Asianet Suvarna News Asianet Suvarna News

CBSE Term 2 Result ಜೂನ್ ಅಂತ್ಯದೊಳಗೆ ಎರಡನೇ ಅವಧಿಯ ಫಲಿತಾಂಶ ಪ್ರಕಟ

ಸಿಬಿಎಸ್ಇ 10, 12 ನೇ ತರಗತಿಗಳ ಎರಡನೇ ಅವಧಿ ಬೋರ್ಡ್ ಪರೀಕ್ಷೆಗಳು ಏ.26 ರಿಂದ ಆಫ್ ಲೈನ್ ಮೋಡ್ ನಲ್ಲಿ  ನಡೆಯುತ್ತಿದ್ದು, ಜೂನ್ ಅಂತ್ಯದ ಒಳಗೆ ಫಲಿತಾಂಶ ಪ್ರಕಟಿಸಲು ಭರದ ಸಿದ್ಧತೆ ನಡೆಸುತ್ತಿದೆ.

CBSE Term 2 Result 2022 Expected Soon gow
Author
Bengaluru, First Published May 17, 2022, 11:26 AM IST

ನವದೆಹಲಿ (ಮೇ.17) : ಕೇಂದ್ರ ಪ್ರೌಢಶಿಕ್ಷಣ ಮಂಡಳಿ  (Central Board of Secondary Education - ಸಿಬಿಎಸ್ಇ) 10, 12 ನೇ ತರಗತಿಗಳ ಎರಡನೇ ಅವಧಿ (Term Second) ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಆಫ್‌ಲೈನ್ ಮೂಲಕವೇ ನಡೆಸುತ್ತಿದೆ. ಇದಕ್ಕೆ  ಸಂಬಂಧಪಟ್ಟ ಹಲವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಿಬಿಎಸ್ಇ, ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಡು ಎರಡನೇ ಅವಧಿಯ ಬೋರ್ಡ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿಯೇ ನಡೆಸುತ್ತಿದೆ. ಫಲಿತಾಂಶವು https://www.cbse.gov.in/ ನ ಮೂಲಕ ಚೆಕ್ ಮಾಡಬಹುದು.
 
ಥಿಯರಿ ಪರೀಕ್ಷೆಗಳು 2022 ರ ಏಪ್ರಿಲ್ 26 ರಿಂದ ಪ್ರಾರಂಭವಾಗಿದೆ, ವಿದ್ಯಾರ್ಥಿಗಳು ಆಯಾ ಶಾಲಾ ಕಾಲೇಜುಗಳಲ್ಲಿಯೇ ಈ ಹಿಂದಿನ ವರ್ಷದಂತೆಯೇ ಪರೀಕ್ಷೆಗೆ ಹಾಜರಾಗಿದ್ದಾರೆ. ಇನ್ನು ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಮಂಡಳಿ ಪ್ರಕಟಿಸಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿಯೇ ಪರೀಕ್ಷೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಮಂಡಳಿಯು CBSE ಟರ್ಮ್ 2 ಫಲಿತಾಂಶ 2022 ರ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವರದಿಗಳ ಪ್ರಕಾರ , ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಗುರಿಯೊಂದಿಗೆ ಶಿಕ್ಷಕರು ಈಗಾಗಲೇ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ.

ಇದಲ್ಲದೆ, ಮಂಡಳಿಯು CBSE 10 ನೇ ಮತ್ತು 12 ನೇ ಫಲಿತಾಂಶವನ್ನು ಸಮಯಕ್ಕೆ ಮೊದಲು ಬಿಡುಗಡೆ ಮಾಡುವ ಗುರಿಯೊಂದಿಗೆ ಮೌಲ್ಯಮಾಪನ ಕಾರ್ಯದ ವೇಗವನ್ನು ದ್ವಿಗುಣಗೊಳಿಸಿದೆ ಎಂದು ತಿಳಿದುಬಂದಿದೆ. ಎರಡು ಪಟ್ಟು ಹೆಚ್ಚು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಮಂಡಳಿಯು ಶಿಕ್ಷಕರಿಗೆ ಸೂಚನೆ ಹೊರಡಿಸಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ  ಪ್ರತಿದಿನ 22 ಉತ್ತರ ಪತ್ರಿಕೆಗಳ ಗುರಿ ನಿಗದಿಪಡಿಸಲಾಗಿತ್ತು. 2022 ಕ್ಕೆ, ಶಿಕ್ಷಕರಿಗೆ ಪ್ರತಿದಿನ 35 ಉತ್ತರ ಪತ್ರಿಕೆಗಳನ್ನು ತಿದ್ದಿ ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದೆ. 

