Manipura: ಕಂಕುಳಲ್ಲಿ ತಂಗಿ ಜೊತೆ ಶಾಲೆ ಬರೋ ಬಾಲೆಗೆ ಸಚಿವರ ನೆರವಿನ ಭರವಸೆ

*ನಿತ್ಯ ತನ್ನ 2 ವರ್ಷದ ತಂಗಿಯನ್ನು ಕರೆದುಕೊಂಡು ಬರುವ 10 ವರ್ಷದ ಬಾಲಿಕೆ
*ಈ ಸಹೋದರಿಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
*ಮಣಿಪುರದ ಸಚಿವ ಬಿಸ್ವಜಿತ್ ಸಿಂಗ್ ಅವರಿಂದ ಉಚಿತ ವಿದ್ಯಾಭ್ಯಾಸದ ವಾಗ್ದಾನ

10 year old Manipuri girl attends classes with younger sister photo gone viral

 Manipur ಅರಣ್ಯ ಮತ್ತು ಪರಿಸರ ಸಚಿವೆ ಬಿಸ್ವಜಿತ್ ಸಿಂಗ್ 10 ವರ್ಷದ ಬಾೆಯೊಬ್ಬಳು, ಎರಡು ವರ್ಷದ ತಂಗಿಯನ್ನು ಮಡಲಲ್ಲಿಟ್ಟುಕೊಂಡು ಶಾಲೆಯಲ್ಲಿ ಪಾಠ ಕೇಳುವ ವೀಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದರ ಜೊತೆ, ಮಣಿಪುರದಂಥ ಈಶಾನ್ಯ ಭಾರತದಲ್ಲಿ ಶಿಕ್ಷಣ, ಹೆಣ್ಣು ಮಕ್ಕಳ ಜೀವನ ಜೊತೆಗೆ ಕಲಿಯುವ ಬದ್ಧತೆ...ಹೀಗೆ ವಿವಿಧ ಆಯಾಮಗಳಲ್ಲಿ ಚರ್ಚೆಯಾಗಿತ್ತು. ಜೊತೆಗೆ ಸಚಿವರೇ ಖುದ್ದು ಆ ಬಾಲಕಿಯನ್ನು ಹಾಗೂ ಅವರ ಪೋಷಕರನ್ನು ಇಂಫಾಲ್‌ದೆ ಕರೆಯಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಾನು ಈ ಸುದ್ದಿಯನ್ನು ಗಮನಿಸಿದ ತಕ್ಷಣ, ನಾವು ಅವಳ ಕುಟುಂಬವನ್ನು ಪತ್ತೆ ಹಚ್ಚಿದ್ದೇವೆ ಮತ್ತು ಅವಳನ್ನು ಇಂಫಾಲ್ ಅನ್ನು ಕರೆತರುವಂತೆ ಕೇಳಿದೆವು. ಆಕೆಯ ಪದವಿ ಶಿಕ್ಷಣ ಮುಗಿಸುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಅವರು ಮತ್ತೊಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗೋ ಒಂದು ಪೋಸ್ಟ್ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದು ಮತ್ತೊಂದು ಉದಾಹಣೆ. ಬಾಲಕಿಯ ಜೀವನ ಉಜ್ವಲವಾಗಿರಲಿ ಎಂದು ನೆಟ್ಟಿಗರು ಆಶಿಸುತ್ತಿದ್ದಾರೆ.

ಏನದು ವೀಡಿಯೋ?
ಮಕ್ಕಳು ದೇವರ ಸಮಾನ‌, ತಾಯಿ ಹೃದಯದವರು, ಕಲ್ಮಶ ಮನಸ್ಸಿನವರು ಅಂತಾರೆ.  ಅಮ್ಮನಿಲ್ಲದ ಹೊತ್ತಲ್ಲಿ ತನ್ನ ಒಡಹುಟ್ಟಿದವರಿಗೆ ತಾಯಿ ಆಗುತ್ತಾರೆ. ಇನ್ನು ಕೆಲವೊಮ್ಮೆ ಗುರುವೂ ಆಗಿ ಸಹೋದರರ ಕಲಿಕೆಗೆ ನೆರವಾಗುತ್ತಾರೆ. ಸಾಂತ್ವನವಾಗಲಿ ಅಥವಾ ಶಿಶುಪಾಲನೆಯಾಗಲಿ, ಕಾಳಜಿಯ ಕಲೆ ಕೆಲವು ಮಕ್ಕಳಿಗೆ ಸ್ವಾಭಾವಿಕವಾಗಿ ಬರುತ್ತದೆ. ಮಣಿಪುರದಲ್ಲಿ 10 ವರ್ಷದ ಬಾಲಕಿ (Girl) ಯೊಬ್ಬಳು ತನ್ನ ತಂಗಿ (Sister) ಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ನಿತ್ಯ ಶಾಲೆ (School) ಗೆ ಹೋಗುತ್ತಿದ್ದಾಳೆ.

ಬಾಲಕಿಯ ಈ ಫೋಟೋಗಳು ಸೋಷಿಯಲ್ ಮೀಡಿಯಾ (Social Media) ದಲ್ಲಿ ವೈರಲ್ (Viral) ಆಗಿದ್ದು, ನೆಟಿಜನ್‌ಗಳ ಗಮನ ಸೆಳೆದಿವೆ.  ಈ ಫೋಟೋ ನೆಟಿಜನ್‌ಗಳ ಮೇಲೆ ಭಾರೀ ಪ್ರಭಾವ ಬೀರಿದೆ. ಚಿಕ್ಕ ಹುಡುಗಿಯೊಬ್ಬಳು ತನ್ನ  ಶಿಕ್ಷಣಕ್ಕಾಗಿ ಮತ್ತು ಅವಳ ಸಹೋದರಿಗಾಗಿ ಪರಿತಪಿಸುವುದನ್ನು  ನೆಟ್ಟಿಗರು ಶ್ಲಾಘಿಸಿದ್ದಾರೆ.

