ಲಿ ಬೆಸ್ಟ್ ಸಾಧಿಸುವವರೆಗೂ ಬಿಡುವುದಿಲ್ಲ. ಫುಟ್ಬಾಲ್ (Football) ಆಟದಲ್ಲಿ ಜೋನಾಥನ್ ಎತ್ತಿದ ಕೈ.

 Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ

ಕಾಲೇಜಿನಲ್ಲಿ‌ ಸೀಟಿಗಾಗಿ ಜೋನಾಥನ್ ಮಾಡಿದ್ದ ಐಡಿಯಾವನ್ನ ಎಂಥವರು ಮೆಚ್ಚಲೇಬೇಕು. ತಾನು ಅರ್ಜಿ ಸಲ್ಲಿಸುವ ಮುನ್ನ ಆ ಕಾಲೇಜಿನ ಸಂಪೂರ್ಣ ಇತಿಹಾಸವನ್ನು ತಿಳಿದುಕೊಂಡಿದ್ದ. ಅರ್ಜಿ ಸಲ್ಲುಸುವಾಗ ಆ ಕಾಲೇಜಿನ ಬಗ್ಗೆ ಅಂದವಾಗಿ ಪ್ರಬಂಧ ಬರೆದು ಕಳುಹಿಸಿದ್ದ. ಇದ್ರಿಂದಾಗಿಯೂ ಕಾಲೇಜುಗಳು, ಜೋನಾಥನ್ ಬಗ್ಗೆ ಆಕರ್ಷಿತಗೊಂಡಿವೆ ಎನ್ನಬಹುದು. ಅಮೆರಿಕದ ಈ ಹುಡುಗನ ಪ್ರತಿಭೆ ಮೆಚ್ಚಿ ಅನೇಕ ಕಾಲೇಜುಗಳ ಸೀಟ್‌ ಕೊಡಲು ಬಂದಿರುವ ಸುದ್ದಿ ಸಾಕಷ್ಟು ಸದ್ದು ಮಾಡಿದೆ. ಜತೆಗೆ ಭಾರಿ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿರುವುದು ಹೆಚ್ಚು ಕುತೂಹಲವಾಗಿದೆ. ಪ್ರತಿಭಾವಂತರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದು ಈ ಪ್ರಕರಣವೇ ಉದಾಹರಣೆಯಾಗಿದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios