Dwarf Driving licence:ಅವಮಾನ ಮೆಟ್ಟಿನಿಂತ ಶಿವಲಾಲ್, ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಕುಬ್ಜ ಹೆಗ್ಗಳಿಕೆ

  • ಭಾರತದಲ್ಲಿ ಹೊಸ ಇತಿಹಾಸ ರಚಿಸಿದ ಕುಬ್ಜ ಶಿವಲಾಲ್
  • ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಭಾರತೀಯ ಕುಬ್ಜ
  • ಹೈದರಾಬಾದ್ ಮೂಲದ ಶಿವಲಾಲ್ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ
Hyderabad Shivlal become India First Dwarf Man earn driving licence Holds Limca Book of records ckm

ಹೈದರಾಬಾದ್(ಡಿ.02):  ಸಾಧನೆಗೆ ಯಾವ ಅಡೆತಡೆಗಳು ಅಡ್ಡಿಯಾಗಲ್ಲ. ಇದು ಹಲವು ಬಾರಿ ಸಾಬೀತಾಗಿದೆ. ಇದೀಗ ಹೈದರಾಬಾದ್‌ನ ಗಟ್ಟಿಪಲ್ಲಿ ಶಿವಲಾಲ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಶಿವಲಾಲ್ ಎತ್ತರ ಕೇವಲ 3 ಅಡಿ. ಕುಬ್ಜನಾಗಿರುವ ಶಿವಲಾಲ್(Gattipally Shivalal) ಇದೀಗ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್(driving licence) ಪಡೆದ ಮೊದಲ ಕುಬ್ಜ(dwarf) ಅನ್ನೋ ದಾಖಲೆ ಬರೆದಿದ್ದಾರೆ.

42 ವರ್ಷದ ಶಿವಲಾಲ್ ಖಾಸಗಿ ಕಂಪನಿ ಉದ್ಯೋಗಿ. ಪ್ರತಿ ದಿನ ಕರ್ತವ್ಯಕ್ಕೆ ತೆರಳಲು ಸಾರಿಗೆ ಬಸ್, ಅಥವಾ ಇತರರ ನೆರವು ಕೇಳಬೇಕಾಗಿತ್ತು. ಕ್ಯಾಬ್, ಸ್ನೇಹಿತರ ವಾಹನ ಏರಿ ಕೆಲಸಕ್ಕೆ ತೆರಳುತ್ತಿದ್ದ ಶಿವಲಾಲ್ ಪ್ರತಿ ದಿನ ಅವಮಾನ, ನಿಂದನೆ ಎದುರಿಸಿದ್ದಾರೆ. ಇದರಿಂದ ಬೇಸತ್ತ ಶಿವಲಾಲ್ ಹೇಗಾದರೂ ಮಾಡಿ ತಾನು ಕಾರು(Car Driving) ಕಲಿಯಬೇಕು. ಇತರರನ್ನು ಅವಲಂಬಿಸಿದೆ ಕೆಲಸಕ್ಕೆ ಕಾರಿನಲ್ಲಿ ತೆರಳುವಂತಾಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರ ಇಲ್ಲಿಗೆ ಬಿಡದ ಶಿವಲಾಲ್, ಹೈದರಾಬಾದ್‌ನಲ್ಲಿ(Hyderabad) ಕೆಲವರನ್ನು ಸಂಪರ್ಕಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

Online Application for DL: LLR ಗೆ ಆನ್‌ಲೈನ್‌ ಅರ್ಜಿ, ಅರ್ಥವಾಗದೇ ಜನರ ಪರದಾಟ

ಡ್ರೈವಿಂಗ್ ಕ್ಲಾಸ್‌ಗೆ ತೆರಳಿ ಕಾರು ಕಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಡ್ರೈವಿಂಗ್ ಸ್ಕೂಲ್ ನಿರಾಕರಿಸಿದೆ. ಕಾರು ಕಲಿಯುವ ಪ್ರಯತ್ನದಲ್ಲಿದ್ದ ಶಿವಲಾಲ‌ಗೆ ಯುಟ್ಯೂಬ್ ಬದುಕು ಬದಲಿಸಿದೆ. ಯುಟ್ಯೂಬ್‌ನಲ್ಲಿ ಅಮೆರಿಕ(America) ಕುಬ್ಜ ಕಾರನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಪರಿವರ್ತಿ ಕಾರು ಚಲಾಯಿಸುತ್ತಿರುವ ವಿಡಿಯೋ ನೋಡಿದ ಶಿವಲಾಲ್ ಕನಸು ಮತ್ತಷ್ಟು ಗಟ್ಟಿಯಾಗಿದೆ. 

