ನಿಷೇಧಿತ ಪಿಎಫ್ಐ ಉಗ್ರ ಸಂಘಟನೆ ಸಕ್ರಿಯಗೊಳಿಸಿದ ಮುಸ್ಲಿಂ ಗುರು ಮಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಸೈಲೆಂಟ್ ಆಗಿ ಮಂಗಳೂರಿನಲ್ಲಿ ಉಗ್ರ ಸಂಘಟನೆಯನ್ನು ಆ್ಯಕ್ಟೀವ್ ಮಾಡಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಕಡಬ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ ಅರೆಸ್ಟ್ ಆಗಿದ್ದಾರೆ.
ಮಂಗಳೂರು (ಅ.11) ಪಿಎಫ್ಐ ಉಗ್ರ ಸಂಘಟನೆಯನ್ನು ನಿಷೇಧ ಮಾಡಿದರೂ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಅನ್ನೋ ಆರೋಪ ಇದೀಗ ಸಾಬೀತಾಗಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಘಟನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ನಿಷೇಧಿತ ಪಿಎಫ್ಐ ಕೈವಾಡವಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ಇದೀಗ ಇದಕ್ಕೆ ಪೂರಕವಾಗಿ ನಿಷೇಧಿತ ಪಿಎಫ್ಐ ಉಗ್ರ ಸಂಘಟನೆಯನ್ನು ಸದ್ದಿಲ್ಲದೆ ಸಕ್ರೀಯ ಮಾಡಿದ ಮುಸ್ಲಿಂ ಗುರು ಸೈಯದ್ ಇಬ್ರಾಹಿಂ ತಂಙಳ್ ಅರೆಸ್ಟ್ ಆಗಿದ್ದಾರೆ. ಕರಾವಳಿಯಲ್ಲಿ ನಿಷೇಧಿತ ಪಿಎಫ್ಐ ಉಗ್ರ ಸಂಘಟನೆಯನ್ನು ಪುನರ್ ರಚನೆಗೆ ಭಾರಿ ಪ್ಲಾನ್ ಮಾಡಿದ್ದ ಈ ಸೈಯದ್ ಇಬ್ರಾಹಿಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಲಾಮಾನ್ ಸಲಾಮ ವ್ಯಾಟ್ಸಾಪ್ ಗ್ರೂಪ್
ಕಡಬ ನಿವಾಸಿಯಾಗಿರುವ ಈ ಮುಸ್ಲಿಂ ಧರ್ಮಗುರು ರಹಸ್ಯವಾಗಿ ಕಾರ್ಯಾಚರಣೆ ಆರಂಭಿಸಿದ್ದ. ಪಿಎಫ್ಐ ಸಂಘಟನೆ ನಿಷೇಧಿಸಿದ ಬಳಿಕ ಭೂಗತರಾಗಿರುವ ಉಗ್ರ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದ ಸೈಯದ್ ಇಬ್ರಾಹಿಂ, ಸಲಾಮಾನ್ ಸಲಾಮ ಎಂಬ ವ್ಯಾಟ್ಯಾಪ್ ಗ್ರೂಪ್ ರಚಿಸಿದ್ದ. ಭೂಗತರಾಗಿರುವ ಪಿಎಫ್ಐ ಸದಸ್ಯರನ್ನು ಸಂಪರ್ಕಿಸಿ ಈ ಗ್ರೂಪ್‌ಗೆ ಸೇರಿಸಿದ್ದಾನೆ. ರಹಸ್ಯವಾಗಿ ಎಫ್ಐ ಸಂಘಟನೆ ಪರ ಪ್ರಚಾರಗಳನ್ನು ಆರಂಭಿಸಿದ್ದಾನೆ.ಭೂಗತರಾಗಿದ್ದ ಹಲವು ಸದಸ್ಯರನ್ನು ಸಂಪರ್ಕಿಸಿ ವ್ಯಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದ.
