Asianet Suvarna News Asianet Suvarna News

Driving Without DL ಲೈಸೆನ್ಸ್ ಇಲ್ಲದೆ ಕಳೆದ 70 ವರ್ಷಗಳಿಂದ ಸತತ ಡ್ರೈವಿಂಗ್, 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ!

  • 12ನೇ ವಯಸ್ಸಿನಿಂದ ಡ್ರೈವಿಂಗ್ ಆರಂಭ, ಇದುವರೆಗೆ ಮಾಡಿಸಿಲ್ಲ ಲೈಸೆನ್ಸ್
  • ಕಾರಿನಲ್ಲೇ ಓಡಾಟ ಕಳೆದ 70 ವರ್ಷ ಯಾರ ಕೈಗೂ ಸಿಕ್ಕಿಬಿದ್ದಿಲ್ಲ
  • 83ನೇ ವಯಸ್ಸಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ, ಪೊಲೀಸರಿಗೆ ಆಶ್ಚರ್ಯ
     
83 year old man caught by police first time in 70 years after driving without licence in UK ckm
Author
Bengaluru, First Published Jan 30, 2022, 7:48 PM IST

ಲಂಡನ್(ಜ.30):  ಲೈಸೆನ್ಸ್ ಇಲ್ಲದೆ, ಇನ್ಶೂರೆನ್ಸ್ ಇಲ್ಲದೆ, ಎಮಿಶನ್ ಟೆಸ್ಟ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲ ವಾಹನ ಚಲಾಯಿಸುವುದು ನಿಯಮ ಉಲ್ಲಂಘನೆಯಾಗಿದೆ. ನಮ್ಮ ಬೆಂಗಳೂರು ಸೇರಿದಂತೆ ಯಾವುದೇ ಪ್ರದೇಶದಲ್ಲಿ ಒಂದು ವಾರವೂ ಬೇಡ, ಅಷ್ಟರಲ್ಲೇ ದುಬಾರಿ ದಂಡ ಕಟ್ಟಿ ಇನ್ನೆಂದು ತಪ್ಪು ಮಾಡದ ಪರಿಸ್ಥಿತಿ ಎದುರಾಗಿರುತ್ತದೆ. ಆದರೆ ಇಲ್ಲೊಬ್ಬ ಬರೋಬ್ಬರಿ 70 ವರ್ಷಗಳಿಂದ ಲೈಸೆನ್ಸ್(Driving licence), ವಿಮೆ(Insurance) ಸೇರಿದಂತೆ ಯಾವುದೇ ದಾಖಲೆ ಇಲ್ಲದೆ ಸತತವಾಗಿ ಕಾರಿನಲ್ಲಿ ಓಡಾಡಿದ್ದಾನೆ. ತನ್ನ 83ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪೊಲೀಸರ(Police) ಕೈಗೆ ಸಿಕ್ಕಿಬಿದ್ದ ಘಟನೆ ಲಂಡನ್‌ನಲ್ಲಿ ನಡೆದಿದೆ.

