ಬಸ್ ಡ್ಯಾಶ್‌ಬೋರ್ಡ್ ಮೇಲೆ ಡ್ರೈವರ್ ಫ್ಯಾಮಿಲಿ ಫೋಟೋ ಕಡ್ಡಾಯ, ಸಾರಿಗೆ ಇಲಾಖೆ ಹೊಸ ಪ್ಲಾನ್!
ರಸ್ತೆ ಅಪಘಾತ ತಗ್ಗಿಸಲು ಯುಪಿ ಸಾರಿಗೆ ಇಲಾಖೆ ಹೊಸ ಪ್ಲಾನ್ ಮಾಡಿದೆ. ಸಾರಿಗೆ ಬಸ್ ಚಾಲಕರು ತಮ್ಮ ಬಸ್ ಡ್ಯಾಶ್‌ಬೋರ್ಡ್ ಮೇಲೆ ಕಟುಂಬದ ಫೋಟೋ ಅಂಟಿಸಲು ಸೂಚಿಸಿದೆ. ಈ ಮೂಲಕ ಅತೀ ವೇಗದಿಂದ ಆಗುವ ರಸ್ತೆ ಅಪಘಾತ ಪ್ರಮಾಣ ತಪ್ಪಿಸಲು ಹೊಸ ಪ್ಲಾನ್ ಮಾಡಿದೆ.
ಲಖನೌ(ಏ.18) ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸಲು ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಹಲವು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಸಾರಿಗೆ ಇಲಾಖೆ ಹೊಸ ಪ್ಲಾನ್ ಜಾರಿ ಮಾಡಿದೆ. ಅತೀ ವೇಗದಿಂದ ಆಗುವ ರಸ್ತೆ ಅಪಘಾತಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸಾರಿಗೆ ಬಸ್ ಚಾಲಕರು ಬಸ್ ಡ್ಯಾಶ್‌ಬೋರ್ಡ್ ಮೇಲೆ ತಮ್ಮ ಕುಟುಂಬದ ಫೋಟೋ ಅಂಟಿಸುಲು ಸೂಚಿಸಿದೆ. ಈ ಮೂಲಕ ಚಾಲಕ ಅತೀ ವೇಗದಿಂದ ಪ್ರಯಾಣ ಮಾಡದಂತೆ ತಡೆಯಲು ಭಾವನಾತ್ಮಕವಾಗಿ ಜಾಗೃತಿ ಮೂಡಿಸುತ್ತಿದೆ.
ಸಾರಿಗೆ ಇಲಾಖೆ ಕಮಿಷನರ್ ಚಂದ್ರ ಭೂಷನ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರು ಚಾವು ಚಾಲನೆ ಮಾಡುವ ಬಸ್ ಡ್ಯಾಶ್‌ಬೋರ್ಡ್ ಮೇಲೆ ಕುಟುಂಬದ ಫೋಟೋ ಅಂಟಿಸಲು ಸೂಚಿಸಿದೆ. ಈ ಮೂಲಕ ಬಸ್ ಚಾಲಕರು ಭಾವನಾತ್ಮಕವಾಗಿ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್ಆರ್‌ಟಿಸಿ, ಕಡ್ಡಾಯ ನಿಯಮ ಜಾರಿಗೆ
ಫ್ಯಾಮಿಲಿ ಫೋಟೋ ಕಾರಣದಿಂದ ಬಸ್ ಅತೀವೇಗದಿಂದ ಚಲಾಯಿಸುವವರ ಪ್ರಮಾಣ ಕೊಂಚ ತಗ್ಗಲಿದೆ. ಇನ್ನು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಪ್ರೇರಿಪಿಸಲಿದೆ. ಇದರಿಂದ ಅತೀ ವೇಗ, ರಸ್ತೆ ಸುರಕ್ಷತಾ ನಿಯಮಗಳಿಂದಾಗುವ ಅಪಘಾತಗಳ ಪ್ರಮಾಣ ಕಡಿಮೆಯಾಗಲಿದೆ. ಪ್ರಮಾಣ ಗಣನೀಯವಾಗಿ ಇಳಿಕೆಯನ್ನು ನಿರೀಕ್ಷಿಸುತ್ತಿಲ್ಲ. ಆದರೆ ಹಂತ ಹಂತವಾಗಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಯುಪಿ ಸಾರಿಗೆ ಇಲಾಖೆ ಹೇಳಿದೆ.
ಬಸ್ ಡ್ಯಾಶ್‌ಬೋರ್ಡ್ ಮೇಲೆ ಫ್ಯಾಮಿಲಿ ಫೋಟೋ ಅಂಟಿಸಿ ರಸ್ತೆ ಅಪಘಾತದ ಪ್ರಮಾಣ ತಗ್ಗಿಸುವ ಪ್ರಯೋಗ ಇದೇ ಮೊದಲಲ್ಲ. ಆಂಧ್ರ ಪ್ರದೇಶದಲ್ಲಿ ಈ ರೀತಿ ಪ್ರಯೋಗ ಮಾಡಲಾಗಿದೆ. ಇದರಿಂದ ಬಸ್ ಮೂಲಕ ಆಗುತ್ತಿದ್ದ ಅಪಘಾತಗಳ ಪ್ರಮಾಣ ತಗ್ಗಿದೆ. ಆಂಧ್ರ ಪ್ರದೇಶದಲ್ಲಿ ಈ ಪ್ಲಾನ್ ಯಶಸ್ವಿಯಾಗಿರುವ ಕಾರಣ, ಇದೇ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ.
ಕರ್ನಾಟಕದಲ್ಲಿ ವಾಹನ ರಿಜಿಸ್ಟ್ರೇಶನ್‌ಗೆ ಹೆಚ್ಚುವರಿ 3% ಸೆಸ್, ಇವಿಗೆ ಲೈಫ್ ಟೈಮ್ ತೆರಿಗೆ ಹಾಕಿದ ಸರ್ಕಾರ!
ರಸ್ತೆ ಅಪಘಾತದಿಂದ ಆಗುತ್ತಿರುವ ಸಾವು ನೋವಿನ ಪ್ರಮಾಣ ಹೆಚ್ಚು. ಇದಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ನಗರ, ಹೆದ್ದಾರಿ, ಗ್ರಾಮೀಣ ಪ್ರದೇಶಗಳಲ್ಲೂ ಅಪಘಾತದ ಪ್ರಮಾಣ ಹೆಚ್ಚಾಗಿದೆ.