Students Skip exam 9ನೇ ತರಗತಿ ಪರೀಕ್ಷೆಗೆ ಬರೋಬ್ಬರಿ 15 ಸಾವಿರ ವಿದ್ಯಾರ್ಥಿಗಳು ಗೈರು, ವರದಿ ಕೇಳಿದ ಇಲಾಖೆ!

  • ಆತಂಕ ತಂದ ವಿದ್ಯಾರ್ಥಿಗಳ ಪರೀಕ್ಷಾ ಗೈರು
  • ಈ ಪ್ರಮಾಣದಲ್ಲಿ ಗೈರಾಗಲು ಕಾರಣವೇನು?
  • ಮೇ.31ರೊಳಗೆ ವರದಿ ಸಲ್ಲಿಸಲು ಸೂಚನೆ
15k students skipped Class 9th exam in Odisha Secondary Education ask report from  report from all district ckm

ಒಡಿಶಾ(ಮೇ.17): ಒಂದಲ್ಲ, ಎರಡಲ್ಲ, ಬರೋಬ್ಬರಿ 14,935 ವಿದ್ಯಾರ್ಥಿಗಳುು ಪರೀಕ್ಷೆಗೆ ಗೈರು. ಇದು ನಿಜಕ್ಕೂ ಆತಂಕ ತರವು ವಿಚಾರವಾಗಿದೆ. ಕೊರೋನಾ ಪ್ರಕರಣಗಳಿಲ್ಲ. ಇತರ ಅಡ್ಡಿ ಆತಂಕಗಳು ಇಲ್ಲ ಆದರೂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವುದೇಕೆ ಎಂದು ಒಡಿಶಾ ಶಿಕ್ಷಣ ಇಲಾಖೆ ಪ್ರಶ್ನಿಸಿದೆ. ಇಷ್ಟೇ ಅಲ್ಲ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಮೇ.31ರೊಳಗೆ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.

ಒಡಿಶಾದ 9ನೇ ತರಗತಿ((HSC & ಮಧ್ಯಮ 2021-22) ಪರೀಕ್ಷೆಗೆ ಸರಿಸುಮಾರು 15 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಡಿಶಾ ಸೆಕೆಂಡರಿ ಎಜುಕೇಶನ್ ಬೋರ್ಡ್ ಮಾಹಿತಿ ಬಿಡುಗಡೆ ಮಾಡಿದೆ. ಒಡಿಶಾದಲ್ಲಿ 9ನೇ ತರಗತಿ(HSC & ಮಧ್ಯಮ 2021-22)  ಪರೀಕ್ಷೆಗೆ  5,66,269 ವಿದ್ಯಾರ್ಥಿಗಳು ನೋಂದಣಿ ಮಾಡಿ ಹಾಲ್ ಟಿಕೆಟ್ ಪಡೆದಿದ್ದಾರೆ. ಇದರಲ್ಲಿ 14,935 ವಿದ್ಯಾರ್ಥಿಗಳು ಪರೀಕ್ಷೆ ಗೈರಾಗಿದ್ದಾರೆ. 

ಇನ್ನೆರಡು ದಿನದಲ್ಲಿ SSLC Exam Results ಪ್ರಕಟ

ಇನ್ನು ಮಧ್ಯಮ ಪರೀಕ್ಷೆಗೆ 3,399 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 129 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಇದು ಒಡಿಶಾ ಶಿಕ್ಷಣ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾ ಶಿಕ್ಷಣ ಅಧಿಕಾರಿಗಳಿಂದ ಈ ಕುರಿತು ವರದಿ ಕೇಳಿದೆ. ಮೇ.31ರೊಳಗೆ ವರದಿ ಸಲ್ಲಿಸಲು ಇಲಾಖೆ ಸೂಚಿಸಿದೆ.

