ಫಾಸ್ಟ್ಯಾಗ್ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ!
ನಗರ ವ್ಯಾಪ್ತಿಯ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ| ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ| ಕೇವಲ ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೂ ಫಾಸ್ಟ್ಯಾಗ್ ಹಾಕಿಸಿ| ಫಾಸ್ಟ್ಯಾಗ್ ಇಲ್ಲದೇ ಹೋದರೆ 200 ರು.ನಿಂದ 500 ರು. ದಂಡ| ಏ.1ರಿಂದ ವಾಹನ ವಿಮಾ ನವೀಕರಣಕ್ಕೂ ಫಾಸ್ಟ್ಯಾಗ್ ಕಡ್ಡಾಯ| ಹೊಸ ಮೋಟಾರು ವಾಹನ ಕಾಯ್ದೆಯಲ್ಲಿದೆ ಈ ನಿಯಮ
ನವದೆಹಲಿ(ಫೆ.16): ಹೆದ್ದಾರಿಗಳ ಟೋಲ್‌ಗೇಟ್ ಮೂಲಕ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಿದ್ದಾಯಿತು. ಹಾಗಂತ ಕೇವಲ ನಗರಗಳ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಹಾಕಿಸುವ ಅಗತ್ಯವೇನೂ ಇಲ್ಲ ಎಂದು ಸುಮ್ಮನಾಗಬೇಡಿ. ಇಂಥ ವಾಹನಗಳಿಗೂ ಈಗ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ಯಾಗ್ ಇರದೇ ಹೋದರೆ 200ರಿಂದ 500 ರು. ದಂಡ ತೆರಬೇಕಾಗುತ್ತದೆ!
"
ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯ, ತಪ್ಪಿದರೆ ಡಬಲ್ ಸುಂಕ!
ಹೌದು. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ನಿಯಮಗಳಲ್ಲೇ ಈ ಅಂಶವನ್ನು ನಮೂದಿಸಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸದೇ ಹೋದ ಅಥವಾ ನಗರ ವ್ಯಾಪ್ತಿಯಲ್ಲಿ ಮಾತ್ರ ಸೀಮಿತವಾಗಿ ಸಂಚರಿಸುವ 4 ಚಕ್ರ ವಾಹನಗಳು ಹಾಗೂ ಅದಕ್ಕಿಂತ ಮೇಲ್ಪಟ್ಟದರ್ಜೆಯ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಲೇಬೇಕು ಎಂದು ತಿಳಿಸಲಾಗಿದೆ. ಜನವರಿ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಇನ್ನು ಏಪ್ರಿಲ್ 4ರಿಂದ ವಾಹನ ವಿಮಾ ನವೀಕರಣಕ್ಕೂ ಫಾಸ್ಟ್ಯಾಗ್ ಕಡ್ಡಾಯ.
ಒಂದು ವೇಳೆ ಫಾಸ್ಟ್ಯಾಗ್ ಇಲ್ಲದೇ ಊರೊಳಗೆ ವಾಹನ ಸಂಚರಿಸುತ್ತಿರುವುದು ಕಂಡು ಬಂದರೆ ಮೊದಲ ಸಲ 200 ರು. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಸಿಕ್ಕಿಬಿದ್ದರೆ 500 ರು. ದಂಡ ವಿಧಿಸಲಾಗುತ್ತದೆ.
ವಾಹನ ವಿವರ ಮಾರಾಟದಿಂದ 111 ಕೋಟಿ ರೂ. ಗಳಿಕೆ!
2017ರ ನಂತರ ಉತ್ಪಾದನೆಯಾದ ಹೊಸ ಕಾರುಗಳಿಗೆ, ಉತ್ಪಾದನಾ ಹಂತದಲ್ಲೇ ಫಾಸ್ಟ್ಯಾಗ್ ಅಳವಡಿಸಲಾಗಿದೆ. ಆದರೆ ಇದಕ್ಕೂ ಮುನ್ನ ಉತ್ಪಾದನೆಯಾದ ವಾಹನಗಳು ಸೇರಿದಂತೆ 2 ಕೋಟಿ 4 ಚಕ್ರ ವಾಹನಗಳು ಈವರೆಗೂ ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.