ತಂಗಿಯನ್ನು ಕಂಕುಳಲ್ಲಿ ಕೂರಿಸಿಕೊಂಡು ಪಾಠ ಕೇಳೋ ಬಾಲೆ

ಇಂಥ ಸಮರ್ಪಿತ ಮಕ್ಕಳು ನಮ್ಮನ್ನು ಮೂಕರನ್ನಾಗಿಸುತ್ತಾರೆ. ಆದರೆ ಈ ರಾಷ್ಟ್ರಕ್ಕೆ ಕಾರಣವಾಗಿರುವಂತಹ ಬಲವಾದ ಮಕ್ಕಳನ್ನು ನಮಗೆ ನೀಡುತ್ತಲೇ ಇರುವ ಈ ರಾಷ್ಟ್ರದ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಬಳಕೆದಾರರು ಬರೆದಿದ್ದಾರೆ. ಇದು ಸಂಪೂರ್ಣವಾಗಿ ಹೃತ್ಪೂರ್ವಕವಾಗಿದೆ ಮತ್ತು ಈ ನವಿರಾದ ವಯಸ್ಸಿನಲ್ಲಿ ಅವರ ಸಮರ್ಪಣೆ ಶ್ಲಾಘನೀಯವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಸಾಮಾಜಿಕ ಜಾಲತಾಣ (Social Media) ಗಳಲ್ಲಿ‌ ಫೋಟೋಗಳು ಬಹಿರಂಗವಾಗಿದ್ದಷ್ಟೇ ಅಲ್ಲ, ಅದು ಬಾಲಕಿಯ ನಸೀಬನ್ನೇ ಬದಲಾಯಿಸಿದೆ. ಮಣಿಪುರ (Manipur)ದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ (Th.Biswajit Singh), ಆ ವಿದ್ಯಾರ್ಥಿನಿಯ ಶೈಕ್ಷಣಿಕ ಜೀವನದ ಹೊಣೆ ಹೊತ್ತಿಕೊಂಡಿದ್ದಾರೆ. ಪದವಿ ಮುಗಿಯುವವರೆಗೆ ಬಾಲಕಿಯ ಶಿಕ್ಷಣವನ್ನು ನೋಡಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಬಹಿರಂಗವಾಗುತ್ತಿದ್ದಂತೆ ಸಚಿವರು, ಚಿಕ್ಕ ಹುಡುಗಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಬಾಲಕಿ ಮೈನಿಂಗ್ಸಿನ್ಲಿ (Meiningsinliu Pamei) ಯು  ಅವರನ್ನು ಇಂಫಾಲ್ (Imphal) ಗೆ ಕರೆತರುವಂತೆ ಹೇಳಿದ್ದಾರೆ. ಮೈನಿಂಗ್ಸಿನ್ಲಿಯು ಅವರ ಪದವಿ ಮುಗಿಯುವವರೆಗೆ ಅವರ ಶಿಕ್ಷಣವನ್ನು ನೋಡಿಕೊಳ್ಳುತ್ತಾರಂತೆ ಸಚಿವ ಸಿಂಗ್. 

Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ

 

 

ಅಂದಹಾಗೆ ಮೈನಿಂಗ್ಸಿನ್ಲಿಯು ಕುಟುಂಬವು ಉತ್ತರ ಮಣಿಪುರದ ತಮೆಂಗ್ಲಾಂಗ್ (Tamenglong) ಜಿಲ್ಲೆಯಲ್ಲಿ ನೆಲೆಸಿದೆ. ಮೈನಿಂಗ್ಸಿನಿಯು ಡೈಲಾಂಗ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ತಮೆಂಗ್ಲಾಂಗ್ ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಹುಡುಗಿಯ ಪೋಷಕರು ಹಗಲಿನಲ್ಲಿ ತಮ್ಮ ಮನೆಯಿಂದ ಬೇಸಾಯಕ್ಕಾಗಿ ಹೊರಗಿದ್ದ ಕಾರಣ, ಸುಮಾರು 2 ವರ್ಷ ವಯಸ್ಸಿನ ತನ್ನ ಸಹೋದರಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ತನ್ನ ತರಗತಿಗಳಿಗೆ ಹಾಜರಾಗುತ್ತಿದ್ದಳು. ಈ ಬಾಲಕಿಯ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಇದೀಗ ಆಕೆಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಸದ್ಯ ಬಾಲಕಿಗೆ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಶಿಕ್ಷಣಕ್ಕಾಗಿ ಆಕೆಯ ನಿಷ್ಠೆ ನನ್ನನ್ನು ಬೆರಗುಗೊಳಿಸಿದೆ ಅಂತ ಸಚಿವ ಸಿಂಗ್ ಹೇಳಿದ್ದಾರೆ. ಒಟ್ಟಾರೆಯಾಗಿ ಪುಟ್ಟ ಪೋರಿಯ ತಂಗಿ ಮೇಲಿನ ಮಮತೆ, ಇದೀಗ ಅವಳ ಬದುಕಿನ ಗತಿಯನ್ನೇ ಬದಲಿಸಿಬಿಟ್ಟಿದೆ. ಇದೇ ರೀತಿ ಭವಿಷ್ಯದಲ್ಲಿ ದಿಟ್ಟೆಯಾಗಿ ಎತ್ತರಕ್ಕೆ  ಬೆಳೆಯಲಿ ಅನ್ನೋದೇ ಎಲ್ಲರ ಆಶಯ.

Latest Videos
Follow Us:
Download App:
  • android
  • ios