ಗೈರಾದವರಿಗೆ ಶಾಕ್, ಹಾಜರಾದವರಿಗೆ ಬಂಪರ್!
9ನೇ ತರಗತಿ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಶಾಕ್ ನೀಡಿದೆ. ಪರೀಕ್ಷೆಗೆ ಹಾಜರಾಗಿ, ಗ್ರೇಡ್ F(I)  ಅಂಕ ಪಡೆದ   ವಿದ್ಯಾರ್ಥಿಗಳನ್ನು 10ನೇ ತರಗತಿಗೆ ಬಡ್ತಿ ನೀಡಲು ಒಡಿಶಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ ಗೈರಾದ ವಿದ್ಯಾರ್ಥಿಗಳಿಗೆ ಯಾವುದೇ ಅವಕಾಶವಿಲ್ಲ. 

ಗ್ರೇಡ್ F(I) ಪಡೆದಿರುವ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಲಾಗಿದೆ. ಗ್ರೇಡ್ F(I) ವಿದ್ಯಾರ್ಥಿಗಳು ಪಾಸ್ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಇಲಾಖೆ ಹೇಳಿದೆ. ಇನ್ನು F (II) ಅಂಕ ಪಡೆದ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ವಿಷಯದಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಜೂನ್ 1, 8 ಮತ್ತು 16ರಂದು ಮರು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಇಲಾಖೆ ಹೇಳಿದೆ.

CBSE Term 2 Result ಜೂನ್ ಅಂತ್ಯದೊಳಗೆ ಎರಡನೇ ಅವಧಿಯ ಫಲಿತಾಂಶ ಪ್ರಕಟ

3 ದಿನಕ್ಕೆ ಮರುಮೌಲ್ಯಮಾಪನ ರಿಸಲ್ಟ್‌
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆ ಫಲಿತಾಂಶ ಮತ್ತು ಸ್ಕಾ್ಯನ್‌ ಮಾಡಿದ ಉತ್ತರ ಪತ್ರಿಕೆಗಳನ್ನು ಈ ಬಾರಿ ಅರ್ಜಿ ಸಲ್ಲಿಸಿದ ಕೇವಲ ಮೂರೇ ದಿನಗಳಲ್ಲಿ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ.ಈ ಮೊದಲು ಮರುಮೌಲ್ಯಮಾಪನ ಮತ್ತು ಮರುಎಣಿಕೆಯ ಫಲಿತಾಂಶ ಪಡೆಯಲು ಹಲವು ದಿನ ಬೇಕಾಗುತ್ತಿತ್ತು. ಈ ಬಾರಿ ವಿಳಂಬ ತಪ್ಪಿಸಲು ಪ್ರಯತ್ನಕ್ಕೆ ಮಂಡಳಿ ಕೈ ಹಾಕಿದೆ.

ವಾರ್ಷಿಕ ಪರೀಕ್ಷೆಯ ಫಲಿತಾಂಶ ಮೇ 19ರಂದು ಪ್ರಕಟವಾಗಲಿದೆ. ಬಳಿಕ ವೆಬ್‌ಸೈಟ್‌ನಲ್ಲಿ ಈ ಕುರಿತ ವಿವರಗಳನ್ನು ಮಂಡಳಿ ಪ್ರಕಟಿಸಲಿದೆ.

3 ದಿನದಲ್ಲಿ ಪ್ರಕ್ರಿಯೆ:
ಪರೀಕ್ಷಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೆ ಅಥವಾ ಮರು ಎಣಿಕೆಗೆ ಅರ್ಜಿ ಹಾಕಿದರೆ- ಅರ್ಜಿ ಸಲ್ಲಿಸಿದ ಮೂರೇ ದಿನದಲ್ಲಿ ಫಲಿತಾಂಶ ನೀಡಲಿದೆ. ಅದೇ ರೀತಿ ಸ್ಕಾ್ಯನ್‌ ಮಾಡಿದ ಉತ್ತರ ಪತ್ರಿಕೆ ಬಯಸಿದರೆ ಅರ್ಜಿ ಸಲ್ಲಿಸಿದ ಮೂರೇ ದಿನದಲ್ಲಿ ಉತ್ತರ ಪತ್ರಿಕೆ ಲಭ್ಯವಾಗಲಿದೆ.

Latest Videos
Follow Us:
Download App:
  • android
  • ios