ಪುಟ್ಟ ತಂಗಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ

  • ತಾಯಿಯ ಕರ್ತವ್ಯ ನಿಭಾಯಿಸುತ್ತಿರುವ 10 ವರ್ಷದ ಬಾಲಕಿ
  • ಹಸುಗೂಸು ತಂಗಿಯೊಂದಿಗೆ ತರಗತಿಗೆ ಹಾಜರು
  • ಶಿಕ್ಷಣದೆಡೆಗಿನ ಆಕೆಯ ಸಮರ್ಪಣೆಗೆ ನೆಟ್ಟಿಗರ ಶ್ಲಾಘನೆ
     
Manipur girl attends classes with younger sister in lap akb

ಮಣಿಪುರ(ಏ.4): ಹತ್ತು ವರ್ಷದ ಪುಟ್ಟ ಬಾಲಕಿಯೊಬ್ಬಳು ಶಾಲೆಗೆ ತನ್ನ ಪುಟ್ಟ ತಂಗಿಯನ್ನು ಕರೆದುಕೊಂಡು ಬರುತ್ತಿದ್ದು, ಆಕೆಯನ್ನು ಮಡಿಲಲ್ಲಿ ಕೂರಿಸಿಕೊಂಡು ಈಕೆ ಪಾಠ ಕೇಳುತ್ತಾಳೆ. ಆಕೆಯ ಬಾಲಕಿ ಆದರೂ ಆಕೆ ತನ್ನ ಹಸುಗೂಸು ತಂಗಿಯನ್ನು ನೋಡಿಕೊಳ್ಳುವ ಅನಿವಾರ್ಯತೆಯ ಜೊತೆ ತಾಯಿ ಪ್ರೇಮ ಮೆರೆಯುತ್ತಿದ್ದಾಳೆ. ಇದಕ್ಕೆ ಕಾರಣ ಬಡತನ. ಬಡತನದ ಕಾರಣಕ್ಕೆ ಪೋಷಕರು ಈಕೆಯ ತಾಯಿ ಹೊಟ್ಟೆಪಾಡಿಗಾಗಿ ದುಡಿಯಲೇ ಬೇಕು ಮಗು ನೋಡುತ್ತಾ ಕುಳಿತರೆ ಬದುಕಿನ ಬಂಡಿ ಸಾಗದು ಇದರ ಅರಿವಿರುವ ಬಾಲಕಿ ತನ್ನ ಪುಟ್ಟ ತಂಗಿಯ ಆರೈಕೆ ಜೊತೆ ತನ್ನ ಶಿಕ್ಷಣದ ಕನಸನ್ನು ಪೂರ್ತಿಯಾಗಿಸಿಕೊಳ್ಳುತ್ತಿದ್ದಾಳೆ. 

ಸಾಂತ್ವನವಾಗಲಿ ಅಥವಾ ಶಿಶುಪಾಲನೆಯಾಗಲಿ, ಕಾಳಜಿಯ ಕಲೆ ಕೆಲವು ಮಕ್ಕಳಿಗೆ ಸ್ವಾಭಾವಿಕವಾಗಿ ಬರುತ್ತದೆ. ಬಹಳ ಹಿಂದೆಯೇ, ಅರುಣಾಚಲ ಪ್ರದೇಶದ ಪುಟ್ಟ ಹುಡುಗಿಯೊಬ್ಬಳು ಅಳುತ್ತಿದ್ದ ತನ್ನ ಭಾವನಾತ್ಮಕ ಸಹಪಾಠಿಯನ್ನು ಸಮಾಧಾನಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಅಪ್ಪ ಅಮ್ಮನಿಗಾಗಿ ಹಾಡಿದ ಸರ್ಕಾರಿ ಶಾಲೆ ಪುಟ್ಟ ಬಾಲಕಿ... ಸುಶ್ರಾವ್ಯ ಕಂಠಕ್ಕೆ ಭೇಷ್ ಎಂದ ನೆಟ್ಟಿಗರು

ಈ ಬಾರಿ, 10 ವರ್ಷದ ಮಣಿಪುರಿ ಬಾಲಕಿ ತನ್ನ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಯಲ್ಲಿ ಕುಳಿತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ ಮತ್ತು ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ ಗಮನವನ್ನು ಕೂಡ ಇದು ಸೆಳೆದಿದೆ. 4 ನೇ ತರಗತಿಯ 10 ವರ್ಷದ ವಿದ್ಯಾರ್ಥಿನಿ ಮೈನಿಂಗ್‌ಸಿನ್ಲಿಯು ಪಮೇಯ್ (Meiningsinliu Pamei) ಪೋಷಕರು ಕೃಷಿ ಕಾರ್ಯದಲ್ಲಿ ತೊಡಗುವುದರಿಂದ ಪುಟ್ಟ ಬಾಲೆಯನ್ನು ನೋಡಲು ಮನೆಯಲ್ಲಿ ಯಾರೂ ಇಲ್ಲ. ಹೀಗಾಗಿ ಚಿಕ್ಕ ತಂಗಿಯನ್ನು ಆಕೆಯೇ ಸಲಹುತ್ತಿದ್ದಾಳೆ.

