Asianet Suvarna News Asianet Suvarna News

FASTag Toll Collection ಟೋಲ್ ಸಂಗ್ರಹದಲ್ಲಿ ದಾಖಲೆ, ಪ್ರತಿ ದಿನ 119 ಕೋಟಿ ರೂಪಾಯಿ!

  • FASTag ಟೋಲ್ ಸಂಗ್ರಹದಲ್ಲಿ ದಾಖಲೆ ಬರದೆ ಭಾರತ
  • ಡಿಸೆಂಬರ್ ತಿಂಗಳಲ್ಲಿ 3,679 ಕೋಟಿ ರೂಪಾಯಿ ಸಂಗ್ರಹ
  • ಕೇಂದ್ರದ ಡಿಜಿಟಲೈಸೇಶನ್‌ನಿಂದ ಸೋರಿಕೆಗೆ ಬ್ರೇಕ್
FASTag Toll Collection Jumps to Record rs 3679 crore In December 2021 National Payments Corporation reports ckm
Author
Bengaluru, First Published Jan 3, 2022, 5:57 PM IST

ನವದೆಹಲಿ(ಜ.03):  ಡಿಜಿಟಲ್ ಇಂಡಿಯಾದಿಂದ(Digital India) ಭಾರತದಲ್ಲಿ ಹಲವು ಅಮೂಲಾಗ್ರ ಬದಲಾವಣೆಗಳಾಗಿದೆ. ಇದರಲ್ಲಿ ಟೋಲ್ ಸಂಗ್ರಹ(Toll Collection) ಕೂಡ ಒಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಟೋಲ್ ಪಾವತಿಗೆ FASTag ಕಡ್ಡಾಯ ಮಾಡಲಾಗಿದೆ. ಇದರಿಂದ  ದೇಶದಲ್ಲಿ ಇದೀಗ ದಾಖಲೆ ಟೋಲ್ ಸಂಗ್ರಹವಾಗುತ್ತಿದೆ. ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯ ಇದೀಗ ಡಿಸೆಂಬರ್ 2021ರ ಟೋಲ್ ಸಂಗ್ರಹದ ಅಂಕಿಅಂಶ ಬಹಿರಂಗ ಪಡಿಸಿದೆ. ದೇಶದಲ್ಲಿನ ಟೋಲ್ ಸಂಗ್ರಹದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ಡಿಸೆಂಬರ್ 2021ರಲ್ಲಿ 3,679 ಕೋಟಿ ರೂಪಾಯಿ FASTag ಮೂಲಕ ಟೋಲ್‌ಗೇಟ್‌ಗಳಲ್ಲಿ ಸಂಗ್ರಹವಾಗಿದೆ. ಸರಾಸರಿ ನೋಡುವುದಾದರೆ ಡಿಸೆಂಬರ್(December Month 2021) ತಿಂಗಳಲ್ಲಿ ಪ್ರತಿ ದಿನ 119 ಕೋಟಿ ರೂಪಾಯಿ ಸಂಗ್ರಹವಾಗಿದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ ಒಂದು ತಿಂಗಳಲ್ಲಿ 502 ಕೋಟಿ ರೂಪಾಯಿ ಏರಿಕೆ ಕಂಡಿದೆ. 2020ರ ಸಾಲಿಗೆ ಹೋಲಿಸಿದರೆ 2021ರಲ್ಲಿ ಟೋಲ್ ಸಂಗ್ರಹದಲ್ಲಿ 1,375 ಕೋಟಿ ರೂಪಾಯಿ ಏರಿಕೆ ಕಂಡಿದೆ. 2020ರ 12 ತಿಂಗಳಲ್ಲಿ  2,304 ಕೋಟಿ ರೂಪಾಯಿ ಸಂಗ್ರವಾಗಿತ್ತು.

100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!

2021 ಫೆಬ್ರವರಿ ತಿಂಗಳಿನಿಂದ ಎಲ್ಲಾ ವಾಹನಗಳಿಗೆ FASTag ಕಡ್ಡಾಯ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಬರಬೇಕಿದ್ದ ಹಣ ಸೋರಿಕೆಯಾಗುತ್ತಿರುವುದು ತಡೆಯಲಾಗಿದೆ. ಇದಕ್ಕಿಂತ ಮುಖ್ಯವಾಗಿ ಪ್ರಯಾಣಿಕರು ಗಂಟೆ ಗಟ್ಟಲೇ ಟೋಲ್ ಗೇಟ್ ಬಳಿ ಕಾಯಬೇಕಾದ ಪ್ರಸಂಗ ಇಲ್ಲವಾಗಿದೆ. FASTag ಮೂಲಕ ಯಾವುದೇ ಅಡೆ ತಡೆ ಇಲ್ಲದೆ ಯಾರನ್ನೂ ಕಾಯದೇ ನೇರವಾಗಿ ಸಂಚರಿಸಲು ಸಾಧ್ಯವಿದೆ. 