ಆತ 12ನೇ ವಯಸ್ಸಿಗೆ ಕಾರು ಡ್ರೈವಿಂಗ್ ಆರಂಭಿಸಿದ್ದಾನೆ. ಪೋಷಕರ ಕಾರು ಓಡಿಸಲು ಆರಂಭಿಸಿದ ಆತ ಬಳಿಕ ಸ್ವತಃ ಕಾರು ಖರೀದಿಸಿ ಪ್ರತಿ ದಿನ ಕಾರಿನಲ್ಲಿ ಓಡಾಟ ಮುಂದುವರಿಸಿದ್ದಾನೆ. ಆದರೆ ಕಳೆದ 70 ವರ್ಷಗಳಲ್ಲಿ ಒಂದು ಬಾರಿಯೂ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಈತನ ಕಾರಿಗೆ ರಿಜಿಸ್ಟ್ರೇಶನ್ ಕಾರ್ಡ್ ಹೊರತುಪಡಿಸಿದರೆ ಇನ್ಯಾವ ದಾಖಲೆಯೂ(Document) ಇಲ್ಲ. ಮೊದಲಿಗೆ ಈತನಲ್ಲಿ ಡ್ರೈವಿಂಗ್ ಲೆಸೆನ್ಸ್ ಇಲ್ಲವೇ ಇಲ್ಲ. ಇದುವರೆಗೂ ಮಾಡಿಸಿಕೊಂಡಿಲ್ಲ, ಕಾರು ವಿಮೆಯನ್ನು ಕಂಡಿಲ್ಲ. ತನ್ನ 83ನೇ ವಯಸ್ಸಿನಲ್ಲಿ ಅಂದರೆ ಕಾರು(Car) ಡ್ರೈವಿಂಗ್ ಆರಂಭಿಸಿದ 70 ವರ್ಷದ ಬಳಿಕ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಭಾರಿ ಸುದ್ದಿಯಾಗಿದ್ದಾರೆ.

Dwarf Driving licence:ಅವಮಾನ ಮೆಟ್ಟಿನಿಂತ ಶಿವಲಾಲ್, ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಕುಬ್ಜ ಹೆಗ್ಗಳಿಕೆ

ಪೊಲೀಸರು 83ರ ಹರೆಯದ ವೃದ್ಧನ ನಿಲ್ಲಿಸಿ ದಾಖಲೆ ಕೇಳಿದ್ದಾರೆ. ಈತನ ಬಳಿ ಯಾವ ದಾಖಲೆಯೂ ಇಲ್ಲ. ಇದುವರೆಗೂ ಲೈಸೆನ್ಸ್ ಮಾಡಿಸಿಲ್ಲ ಎಂದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಇಷ್ಟೇ ಅಲ್ಲ ವೃದ್ಧನ ಉತ್ತರದಿಂದ ಪೊಲೀಸರು ಸುಸ್ತಾಗಿದ್ದಾರೆ. ಕಾರಣ ಕಳೆದ 70 ವರ್ಷಗಳಿಂದ ಲೈಸೆನ್ಸ್ ಮಾಡಿಸದೆ ಇದುವರೆಗೆ ಯಾರ ಕೈಗೂ ಸಿಕ್ಕಿಬೀಳದೆ ಹೇಗೆ ಡ್ರೈವಿಂಗ್ ಮಾಡಲು ಸಾಧ್ಯ ಅನ್ನೋದು ಪೊಲೀಸರಿಗೂ ಬಗೆಹರಿಯ ಪ್ರಶ್ನೆಯಾಗಿ ಉಳಿದುಬಿಟ್ಟಿತು.

ಇಷ್ಟೇ ಅಲ್ಲ,ಕಳೆದ 70 ವರ್ಷದ ಡ್ರೈವಿಂಗ್‌ನಲ್ಲಿ ಅದೃಷ್ಠವಶಾತ್ ಯಾವುದೇ ಅಪಘಾತಕ್ಕೆ ಗುರಿಯಾಗಿಲ್ಲ. ಸಣ್ಣ ತಪ್ಪನ್ನು ಎಸಗಿಲ್ಲ. ಡ್ರೈವಿಂಗ್ ವಿಚಾರದಲ್ಲಿ ಪಕ್ಕಾ ಪರ್ಫೆಕ್ಟ್. ಸಿಗ್ನಲ್ ಜಂಪ್, ಹೈಸ್ಪೀಡ್ ಸೇರಿದಂತೆ ಯಾವುದೇ ಟ್ರಾಫಿಕ್ ನಿಯಮವನ್ನೂ ಉಲ್ಲಂಘಿಸಿಲ್ಲ. ಹೀಗಾಗಿ ಯಾವುದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದ ವೃದ್ಧನಿಗೆ ಪೊಲೀಸರು ದಂಡ ಹಾಕಿದ್ದಾರೆ.