 

ಈ ಫೋಟೋ ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ (Biswajit Singh) ಗಮನವನ್ನು ಸೆಳೆದಿದ್ದು,'ಶಿಕ್ಷಣಕ್ಕಾಗಿ ಆಕೆಯ ಸಮರ್ಪಣೆ ನನ್ನನ್ನು ಆಶ್ಚರ್ಯಗೊಳಿಸಿದೆ. ಮಣಿಪುರದ ತಮೆಂಗ್ಲಾಂಗ್‌ನ ಮೈನಿಂಗ್‌ಸಿನ್ಲಿಯು ಪಮೇಯ್ ಎಂಬ ಈ 10 ವರ್ಷದ ಬಾಲಕಿ ತನ್ನ ಸಹೋದರಿಯನ್ನು ಸಲಹುತ್ತಾಳೆ ಏಕೆಂದರೆ ಆಕೆಯ ಪೋಷಕರು ಹೊರಗೆ ದುಡಿಮೆಗೆ ಹೋಗುತ್ತಾರೆ. ತನ್ನ ತಂಗಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಆಕೆ ಅಧ್ಯಯನ ಮಾಡುತ್ತಾಳೆ ಎಂದು ಅವರು ಬರೆದುಕೊಂಡಿದ್ದಾರೆ.

ಕಾರ್ಮಿಕರಿಗೆ 48 ಸಾವಿರ ರೂ ನೀಡಿ ವಿಮಾನದಲ್ಲಿ ಕಳುಹಿಸಿದ ಬಾಲಕಿ; ಧನ್ಯವಾದ ಹೇಳಿದ ಸಿಎಂ!

ಅಲ್ಲದೇ ಈ ಪುಟ್ಟ ಬಾಲಕಿಯ ಪದವಿ ಮುಗಿಯುವವರೆಗೆ ಆಕೆಯ ಶಿಕ್ಷಣದ ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಸಿಂಗ್‌ ಭರವಸೆ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ನಾನು ಈ ಸುದ್ದಿಯನ್ನು ಗಮನಿಸಿದ ತಕ್ಷಣ, ನಾವು ಅವಳ ಕುಟುಂಬವನ್ನು ಸಂಪರ್ಕಿಸಿ ಅವಳನ್ನು ಇಂಫಾಲ್ (Imphal) ಗೆ ಕರೆ ತರುವಂತೆ ಕೇಳಿದೆವು. ಪದವಿ ಮುಗಿಯುವವರೆಗೆ ಆಕೆಯ ವಿದ್ಯಾಭ್ಯಾಸವನ್ನು ಖುದ್ದಾಗಿ ನೋಡಿಕೊಳ್ಳುತ್ತೇನೆ ಎಂದು ಕುಟುಂಬಸ್ಥರಿಗೆ ಹೇಳಿದ್ದೇನೆ. ಆಕೆಯ ಸಮರ್ಪಣಾ ಮನೋಭಾವದ ಬಗ್ಗೆ ಹೆಮ್ಮೆಯಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. 

ವರದಿಗಳ ಪ್ರಕಾರ, ಮೈನಿಂಗ್ಸಿನ್ಲಿಯು ಕುಟುಂಬವು ಉತ್ತರ ಮಣಿಪುರದ (Manipur) ತಮೆಂಗ್ಲಾಂಗ್ (Tamenglong) ಜಿಲ್ಲೆಯಲ್ಲಿ ನೆಲೆಸಿದೆ. ಆಕೆ ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಡೈಲಾಂಗ್ ಪ್ರಾಥಮಿಕ ಶಾಲೆಯಲ್ಲಿ (Dailong primary school) ಓದುತ್ತಿದ್ದಾರೆ.  ಶಿಕ್ಷಣ ಹಾಗೂ ಸಹೋದರಿಯ ಬಗ್ಗೆ ಚಿಕ್ಕ ಹುಡುಗಿಯ ಸಮರ್ಪಣಾಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇಂತಹ ಸಮರ್ಪಿತ ಮಕ್ಕಳು ನಮ್ಮನ್ನು ಮೂಕರನ್ನಾಗಿಸುತ್ತಾರೆ ಆದರೆ ಅವರು ಈ ರಾಷ್ಟ್ರದ ಹೆಮ್ಮೆ ರಾಷ್ಟ್ರ ಇಂತಹ ಸಧೃಡವಾದ ದೇಶವೇ ಹೆಮ್ಮೆ ಪಡುವ ಮಕ್ಕಳನ್ನು ನಮಗೆ ನೀಡುತ್ತಲೇ ಇದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಎಳೆಯ ವಯಸ್ಸಿನಲ್ಲಿ ಅವರ ಸಮರ್ಪಣೆ ಶ್ಲಾಘನೀಯವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
 

Latest Videos
Follow Us:
Download App:
  • android
  • ios