ಈ ವಿಡಿಯೋ ಕುರಿತು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಬಳಿಕ ನೇರವಾಗಿ ಅಮೆರಿಕಾಗೆ ತೆರಳಿದ ಶಿವಲಾಲ್ ಕುಬ್ಜರು ಡ್ರೈವಿಂಗ್ ಮಾಡಲು ಕಾರಿನಲ್ಲಿನ ಮಾರ್ಪಡುಗಳನ್ನು ಪರಿಶೀಲಿಸಿದ್ದಾರೆ. ಅಮೆರಿಕದಲ್ಲಿ ಕುಬ್ಜರ ಕಾರುಗಳಲ್ಲಿ ಕುಳಿತು ಅದರ ಸಂಪೂರ್ಣ ವಿವರವನ್ನು ಕಲೆ ಹಾಕಿದ್ದಾರೆ. ಬಳಿಕ ಈ ಮಾರ್ಪಾಡುಗಳನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಅಮೆರಿಕದಿಂದ ಮರಳಿದ ಶಿವಲಾಲ್, ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಡ್ರೈವಿಂಗ್‌ ಲೈಸನ್ಸ್‌ ಸೇರಿ 18 ಆರ್‌​ಟಿಒ ಸೇವೆ​ಗಳು ಆನ್‌​ಲೈ​ನ್‌​ನ​ಲ್ಲೇ

ಹೈದರಾಬಾದ್ ಕಾರು ಮಾಡಿಫಿಕೇಶನ್ ಕೇಂದ್ರಕ್ಕೆ ತೆರಳಿ ತನ್ನ ಎತ್ತರ ಹಾಗೂ ಅನುಕೂಲಕ್ಕೆ ತಕ್ಕಂತೆ ಕ್ಲಚ್, ಬ್ರೇಕ್, ಎಕ್ಸಲೇಟರ್, ಸ್ಟೀರಿಂಗ್, ಸೀಟು ಸೇರಿದಂತೆ ಹಲವು ಬದಲಾವಣೆ ಮಾಡಿದ್ದಾರೆ. ಈ ಕಾರಿನಲ್ಲಿ ಸ್ನೇಹಿತ ಇಸ್ಮಾಯಿಲ್ ನೆರವಿನಿಂದ ಕಾರು ಡ್ರೈವಿಂಗ್ ಕಲಿತಿದ್ದಾರೆ. 

ಕಾರು ಡ್ರೈವಿಂಗ್ ಕಲಿತ ಶಿವಾಲಾಲ್ ವಿಶೇಷ ಚೇತನ ಅಡಿಯಲ್ಲಿ ಡ್ರೈವಿಂಗ್ ಲೈಲೆನ್ಸ್‌ಗೆ ಅರ್ಜಿ ಹಾಕಿದ್ದಾರೆ. ಗೇರ್ ಇಲ್ಲದ ಅಟೋಮ್ಯಾಟಿಕ್ ಕಾರು ಡ್ರೈವಿಂಗ್ ಮಾಡಿದ ಶಿವಲಾಲ್ ತೆಲಂಗಾಣ ಸರ್ಕಾರ ಲೈಸೆನ್ಸ್ ನೀಡುವಂತೆ ಅನುಮೋದನೆ ನೀಡಿದೆ.  ಶಿವಲಾಲ್ ಸಾಧನೆ ಪೊಲೀಸರ ಮೆಚ್ಚುಗೆಗೆ ಪಾತ್ರರಾಗಿದೆ. ಕೆಲ ದಿನಗಳಲ್ಲೇ ಶಿವಲಾಲ್ ಡ್ರೈವಿಂಗ್ ಲೈಸೆನ್ಸ್ ಕೈಸೇರಿದೆ. ಈ ಲೈಸೆನ್ಸ್‌ನೊಂದಿಗೆ ಭಾರತದಲ್ಲಿ ಫೋರ್ ವ್ಹೀಲರ್ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಕುಬ್ಜ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಶಿವಲಾಲ್ ಸಾಧನೆ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್, ತೆಲುಗು ಬುಕ್ ಆಫ್ ರೆಕಾರ್ಡ್ ಸೇರಿದೆ. ಶಿವಲಾಲ್ ರೆಕಾರ್ಡ್ ಬುಕ್ ಸಾಧನೆಗಿಂತ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಡ್ರೈವಿಂಗ್ ಕಲಿತು ಅಸಾಧ್ಯವಾದದ್ದನೇ ಸಾಧಿಸಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಪಡೆದು ಖ್ಯಾತಿ ಪಡೆದಿರುವ ಶಿವಲಾಲ್, ಕುಬ್ಜರಿಗೆ ಸರ್ಕಾರ ಕೆಲ ಸವಲತ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಪಡೆದು ಖ್ಯಾತಿ ಪಡೆದಿರುವ ಶಿವಲಾಲ್, ಕುಬ್ಜರಿಗೆ ಸರ್ಕಾರ ಕೆಲ ಸವಲತ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. 120ಕ್ಕೂ ಹೆಚ್ಚು ಡ್ರೈವಿಂಗ್ ಸ್ಕೂಲ್ ಡ್ರೈವಿಂಗ್ ಕಲಿಸಲು ನಿರಾಕರಿಸಿತ್ತು. ಆದರೂ ನಾನು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಒಂದು ದಿನ ಡ್ರೈವಿಂಗ್ ಕಲಿಯುತ್ತೇನೆ. ಅದೆಷ್ಟೇ ಅಡೆತಡೆ ಎದುರಿಸಿದರೂ ಸಿದ್ಧ ಎಂದು ಮುನ್ನುಗ್ಗಿದ್ದೇನೆ. ಆದರೆ ಕುಬ್ಜ ಸಮುದಾಯದ ಹಲವರಿಗೆ ಸರ್ಕಾರದ ನೆರವು, ಪ್ರೋತ್ಸಾಹದ ಅಗತ್ಯವಿದೆ ಎಂದು ಶಿವಲಾಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios