ನವ​ದೆ​ಹ​ಲಿ (ಮಾ.05): ಇನ್ಮುಂದೆ ಜನ ಸಾಮಾ​ನ್ಯರು ತಮ್ಮ ವಾಹನ ಪರ​ವಾ​ನಗಿಯ ನವೀ​ಕ​ರಣ, ವಾಹ​ನ​ಗಳ ನೋಂದಣಿ ಸೇರಿ​ದಂತೆ ಇನ್ನಿ​ತರ ಕಾರ್ಯ​ಗ​ಳಿ​ಗ​ಳಿ​ಗಾಗಿ ಆರ್‌​ಟಿಒ ಕಚೇರಿ ಅಲೆ​ಯುವ ಅಗ​ತ್ಯ​ವಿ​ರು​ವು​ದಿಲ್ಲ. 

ಹೌದು, ಪ್ರಾದೇ​ಶಿಕ ಸಂಚಾರ ಕಚೇ​ರಿ(ಆರ್‌​ಟಿ​ಒ)​ಗ​ಳಲ್ಲಿ ಪಾರ​ದ​ರ್ಶ​ಕ ಆಡ​ಳಿತ ತರುವ ನಿಟ್ಟಿ​ನಲ್ಲಿ ಆಧಾರ್‌ ಆಧಾ​ರಿ​ತ​ವಾದ 18 ಸೇವೆ​ಗ​ಳಿಗೆ ಕೇಂದ್ರ ಸಂಚಾರ ಮತ್ತು ಹೆದ್ದಾರಿ ಸಚಿ​ವಾ​ಲಯ ಗುರು​ವಾರ ಚಾಲನೆ ನೀಡಿದೆ.

ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್‌ ಅಂತ್ಯದವರೆಗ ಮಾತ್ರ! ...

 ಅಭ್ಯ​ರ್ಥಿ​ಯು ಯಾವುದೇ ಮಧ್ಯ​ವ​ರ್ತಿಯ ನೆರ​ವಿ​ಲ್ಲದೆ ತನ್ನ ಸೇವೆ​ಯನ್ನು ನೇರ​ವಾ​ಗಿ ಪಡೆ​ಯಲು ವ್ಯವ​ಸ್ಥೆ​ಯನ್ನು ಸರ​ಳೀ​ಕ​ರ​ಣ​ಗೊ​ಳಿ​ಸ​ಲಾ​ಗಿದೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ. 

ವಾಹನ ಚಾಲನೆ ಕಲಿಕಾ ಪರ​ವಾ​ನಗಿ, ವಾಹನ ಚಾಲನೆ ಪರ​ವಾ​ನ​ಗಿಯ ನವೀ​ಕ​ರಣ, ನಕಲಿ ಡ್ರೈವಿಂಗ್‌ ಲೈಸನ್ಸ್‌, ವಾಹನ ಚಾಲನೆ ಪರ​ವಾ​ನಗಿ ಮತ್ತು ನೋಂದ​ಣಿ​ಯ​ಲ್ಲಿನ ವಿಳಾಸ ಬದಲು, ಅಂತಾ​ರಾ​ಷ್ಟ್ರೀಯ ಡ್ರೈವಿಂಗ್‌ ಅವ​ಕಾಶ ಸೇರಿ​ದಂತೆ ಒಟ್ಟು 18 ಸೇವೆ​ಗ​ಳನ್ನು ಜನರು ಆರ್‌​ಟಿಒ ಕಚೇ​ರಿ​ಗ​ಳಿಗೆ ಅಲೆ​ಯದೇ ಮನೆ​ಯಲ್ಲೇ ಕುಳಿತು ಆಧಾರ್‌ ಒಟಿ​ಪಿ​ಯೊಂದಿಗೆ ಪಡೆ​ದು​ಕೊ​ಳ್ಳ​ಬ​ಹು​ದಾ​ಗಿದೆ.