ಸದ್ಯ ಶೇಕಡಾ 98 ರಷ್ಟು ಟೋಲ್ ಹಣ FASTag ಮೂಲಕವೇ ಸಂಗ್ರವಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ವಾಹನಗಳಿಗೆ FASTag ಅಳವಡಿಕೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರಕ್ಕೆ ಇದೀಗ ಟೋಲ್ ಸಂಗ್ರಹ ನಿಖರವಾದ ವಿವರ ನೀಡಲು ಸಾಧ್ಯವಾಗುತ್ತಿದೆ. ಇನ್ನು ಜನರು ಹೆಚ್ಚಿನ ವಾಹನ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಟೋಲ್ ಸಂಗ್ರಹ ಕೂಡ ಹೆಚ್ಚಾಗುತ್ತಿದೆ.

ಸುಲಭವಾಗಿ FASTag ಲಭ್ಯ
ಹೊಸ ವಾಹನ ಖರೀದಿಸುವಾಗ ಕಡ್ಡಾಯವಾಗಿ FASTag ಕೂಡ ಖರೀದಿಸಬೇಕು. ಕಾರು ಡೀಲರ್‌ಗಳೇ ಈ ಫಾಸ್ಟ್‌ಟ್ಯಾಗ್ ನೀಡುತ್ತಾರೆ. ಆದರೆ ಹೇಳ ವಾಹನ ಅಥವಾ ಇದುವರೆಗೆ FASTag ಇಲ್ಲದಿರುವ ವಾಹನಕ್ಕೆ ಅಳವಡಿಕೆ ಕೂಡ ಅಷ್ಟೇ ಸುಲಭವಾಗಿದೆ. FASTag ಸುಲಭ ಹಾಗೂ ಸರಳವಾಗಿ ಎಲ್ಲಾ ಕಡೆಗಳಲ್ಲಿ ಲಭ್ಯವಿದೆ.  ಇನ್ನು ಟೋಲ್‌ಗೇಟ್ ಬಳಿ ಕೂಡ FASTag ಲಭ್ಯವಿದೆ. ಐಸಿಸಿಐ, ಹೆಚ್‌ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್, UPI ಪೇಮೆಂಟ್ ಸೇವೆ ನೀಡುವ ಸಂಸ್ಥೆಗಳ FASTag ಲಭ್ಯವಿದೆ. 

ಫಾಸ್ಟ್ಯಾಗ್‌ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ!

FASTagನ್ನು  ಕಾರು ಅಥವಾ ವಾಹನದ ರಿಜಿಸ್ಟ್ರೇಶನ್ ನಂಬರ್ ಜೊತೆ ಜೋಡಣೆ ಮಾಡಿ ನೀಡಲಾಗುತ್ತದೆ. ಕಾರಿನ ಮುಂಭಾಗದ ಗಾಜಿಗೆ FASTag ಅಂಟಿಸಬೇಕು. ಬಳಿಕ ಪ್ರಯಾಣಕ್ಕೆ ಅನುಸರಿಸಿ ಅಥವಾ ಇಂತಿಷ್ಟು ಹಣವನ್ನು ನಿಮ್ಮ FASTag ಖಾತೆಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕು. ಇಷ್ಟು ಮಾಡಿದರೆ ಕೆಲಸ ಮುಗೀತು. ಇನ್ನು ಪ್ರಯಾಣದ ವೇಳೆ ಟೋಲ್‌ಗೇಟ್ ಬಳಿ ಅಳವಡಿಸಿರುವ ಲೇಸರ್ ರೀಡರ್ ಮೂಲಕ FASTag ಸ್ಕ್ಯಾನ್ ಮಾಡಲಿದೆ. ಈ ವೇಳೆ ಪ್ರತಿ ಟೋಲ್‌ಗೇಟ್ ಬಳಿ ಟೋಲ್ ಹಣ ಕಡಿತಗೊಳ್ಳಲಿದೆ. ಈ ಎಲ್ಲಾ ಪ್ರಕ್ರಿಯೆ ಆನ್‌ಲೈನ್ ಮೂಲಕವೇ ನಡೆಯಲಿದೆ. FASTagನಿಂದ ಟೋಲ್ ಗೇಟ್ ಬಳಿಕ ಹಣದ ನಗದು ವ್ಯವಹಾರಗಳಿಲ್ಲ. ಹಣ ನೀಡಿ ಚೀಟಿ, ಚಿಲ್ಲರೆ ಪಡೆದು ಮುಂದೆ ಸಾಗುವ ಅಡೆತಡೆಯೂ ಇಲ್ಲ. ಇದರಿಂದ ಪ್ರಯಾಣಿಕರ ಅಮೂಲ್ಯ ಸಮಯ ಕೂಡ ಉಳಿತಾಯವಾಗಲಿದೆ.

Follow Us:
Download App:
  • android
  • ios