Asianet Suvarna News Asianet Suvarna News

ನ್ಯಾಯಾಲಯಕ್ಕೂ ಮಾಧ್ಯಮ ಪ್ರವೇಶ ಅಗತ್ಯ: ನ್ಯಾ.ಸಂತೋಷ್‌ ಹೆಗ್ಡೆ

ನ್ಯಾಯಾಲಯದಲ್ಲೂ ಮಾಧ್ಯಮಗಳಿಗೆ ಪ್ರವೇಶ ನೀಡಬೇಕು. ಆಗ ಆಡಳಿತ ಪಾರದರ್ಶಕತೆಯಿಂದ ಕೂಡಿರುತ್ತದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್‌ ಎನ್‌. ಸಂತೋಷ್‌ ಹೆಗ್ಡೆ ಹೇಳಿದ್ದಾರೆ. ರಾಜ್ಯಸರ್ಕಾರ ಸದನದಲ್ಲಿ ಮಾಧ್ಯಮಗಳ ಮೇಲೇ ಹೇರಿರುವ ನಿರ್ಬಂಧ ಸಂಬಂಧ ಅವರೇನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

media shout allowed to enter court says former Lokayukta Santosh Hegde
Author
Bangalore, First Published Oct 18, 2019, 8:00 AM IST
  • Facebook
  • Twitter
  • Whatsapp

ಮಂಗಳೂರು(ಅ.18): ರಾಜ್ಯಸರ್ಕಾರ ಸದನದಲ್ಲಿ ಮಾಧ್ಯಮಗಳ ಮೇಲೇ ಹೇರಿರುವ ನಿರ್ಬಂಧ ಸಂವಿಧಾನ ಬಾಹಿರ ಹಾಗೂ ಸ್ವಾತಂತ್ರ್ಯ ವಿರೋಧಿ ಕಾರ್ಯ. ನ್ಯಾಯಾಲಯದಲ್ಲೂ ಮಾಧ್ಯಮಗಳಿಗೆ ಪ್ರವೇಶ ನೀಡಬೇಕು. ಆಗ ಆಡಳಿತ ಪಾರದರ್ಶಕತೆಯಿಂದ ಕೂಡಿರುತ್ತದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್‌ ಎನ್‌. ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

ಮೂಡುಬಿದಿರೆ ಮಿಜಾರಿನ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜು ಆಡಿಟೋರಿಯಂನಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್‌ ವೇದಿಕೆಯಡಿ ನಡೆದ ಅತಿಥಿ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ಹೊಳೆಗೆ ಬಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲು

ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ನಮ್ಮ ಹಿರಿಯರು ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗಳನ್ನು ರೂಪಿಸಿದ್ದು, ಇಂದು ಅವುಗಳು ತಮ್ಮ ಸ್ಥಾಪಿತ ಉದ್ದೇಶವನ್ನು ಮರೆತು ಕಾರ್ಯನಿರ್ವಹಿಸುತ್ತಿವೆ. ತಾನು-ತಮ್ಮದೆಂಬ ಮನೋಭಾವನೆಯಿಂದ ಹೊರಬಂದು ಪ್ರತಿಯೊಬ್ಬರೂ ಜೀವನ ಸಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

370ನೇ ವಿಧಿಯ ರದ್ದಿನಿಂದ ನೆರೆಹೊರೆಯ ರಾಷ್ಟ್ರಗಳ ಪರಿಣಾಮದ ಬಗ್ಗೆ ಮಾತನಾಡಿದ ಅವರು, ಪ್ರತಿ ದೇಶಕ್ಕೆ ತನ್ನ ಹಿತಾಸಕ್ತಿ ಕಾಪಾಡುವುದು ಅತಿ ಮುಖ್ಯ. ತನ್ನ ಭದ್ರತೆ, ಹಿತಾಸಕ್ತಿಯ ಕುರಿತು ಗಮನ ಹರಿಸಬೇಕೇ ಹೊರತು ನೆರೆಹೊರೆಯ ರಾಷ್ಟ್ರಗಳ ಕುರಿತಲ್ಲ ಎಂದಿದ್ದಾರೆ.

ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕಾರ ಹಾಗೂ ಸಂಪತ್ತುಗಳೆಂಬ ಮೋಹದಲ್ಲಿ ಸಿಲುಕಿದ್ದು, ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಗಳೆಂಬ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಬಯಕೆಗಳು ಸಾಮಾನ್ಯ, ಆದರೆ, ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆತನ ಆಸೆಗಳು ಮಿತಿ ಮೀರಿದೆ. ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿದ ಮಾನವೀಯ ಮೌಲ್ಯಗಳನ್ನು ಮರೆತು ಕೇವಲ ಸ್ವಾರ್ಥ ಮನೋಭಾವ ಮನೆ ಮಾಡಿದೆ. ಇದು ಸಮಾಜದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿರುವುದು ದುರಂತ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್‌ ಟ್ರಸ್ಟಿವಿವೇಕ್‌ ಆಳ್ವ, ರೋಸ್ಟ್ರಮ್‌ ಕ್ಲಬ್‌ನ ಸಂಯೋಜಕ ದೀಪಕ್‌ ರೈ ಇದ್ದರು. ವಿದ್ಯಾರ್ಥಿನಿ ಸಮೃದ್ಧಿ ಶೆಟ್ಟಿನಿರೂಪಿಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಯತ್ತ 2011ನೇ ಹೆಜ್ಜೆ!

ಎಲ್ಲಿಯವರೆಗೆ ಪ್ರಜೆಗಳು ಲಂಚ ನೀಡುವುದು ನಿಲ್ಲಿಸುವುದಿಲ್ಲವೋ ಅಲ್ಲಿವರೆಗೆ ಭ್ರಷ್ಟಾಚಾರ ಕೊನೆಗೊಳ್ಳಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಯಾರಿಂದಲೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಆ ