Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ

ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾಗಿರುವ ಕನ್ನಡಪ್ರಭದಲ್ಲಿ ಉದ್ಯೋಗ ಅವಕಾಶವಿದ್ದು, ನುರಿತ ವೃತ್ತಿಪರರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಎಪ್ರಿಲ್ 12 , 2022 ಆಗಿದೆ. 

Kannadaprabha Recruitment 2022 notification for various post gow

ಬೆಂಗಳೂರು(ಎ.5): ಪತ್ರಕರ್ತರಾಗಲು ಇಚ್ಚಿಸುತ್ತಿದ್ದೀರಾ? ಅಥವಾ ಮಾದ್ಯಮದಲ್ಲಿ ಕೆಲಸ ಹುಡುಕುತ್ತಿದ್ದೀರಿ ಇಲ್ಲಿದೆ ಸುವರ್ಣಾವಕಾಶ. ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾಗಿರುವ ಕನ್ನಡಪ್ರಭದಲ್ಲಿ ಉದ್ಯೋಗ ಅವಕಾಶವಿದ್ದು, ನುರಿತ ವೃತ್ತಿಪರರಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು (Bengaluru) ಸೇರಿ ಕನ್ನಡಪ್ರಭದ (Kannadaprbha) ಯಾವುದೇ ಆವೃತ್ತಿಯಲ್ಲು ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತರು ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು  ಅವಕಾಶವಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನ ಎಪ್ರಿಲ್ 12 , 2022 ಆಗಿದೆ.

ಹುದ್ದೆಗಳ ಮಾಹಿತಿ ವಿವರ ಇಂತಿದೆ:
ಟ್ರೈನಿ ಸಂಪಾದಕರು (Trainee Sub Editor): ಈಗಷ್ಟೇ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮುಗಿಸಿದವರಿಗೆ ಅವಕಾಶ ವಿದ್ದು, ಪ್ರತಿಕೋದ್ಯಮ ಓದಿದವರು. ಕನ್ನಡ ಭಾಷೆಯಲ್ಲಿ ಪ್ರೌಢಿಮೆ , ಇಂಗ್ಲಿಷ್-ಕನ್ನಡ ಅನುವಾದ ಬಲ್ಲವರಿಗೆ ಆದ್ಯತೆ ನೀಡಲಾಗುವುದು.

ಉಪಸಂಪಾದಕ (Sub Editor): ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ. ಪತ್ರಿಕಾವೃತ್ತಿಯಲ್ಲಿ ಒಂದೆರಡು ವರ್ಷಗಳ ಅನುಭವ ಕಡ್ಡಾಯ. ಕನ್ನಡ , ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ ಇರುವ ಉತ್ಸಾಹಿ ಯುವಕ/ಯುವತಿಯರಿಗೆ ಆದ್ಯತೆ ನೀಡಲಾಗುವುದು.

UDUPI DISTRICT COURT RECRUITMENT 2022 : ಒಟ್ಟು 17 ಪಿಯೋನ್ ಹುದ್ದೆಗಳಿಗೆ ನೇಮಕಾತಿ

ಪುಟ ವಿನ್ಯಾಸಕಾರ (Page Designer): ದಿನಪತ್ರಿಕೆ ಪುಟ ವಿನ್ಯಾಸದಲ್ಲಿ ಕನಿಷ್ಠ 1 ರಿಂದ 2 ವರ್ಷಗಳ ಅನುಭವ ಇದ್ದು, ಇನ್‌ಡಿಸೈನ್‌, ಫೋಟೋಶಾಪ್ ಅಥವಾ ಸ್ಟ್ರೇಟರ್ ನುರಿತರಿಗೆ ಅವಕಾಶ ಇದೆ. ಮತ್ತಷ್ಟಯ ತಂತ್ರಾಂಶಗಳ ಬಗ್ಗೆ ಪರಿಣಿತಿ ಇದ್ದರೆ ಉತ್ತಮ.

ಅರ್ಜಿ ಸಲ್ಲಿಸಬೇಕಾದ ವಿಳಾಸ: 
ಅರ್ಜಿ ಸಲ್ಲಿಸಬೇಕಾದ ಈ ಮೇಲ್ ವಿಳಾಸ: hr@kannadaprabha.in
ಆಫ್‌ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಚಿಸಿದರೆ ಕನ್ನಡಪ್ರಭ ನೇಮಕಾತಿಗೆ ಡಂದು ಸ್ಪಷ್ಟವಾಗಿ ನಮೂದಿಸಿ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.
ಕನ್ನಡಪ್ರಭ,
ನೇಮಕಾತಿ ವಿಭಾಗ ,
ನಂ.36, ಕ್ರೆಸೆಂಟ್ ರಸ್ತೆ,
ಮಲ್ಲಿಗೆ ಆಸ್ಪತ್ರೆ ಎದುರು,
ಬೆಂಗಳೂರು -560001

ವರ್ಗಾವಣೆ ಆದೇಶ ಪ್ರಕಟಿಸಿದ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಏ.8 ರಂದು ಕೌನ್ಸೆಲಿಂಗ್ 

ಉಪನ್ಯಾಸಕ ಹುದ್ದೆಗಳಿಗೆ ವಿಮ್ಸ್ ನೇಮಕಾತಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ (Vijayanagar Institute of Medical Sciences) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ  ಬಿಡುಗಡೆ ಮಾಡಿದೆ. ಸಹಾಯಕ ಪ್ರಾಧ್ಯಾಪಕ (Assistant Professor), ಪ್ರಾಧ್ಯಾಪಕ (Professor) ಮತ್ತು ಸಹ ಪ್ರಾಧ್ಯಾಪಕ (Associate Professor) ಒಟ್ಟು  3 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಇಚ್ಚಿಸುವವರು  ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಎಪ್ರಿಲ್ 12, 2022ರಂದು ಬೆಳಗ್ಗೆ 9 ಗಂಟೆಯಿಂದ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವೆಬ್‌ಸೈಟ್‌ : www.vimsbellary.org.in ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ Ph.D, ಪದವಿ ಮಾಡಿರಬೇಕು.

ಅರ್ಜಿ ಶುಲ್ಕ:  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕು.

ನೇರ ಸಂದರ್ಶನ ನಡೆಯುವ ಸ್ಥಳ: 
ನಿರ್ದೇಶಕರು,
ವಿಮ್ಸ್ ಕ್ಯಾಂಪಸ್,
ಕಂಟೋನ್ಮೆಂಟ್, ಬಳ್ಳಾರಿ,
ಕರ್ನಾಟಕ

Latest Videos
Follow Us:
Download App:
  • android
  • ios