Asianet Suvarna News Asianet Suvarna News

Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ

ಹುಬ್ಬಳ್ಳಿ ಗಲಭೆಗೆ ವಿವಾದಾತ್ಮಕ ಪೋಸ್ಟ್‌ ಹಾಕಿ ಬಂಧಿತನಾಗಿರುವ ವಿದ್ಯಾರ್ಥಿ ಅಭಿಷೇಕ ಹಿರೇಮಠಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.

Hubballi Violence Case  Abhishek Hiremath bail plea rejected to write PU exam  gow
Author
Bengaluru, First Published Apr 21, 2022, 11:58 AM IST

ಹುಬ್ಬಳ್ಳಿ (ಏ.21): ವಾಟ್ಸ್ ಆ್ಯಪ್ ನಲ್ಲಿ ವಿವಾದಾತ್ಮಕ ಸ್ಟೇಟಸ್​ ಹಾಕಿ ಬಂಧಿತನಾಗಿರುವ ಹುಬ್ಬಳ್ಳಿಯ (Hubballi) ಆನಂದನಗರ ನಿವಾಸಿ ಅಭಿಷೇಕ ಹಿರೇಮಠಗೆ  (Abhishek Hiremath) ಮಧ್ಯಂತರ ಜಾಮೀನು (interim bail) ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಬುಧವಾರ ವಜಾಗೊಳಿಸಿದೆ. ಆದರೆ ಪೊಲೀಸ್​ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.

2023ರ ಹೊತ್ತಿಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಭಿಷೇಕ ಹಿರೇಮಠ ನನ್ನು ವಿವಾದಾತ್ಮಕ ಸ್ಟೇಟಸ್​ ಹಾಕಿದ್ದ ಆರೋಪದಡಿ ಏಪ್ರಿಲ್ 16ರಂದು ಪೊಲೀಸರು ಬಂಧಿಸಿದ್ದು, ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ವಿದ್ಯಾರ್ಥಿಗೆ ಏ. 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ (PU exams) ಬರೆಯಲು ಅವಕಾಶ ನೀಡುವಂತೆ ವಕೀಲ ಸಂಜು ಬಡಸ್ಕರ 4ನೇ ಅಧಿಕ ದಿವಾಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.   ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.  

ಆದರೆ, ಅಭಿಷೇಕನಿಗೆ ಪರೀಕ್ಷೆ ಬರೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಕಾರಾಗೃಹದಲ್ಲೇ ಅಭ್ಯಾಸ ಮಾಡಲು ಪುಸ್ತಕ, ಮತ್ತಿತರ ವ್ಯವಸ್ಥೆ ಮಾಡಬೇಕು. ಸೂಕ್ತ ಬಂದೋಬಸ್ತ್​ ಮೂಲಕ ಪರೀಕ್ಷೆಗೆ ಹಾಜರಾಗುವಂತೆ ಕಾರಾಗೃಹ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ ಎಂದು ಅಭಿಷೇಕ ಪರ ವಕೀಲ ಸಂಜು ಬಡಸ್ಕರ ತಿಳಿಸಿದ್ದಾರೆ. ಪ್ರಚೋದನಾಕಾರಿ ಪೋಸ್ಟ್ ಹಾಕಿ ಕೋಮುಗಲಭೆಗೆ ಕಾರಣವಾಗಿದ್ದ ಯುವಕ ಅಭಿಷೇಕ್ ಹಿರೇಮಠ"ಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮತ್ತೆ 10 ಮಂದಿ ಅರೆಸ್ಟ್‌ : ಹಳೇ ಹುಬ್ಬಳ್ಳಿಯಲ್ಲಿ(Hubballi) ಶನಿವಾರ ತಡರಾತ್ರಿ ನಡೆದಿದ್ದ ಗಲಭೆಯ(Riot) ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು(Police), ಮಂಗಳವಾರ ಮತ್ತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಉದ್ವಿಗ್ನಗೊಂಡಿದ್ದ ಹಳೇಹುಬ್ಬಳ್ಳಿ ಸಹಜಸ್ಥಿತಿಗೆ ಮರಳುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಈವರೆಗೂ 103 ಜನರನ್ನು ಬಂಧಿಸಿರುವ ಪೊಲೀಸರು, ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಜೈಲಿಗೆ(Jail) ಕಳುಹಿಸಿದ್ದಾರೆ. ಮಂಗಳವಾರ ಕೂಡ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದಿದ್ದಾರೆ. ಈ ನಡುವೆ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ 89 ಆರೋಪಿಗಳನ್ನು(Accused) ಧಾರವಾಡ ಕೇಂದ್ರ ಕಾರಾಗೃಹದಿಂದ ಕಲಬುರಗಿ ಜೈಲಿಗೆ ಪೊಲೀಸರು ಶಿಫ್ಟ್‌ ಮಾಡಿದ್ದಾರೆ.

Hubli Violence ತಪ್ಪಿತಸ್ಥನ ಶಿರಚ್ಛೇದಕ್ಕೆ ಹುಬ್ಬಳ್ಳಿ ಉದ್ರಿಕ್ತರ ಘೋಷಣೆ ವೈರಲ್!

ಈಗಾಗಲೇ 12 ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ದೇವಸ್ಥಾನ, ಮನೆ, ಆಸ್ಪತ್ರೆ ಹಾಗೂ ಪೋಸ್ಟ್‌ ಆಫೀಸ್‌ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳ ಹಾನಿಯ ಬಗ್ಗೆಯೂ ಕೇಸ್‌ ದಾಖಲಾಗಿವೆ.

ನಮ್‌ ಮಕ್ಕಳು ಅಮಾಯಕರು: ಈ ನಡುವೆ ಸಂಶಯ ಬಂದು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆ ತರುತ್ತಿದ್ದಂತೆ ಪಾಲಕರು ಆಗಮಿಸಿ, ನಮ್ಮ ಮಕ್ಕಳು ಅಮಾಯಕರು. ಆತ ಕಾಲೇಜ್‌ಗೆ ಹೋಗುತ್ತಾನೆ. ಪರೀಕ್ಷೆಯಿದೆ ಬಿಟ್ಟು ಕಳುಹಿಸಿ, ಆತನಿಗೆ ಹುಷಾರಿಲ್ಲ ಬಿಟ್ಟುಬಿಡಿ ಎಂದು ಗೋಳಾಡುವುದು ಮಾಮೂಲಿಯಾಗಿದೆ. ಕೆಲ ಪಾಲಕರಂತೂ ಕಣ್ಣೀರು ಸುರಿಸುತ್ತಲೇ ಠಾಣೆಗೆ ಆಗಮಿಸಿ ನಮ್ಮ ಮಗನದ್ದೇನೂ ತಪ್ಪಿಲ್ಲ. ಆತ ಅಮಾಯಕ. ಆತ ಕೆಲಸಕ್ಕೆ ಹೋಗಿದ್ದ. ನಮಾಜ್‌ಗೆ ಹೋಗಿದ್ದ ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು.

Follow Us:
Download App:
  • android
  • ios