ಡ್ರೈವಿಂಗ್‌ ಲೈಸನ್ಸ್‌ ಸೇರಿ 18 ಆರ್‌​ಟಿಒ ಸೇವೆ​ಗಳು ಆನ್‌​ಲೈ​ನ್‌​ನ​ಲ್ಲೇ

ಯುಕೆ ಪೊಲೀಸರು ಇದೇ ವೇಳೆ ಎಚ್ಚರಿಕೆಯನ್ನು ನೀಡಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ನಿಯಮ ಉಲ್ಲಂಘನೆ. ಇದು ಅಪಾಯಕಾರಿಯೂ ಹೌದು, ಕಾರಣ ಇಂತಹ ಘಟನೆಗಳು ಯಾರಿಗೂ ಮಾದರಿಯಾಗಬಾರದು. ಎಲ್ಲರೂ ಲೈಸೆನ್ಸ್ ಸೇರಿದಂತೆ ಎಲ್ಲಾ ದಾಖಲೆಯನ್ನು ಕಾಲಕ್ಕೆ ತಕ್ಕಂತೆ ನವೀಕರಣ ಮಾಡಿಕೊಳ್ಳಬೇಕು. ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘನೆ ಸಹಿಸುವುದಿಲ್ಲ. ಇದಕ್ಕೆ ವಯಸ್ಸು ಸೇರಿದಂತೆ ಇತರ ಯಾವುದೇ ಕಾರಣ ಪರಿಗಣಿಸಲು ಸಾಧ್ಯವಿಲ್ಲ ಎಂದು ಯುಕೆ ಪೊಲೀಸರು ಹೇಳಿದ್ದಾರೆ.

83ರ ಹರಯ ವೃದ್ಧಿ ಮಿನಿ ಕೂಪರ್ ಕಾರಿನಲ್ಲಿ ಎಂದು ಪ್ರಯಾಣಿಸುತ್ತಿದ್ದ. ಲೈಸೆನ್ಸ್ ಇಲ್ಲದೇ ಇಷ್ಟು ದಿನ ಡ್ರೈವಿಂಗ್ ಮಾಡಿದ ವೃದ್ಧನ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೈಸೆನ್ಸ್ ಇದ್ದವರು ಕಾರು ಚಲಾಯಿಸಲಿ, ಅಥವಾ ಲೈಸೆನ್ಸ್ ಪಡೆದುಕೊಳ್ಳಿ ಎಂದು ವೃದ್ಧನಿಗೆ ಪೊಲೀಸರು ಸೂಚಿಸಿದ್ದಾರೆ.

ಹೆಲ್ಮೆಟ್ ಧರಿಸದಿದ್ದರೆ ಮೂರು ತಿಂಗಳು ಲೈಸೆನ್ಸ್ ರದ್ದು!

ಲಂಡನ್‌ನಂತ ಹೈ ಸ್ಟಾಂಡರ್ಡ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಕ್ಯಾಮರ ಇದೆ. ಅತ್ಯಾಧುನಿಕ ತಂತ್ರಜ್ಞಾನವಿದೆ. ಯಾವ ಕಾರಿಗೆ ದಾಖಲೆ ಇಲ್ಲ, ವಿಮೆ ಮಾಡಿಲ್ಲ ಅನ್ನೋದು ಕ್ಷಣಮಾತ್ರದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ. ಎಲ್ಲವೂ ಅಚ್ಚುಕಟ್ಟಾಗಿರುವ ಲಂಡನ್‌ನಲ್ಲಿ ಈ ರೀತಿಯಾದರೆ ನಮ್ಮ ಬೆಂಗಳೂರಿನಲ್ಲಿ ಒಂದು ವಾರಕ್ಕಿಂತ ಹೆಚ್ಚು ದಾಖಲೆಯಿಲ್ಲದೆ ಓಡಾಡಲುುಸಾಧ್ಯವಿಲ್ಲ. 

Follow Us:
Download App:
  • android
  • ios