ಪಿಎಫ್ಐ ಉಗ್ರ ಸಂಘಟನೆ ಚಟುವಟಿಕೆ ಮತ್ತೆ ಆರಂಭಿಸಲು ಸೈಯ್ಯದ್ ಇಬ್ರಾಹಿಂ ತಂಙಳ್ ಸದಸ್ಯರಿಗೆ ಪ್ರಚೋದನೆ ನೀಡುತ್ತಿದ್ದ. ಇದಕ್ಕಾಗಿ ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿ ಭಾರಿ ಪ್ಲಾನ್ ಮಾಡಲಾಗಿತ್ತು. ಪ್ರತಿ ದಿನ ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಸಂಘಟನೆ ಸಕ್ರಿಯಗೊಳಿಸುವುದು, ಮುಂದಿನ ಕಾರ್ಯತಂತ್ರ, ಮಂಗಳೂರಿನಲ್ಲಿ ಪ್ರಾಬಲ್ಯ ಸಾಧಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಗಳನ್ನು ನಡೆಸಿದ್ದ. ಇದಕ್ಕಾಗಿ ಕೇರಳದ ಪ್ರಮುಖರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.
ಮಂಗಳೂರಿನ ಉರ್ವಾಸ್ಟೋರ್ ಬಳಿ ಬಂಧನ
ಸೈಯ್ಯದ್ ಇಬ್ರಾಹಿಂ ತಂಙಳ್ ಮೇಲೆ ಹದ್ದಿನ ಕಣ್ಣಿಟ್ಟಿದ ಪೊಲೀಸರು ಇಂದು ಮಂಗಳೂರಿನ ಊರ್ವಾ ಸ್ಟೋರ್ ಬಳಿ ಬಂಧಿಸಿದ್ದರೆ. ಸೈಯ್ಯದ್ ಇಬ್ರಾಹಿಂ ತಂಙಳ್ ವಿರುದ್ದ UAPA Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಗ್ರೂಪ್ ನಲ್ಲಿ PFI ಪರ ಪ್ರಚಾರ ಆರೋಪ ಹೊರಿಸಲಾಗಿದೆ. ನಿಷೇಧಿತ ಸಂಘಟನೆ, ಅದರ ಪ್ರಚಾರ, ಸಕ್ರಿಯ ಮಾಡಲು ಪ್ರಯತ್ನ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.
NIA ವಿಷೇಷ ನ್ಯಾಯಾಲಕ್ಕೆ ಹಾಜರು
ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿಸಿದ ಪೊಲೀಸರು ಬೆಂಗಳೂರಿನಲ್ಲಿರುವ NIA ಪ್ರಕರಣಗಳ ವಿಷೇಷ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಲಕ ಆರೋಪಿಯನ್ನು ಅಕ್ಟೋಬರ್ 24ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.
ಮಂಗಳೂರು ಟಾರ್ಗೆಟ್
ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸೇರಿದಂತೆ ಸಾಲು ಸಾಲು ಹಿಂದೂ ಮುಖಂಡರ ಹತ್ಯೆ ಪ್ರಕರಣಗಳು ಇದಕ್ಕೆ ಪ್ರತಿಯಾಗಿ ನಡೆದ ದಾಳಿಗಳಿಂದ ಮಂಗಳೂರು ಪ್ರಕ್ಷುಬ್ಧಗೊಂಡಿತ್ತು. ಹಿಂದೂ ಮುಖಂಡರ ಹತ್ಯೆ ಹಿಂದೆ ಇದೇ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರ ಕೈವಾಡವಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು. ಆದರೆ ಹಲವು ನಾಯಕರು ಈ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಇದೀಗ ಮಂಗಳೂರಿನಲ್ಲಿ ಕಡಬ ನಿವಾಸಿ ಇಬ್ರಾಹಿಂ ಬಂಧನವಾಗುತ್ತಿದ್ದಂತೆ ಆರೋಪಗಳಿಗೆ ಪುಷ್ಠಿ ಸಿಕ್ಕಿದೆ.