ಇನ್ನೆರಡು ದಿನದಲ್ಲಿ SSLC EXAM RESULTS ಪ್ರಕಟ

CBSE ಅವಧಿ 2 ಫಲಿತಾಂಶ 2022
2022 ರ ಜುಲೈ ಮೊದಲ ವಾರದ ವೇಳೆಗೆ CBSE 10 ನೇ ಮತ್ತು 12 ನೇ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದ್ದರೂ, ಬೋರ್ಡ್ ಟರ್ಮ್ 2 ಫಲಿತಾಂಶಗಳ ಘೋಷಣೆಗೆ ಯಾವುದೇ ಅಧಿಕೃತ ದಿನಾಂಕವನ್ನು ಬಿಡುಗಡೆ ಮಾಡಿಲ್ಲ. ಪರೀಕ್ಷೆ ನಡೆಸಿದ ನಂತರ 20 ದಿನಗಳಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲು CBSE ಉದ್ದೇಶಿಸಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು, ಮಂಡಳಿಯು ಸುಮಾರು ಒಂದು ತಿಂಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ  ಸಮಯವನ್ನು ಮತ್ತಷ್ಟು ಕಡಿಮೆ ಮಾಡುವುದು ಮತ್ತು CBSE ಟರ್ಮ್ 2 ಫಲಿತಾಂಶವನ್ನು ವೇಗವಾಗಿ ಘೋಷಿಸುವ ಗುರಿಯನ್ನು CBSE ಹೊಂದಿದೆ.

CBSEಟರ್ಮ್ 2 ಫಲಿತಾಂಶ 2022 ಅನ್ನು ಶೀಘ್ರದಲ್ಲೇ ಬಿಡುಗಡೆ ಮಂಡಳಿಯ ತೀರ್ಮಾನ:  ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದೊಳಗೆ 10 ಮತ್ತು 12 ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಲು ಮಂಡಳಿಯು ಕೆಲಸ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆಂದು ಮಾದ್ಯಮ ವರದಿ ಮಾಡಿದೆ. 12 ನೇ ತರಗತಿಯ ಫಲಿತಾಂಶವನ್ನು ಜೂನ್ ಅಂತ್ಯಕ್ಕೆ ಮುನ್ನ ಪ್ರಕಟಿಸಲು ಸ್ವಲ್ಪ ಅಸಾಧ್ಯವಾಗಿದೆ, ಆದರೆ 10 ನೇ ತರಗತಿ ಸಾಧ್ಯ ಎನ್ನಲಾಗುತ್ತಿದೆ. ಹೊಸ ಶೈಕ್ಷಣಿಕ ಅವಧಿಯು 11 ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಜೂನ್ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಮಂಡಳಿಯು ವೇಗವಾಗಿ ಕೆಲಸ ಕೈಗೊಂಡಿದೆ.

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh

ಮೌಲ್ಯಮಾಪನ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಮಂಡಳಿಯು CBSE ಟರ್ಮ್ 1 ಮತ್ತು ಟರ್ಮ್ 2 ಫಲಿತಾಂಶಗಳನ್ನು ಕಂಪೈಲ್ ಮಾಡುತ್ತದೆ. ಬಳಿಕ 10 ಮತ್ತು 12 ನೇ ತರಗತಿಗಳಿಗೆ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆ. ಮಂಡಳಿಯು ಟರ್ಮ್ 1 ಅಂಕಗಳಿಗೆ ನೀಡುವ ತೂಕವನ್ನು ಇನ್ನೂ ಹಂಚಿಕೊಂಡಿಲ್ಲ. ಟರ್ಮ್ 2 ಪರೀಕ್ಷೆಗಳು ಮುಗಿದ ನಂತರ ನಿರ್ಧಾರವನ್ನು ಬಿಡುಗಡೆ ಮಾಡಲಾಗುತ್ತದೆ.

Follow Us:
Download App:
  • android
  • ios