Asianet Suvarna News Asianet Suvarna News

ಮಂಗಳೂರು: ಗಾಯಾಳು ಯುವತಿಯ ಹೊತ್ತು ಬೆಟ್ಟ ಇಳಿದರು..!

ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಚಾರಣಕ್ಕೆ ಬಂದಿದ್ದ ತಂಡದಲ್ಲಿ ಯುವತಿಯೊಬ್ಬರ ಕಾಲು ಮುರಿದ ಘಟನೆ ನಡೆದಿದೆ. ನಡೆಯಲಾಗದ ಯುವತಿಯನ್ನು ಹೊತ್ತುಕೊಂಡೇ ಬೆಟ್ಟ ಇಳಿದು ಸುಬ್ರಮಣ್ಯ ತಲುಪಿಸಲಾಗಿದೆ.

men take woman in stretcher from hill
Author
Bangalore, First Published Oct 16, 2019, 10:10 AM IST

ಮಂಗಳೂರು(ಅ.16): ಸುಬ್ರಹ್ಮಣ್ಯ ಕುಮಾರಪರ್ವತ ಚಾರಣದ ವೇಳೆ ಕಾಲು ಮುರಿತಕ್ಕೆ ಒಳಗಾಗಿದ್ದ ಯುವತಿಯೋರ್ವಳನ್ನು ಯುವಕರ ತಂಡವೊಂದು ಪರ್ವತದಿಂದ ಹೊತ್ತುಕೊಂಡು ಬಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿಸಿದ ಘಟನೆ ಸೋಮವಾರ ಸಂಜೆ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರು ಮೂಲದ 23 ಜನರ ತಂಡವೊಂದು ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತಕ್ಕೆ ಚಾರಣಕ್ಕೆಂದು ತೆರಳಿತ್ತು. ಬಾನುವಾರ ತಂಡವು ಪರ್ವತ ಏರಿ ಸಂಜೆ ವೇಳೆ ಹಿಂದುರುಗಿ ಬರುತ್ತಿದ್ದ ಸಂದರ್ಭ ತಂಡದಲ್ಲಿದ್ದ ಯುವತಿಯೋರ್ವಳು ಕಾಲುಮುರಿತಕ್ಕೆ ಒಳಗಾಗಿದ್ದಳು.

FB, ವಾಟ್ಸಾಪ್‌ನಲ್ಲಿ ಚಿಕಿತ್ಸೆಗೆ ನೆರವಾಗೋಕೆ ಹೋದ್ರೆ ಮೋಸ ಹೋಗ್ತೀರಾ..! ರೋಗಿಗಳ ಹೆಸರಲ್ಲಿ ವಂಚನೆ ಮಾಫಿಯಾ

ಸುಬ್ರಹ್ಮಣ್ಯ-ಕುಮಾರಪರ್ವತದ ದಾರಿ ಮಧ್ಯ ಸಿಗುವ ಗಿರಿಗದ್ದೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಬಲ ಕಾಲುಮುರಿತಕ್ಕೊಳಗಾಗಿ ತೀವ್ರ ಗಾಯಗೊಂಡ ಯುವತಿ ಹಾಗೂ ತಂಡದವರು ಅಂದು ರಾತ್ರಿ ಇಲಾಖೆಯ ಶೆಡ್ಡಿನಲ್ಲೆ ಮುಂಜಾನೆ ವರೆಗೆ ಕಾಲ ಕಳೆದಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪರಿಸರದ ಯುವಕರು ತೆರಳಿ ಆಕೆಯನ್ನು ಹೊತ್ತೊಯ್ದು ಊರಿಗೆ ಸೇರಿಸಿದ್ದಾರೆ.

ಯುವಕರಿಗೆ ಮಾಹಿತಿ: ಯುವತಿಯ ವಿಚಾರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುಬ್ರಹ್ಮಣ್ಯದ ಯುವಕರಿಗೆ ತಿಳಿಸಿದ್ದಾರೆ. ಈ ಸಂದರ್ಭ ಸ್ವಯಂ ಪ್ರೇರಿತರಾಗಿ ಸುಬ್ರಹ್ಮಣ್ಯ ಟ್ಯಾಕ್ಸಿ ಚಾಲಕ-ಮಾಲಕ ಸಂಘದ ಅಧ್ಯಕ್ಷ ಕುಸುಮಾಧರ, ಧರ್ಮಪಾಲ ಗೋಪಾಳಿ, ಕೃಷ್ಣಕುಮಾರ್ ಶೆಟ್ಟಿ, ಜೀವನ್ ಗುತ್ತಿಗಾರು, ಸುಂದರ ಗೌಡ ಚೇರು ಮೊದಲಾದವರು ಸೇರಿ ಪರ್ವತಕ್ಕೆ ತೆರಳಿದ್ದಾರೆ. ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಸ್ಟ್ರೆಚರ್‌ನ್ನು ಪಡೆದು ಸೋಮವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಮಂಗಳೂರು: ಸಾಗರ ಕಣ್ಗಾವಲಿಗೆ ಬಂತು ‘ವರಾಹ’ ಬಲ

ಯುವಕರ ತಂಡ ಸೋಮವಾರ ಸಂಜೆ 3 ಗಂಟೆಗೆ ಯುವತಿಯನ್ನು ಸ್ಟ್ರೆಚರ್ ಮೂಲಕ ಘಟನಾ ಸ್ಥಳದಿಂದ ಹೊರಟು ಗಿರಿಗದ್ದೆಯಿಂದ ಸುಮಾರು 7 ಕಿ.ಮೀ. ದಟ್ಟ ಅರಣ್ಯದೊಳಗೆ ಕಿರಿದಾದ ದಾರಿಯಲ್ಲಿ ಏರುತಗ್ಗುಗಳ ನಡುವೆ ನಡೆದು ಸಂಜೆ ವೇಳೆ ಸುಮಾರು 6ಗಂಟೆ ಸಮಯಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿಸಿದ್ದಾರೆ.

ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ

ಬಳಿಕ ಯುವತಿ ಹಾಗೂ ತಂಡದವರು ತಾವು ಬಂದಿದ್ದ ವಾಹನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಯುವತಿಗೆ ಸುಬ್ರಹ್ಮಣ್ಯದಲ್ಲಿ ಚಿಕಿತ್ಸೆ ನೀಡದೆ ನೇರವಾಗಿ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಮಲಯಾಳಿ ಶಿಕ್ಷಕರ ವಿರುದ್ಧ ಮುಂದುವರಿದ ಪ್ರತಿಭಟನೆ

Follow Us:
Download App:
  • android
  • ios