ಮಂಗಳೂರು ಸೇರಿ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮೂಲ್ಕಿ ಬಳಿ ಗಾಳಿ ಸಹಿತ ಮಳೆಗೆ ಮರವೊಂದು ರಸ್ತೆಗೆ ಬಿದ್ದಿದೆ. ಇದೇ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ತನ್ನ ಮುಂಜಾಗೃತೆಯಿಂದ ಪಾವಡ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಮಂಗಳೂರು(ಅ.18): ಮೂಲ್ಕಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸೇರಿದಂತೆ ಮೂಲ್ಕಿ ಹೋಬಳಿಯಲ್ಲಿ ಗುರುವಾರ ಸಂಜೆ ಗಾಳಿ ಸಮೇತ ಬಿರುಸಿನ ಮಳೆಯಾಗಿದೆ. ಗಾಳಿ ಮಳೆಗೆ ರಸ್ತೆಗೆ ಉರುಳುತ್ತಿದ್ದ ಮರದಿಂದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಕಟೀಲು ಬಸ್‌ ನಿಲ್ದಾಣದ ಬಳಿ ಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಮೂಲ್ಕಿಯ ಗೇರುಕಟ್ಟೆಜಂಕ್ಷನ್‌ ಬಳಿ ಸಂಜೆಯ ಬಿರುಸಿನ ಗಾಳಿಗೆ ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿಯ ಮರದ ದೊಡ್ಡ ಕೊಂಬೆಯೊಂದು ತುಂಡಾಗಿ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಹೊಳೆಗೆ ಬಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲು

ಮರದ ಕೊಂಬೆ ಬೀಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕೊಂದು ಸಂಚರಿಸುತ್ತಿದ್ದು ಗೆಲ್ಲು ರಸ್ತೆಯತ್ತ ವಾಲುತ್ತಿರುವುದನ್ನು ಗಮನಿಸಿ ಬೈಕ್‌ನ್ನು ವೇಗವಾಗಿ ಚಲಿಸಿದ್ದರಿಂದ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಬೈಕ್‌ನ ಹಿಂಬದಿಯಲ್ಲಿದ್ದ ಮಹಿಳೆಯ ಮೇಲೆ ಗೆಲ್ಲು ಬೀಳುವುದರಲ್ಲಿತ್ತು.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ:

ಮರದ ಕೊಂಬೆ ರಸ್ತೆಯಲ್ಲಿ ಬಿದ್ದಿರುವುದರಿಂದ ಮೂಲ್ಕಿಯಿಂದ ಕಿನ್ನಿಗೋಳಿ, ಬಜಪೆ, ಮೂಡುಬಿದಿರೆ ಕಡೆಗೆ ಹೋಗುವ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಮೂಲ್ಕಿಯ ಕೆ.ಎಸ್‌. ರಾವ್‌ ನಗರದ ಮೂಲಕ ಬದಲಿ ವ್ಯವಸ್ತೆ ಮಾಡಲಾಗಿದೆ. ಮರದ ಗೆಲ್ಲು ವಿದ್ಯುತ್‌ ಕಂಬದ ಮೇಲೆ ಬಿದ್ದಿರುವುದರಿಂದ ಮೂಲ್ಕಿ ಪರಿಸರದಲ್ಲಿ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ.

ನ್ಯಾಯಾಲಯಕ್ಕೂ ಮಾಧ್ಯಮ ಪ್ರವೇಶ ಅಗತ್ಯ: ನ್ಯಾ.ಸಂತೋಷ್‌ ಹೆಗ್ಡೆ

ಮೂಲ್ಕಿ ನಗರ ಪಂಚಾಯಿತಿ ಸಿಬ್ಬಂದಿ, ಮೆಸ್ಕಾಂ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮರದ ಗೆಲ್ಲುಗಳನ್ನು ಕಡಿದು ಸಂಚಾರ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಂಜೆಯ ಹೊತ್ತಿನಲ್ಲಿ ಕಟೀಲು ಬಸ್‌ ನಿಲ್ದಾಣದ ಬಳಿ ದೊಡ್ಡ ಮರವೊಂದಕ್ಕೆ ಸಿಡಿಲು ಬಡಿದಿದ್ದು ಮರವು ಸಂಪೂರ್ಣ ನುಚ್ಚು ನೂರಾಗಿದೆ. ಬಿರುಸಿನ ಮಳೆ, ಸಿಡಿಲಿನಿಂದಾಗಿ ಕೆಲವು ಕಡೆ ಹಾನಿ ಸಂಭವಿಸಿದೆ.

ಶಿಕ್ಷಕರಿಲ್ಲ: ಸರ್ಕಾರಿ ಶಾಲೆ ಗೇಟ್‌ಗೆ ಬಿತ್ತು ಬೀಗ..!