ಮಂಗಳೂರು(ಅ.18): ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ಬೈಂದೂರು ತಾಲೂಕಿನÜ ಖಂಬದಕೋಣೆ ಗ್ರಾಮದಲ್ಲಿ ನಡೆದಿದೆ. ಖಂಬದಕೋಣೆ ದೊಡ್ಮನೆ ಹಳೆಗೇರಿ ನಿವಾಸಿ ವಂಶಿತ್‌ ಶೆಟ್ಟಿ(12), ಹಳಗೇರಿ ಪಟೇಲರಮನೆ ನಿವಾಸಿ ರಿತೇಶ್‌ ಶೆಟ್ಟಿ(12) ನೀರುಪಾಲಾದ ಬಾಲಕರು.

ಸ್ಥಳೀಯ ಸಂದೀಪನ್‌ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ಅವರು ಶಾಲೆಗೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಆಟವಾಲೆಂದು ಎಡಮಾವಿನಹೊಳೆ ಪಕ್ಕದ ಬೊಬ್ಬರ್ಯ ಗುಂಡಿ ಎಂಬಲ್ಲಿಗೆ ಹೋಗಿದ್ದರು. ಅವರಲ್ಲೊಬ್ಬ ಕಾಲು ತೊಳೆಯಲು ನೀರಿಗಿಳಿದಿದ್ದು ಆಕಸ್ಮಿಕವಾಗಿ ಆಯತಪ್ಪಿ ನೀರಿಗೆ ಬಿದ್ದುಬಿಟ್ಟ, ಅತನ ರಕ್ಷಣೆಗಿಳಿದ ಇನ್ನೊಬ್ಬ ಕೂಡ ನೀರುಪಾಲಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್

ಮಳೆಗಾಲವಾಗಿರುವುದರಿಂದ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕೊಚ್ಚಿ ಹೋದ ಬಾಲಕರು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಬೈಂದೂರು ಪೊಲೀಸರು, ಕುಂದಾಪುರ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದು, ಮುಳುಗು ತಜ್ಞರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಂಜೆವರೆಗೂ ಶೋಧ ಕಾರ್ಯ ನಡೆಸಲಾಯಿತು. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಭೇಟಿ ನೀಡಿ, ಮಕ್ಕಳ ಹೆತ್ತವರಿಗೆ ಸಾಂತ್ವನ ಹೇಳಿದ್ದಾರೆ.