FB, ವಾಟ್ಸಾಪ್‌ನಲ್ಲಿ ಚಿಕಿತ್ಸೆಗೆ ನೆರವಾಗೋಕೆ ಹೋದ್ರೆ ಮೋಸ ಹೋಗ್ತೀರಾ..! ರೋಗಿಗಳ ಹೆಸರಲ್ಲಿ ವಂಚನೆ ಮಾಫಿಯಾ
ಚಿಕಿತ್ಸೆಗೆ ಹಣವಿಲ್ಲ, ನೆರವಾಗಿ ಅಂತ ಕರುಣಾಜನಕ ಫೋಟೋ ಹಾಕಿ, ಅದರೊಂದಿಗೆ ಖಾತೆ ಸಂಖ್ಯೆ, ಬ್ಯಾಂಕ್ ಡೀಟೇಲ್ಸ್ ಹಾಕಿ ನೆರವಾಗಿ ಅನ್ನೋ ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೇಜುಗಳನ್ನು ನಂಬಿ ಹಣ ಟ್ರಾನ್ಸ್‌ಫರ್ ಮಾಡ್ತೀರಾ..? ನೀವು ಮೋಸ ಹೋದ್ರಿ ಎಂದೇ ಅರ್ಥ. ಹಿಂದೆ ಮುಂದೆ ವಿಚಾರಿಸದೇ ಹಣ ಕಳಿಸಿದ್ರೆ ನಾಮ ಬೀಳೋದು ಖಚಿತ.
ಮಂಗಳೂರು(ಅ.16): ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಚಿಕಿತ್ಸೆಗೆಂದು ಸಮಾಜಿಕ ಜಾಲತಾಣದ ಮೂಲಕ ಹಣ ಸಂಗ್ರಹಿಸುವ ಮಾಫಿಯಾಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಜನತೆ ಜಾಗೃತರಾಗಿರಬೇಕು ಎಂದು ಮಂಗಳೂರಿನ ನರ್ಸಿಂಗ್ ಹೋಮ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ಸ್ ಎಸೋಸಿಯೇಶನ್ ಎಚ್ಚರಿಕೆ ನೀಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ರೋಗಿಗಳ ಚಿಕಿತ್ಸೆಗೆಂದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ ರವಾನಿಸಲಾಗುತ್ತದೆ.
ಮಂಗಳೂರು: ಸಾಗರ ಕಣ್ಗಾವಲಿಗೆ ಬಂತು ‘ವರಾಹ’ ಬಲ
ರೋಗಿಗಳ ಬಳಿ ಬ್ಯಾಂಕ್ ಖಾತೆ ಇಲ್ಲ ಎಂದು ತಮ್ಮ ಖಾತೆಯ ಸಂಖ್ಯೆಯನ್ನು ನೀಡುತ್ತಾರೆ. ಹೀಗೆ ಲಕ್ಷಾಂತರ ರು. ಹಣ ಸಂಗ್ರಹಿಸುವ ಘಟನೆಗಳು ನಡೆಯುತ್ತಿದ್ದು, ರೋಗಿಗಳ ಹೆಸರಿನಲ್ಲಿ ವಂಚನೆಯಾಗುತ್ತಿದೆ. ಆದ್ದರಿಂದ ಜನತೆ ಜಾಗೃತರಾಗಿರಬೇಕು ಎಂದಿದ್ದಾರೆ.
ರೋಗಿಗಳಿಗೆ ಸ್ಪಂದಿಸಬೇಕೆಂದರೆ ನೇರವಾಗಿ ಆಸ್ಪತ್ರೆಯಲ್ಲಿರುವ ರೋಗಿಯನ್ನು ಸಂಪರ್ಕಿಸಿ ನೆರವು ನೀಡಬಹುದು. ಆದರೆ ವಾಟ್ಸ್‌ಆ್ಯಪ್ ಮೂಲಕ ಬರುವ ಸಂದೇಶವನ್ನು ನಂಬುವಂತಿಲ್ಲ. ಅಲ್ಲದೆ ವೈದ್ಯರು ಮತ್ತು ಆಸ್ಪತ್ರೆಗಳಿಂದಲೂ ಸುಲಿಗೆ ಮಾಡುವ ಮಾಫಿಯಾಗಳು ಹುಟ್ಟಿಕೊಂಡಿವೆ.
ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ
ಇತ್ತೀಚೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಲಕ್ಷ ರು. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ನಿಮ್ಮ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸುದ್ದಿ ಪಸರಿಸುವುದಾಗಿ ಬೆದರಿಕೆ ಒಡ್ಡಿದ್ದ. ಈ ಕುರಿತಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಡಾ.ಯೂಸುಫ್ ತಿಳಿಸಿದ್ದಾರೆ. ಪ್ರಮುಖರಾದ ಉಮೇಶ್, ಅಫ್ತಾಬ್ ಇದ್ದರು.
ಗುಡುಗು, ಮಿಂಚು ಸಹಿತ ಭಾರೀ ಮಳೆ, 11 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ ನೇತ್ರಾವತಿ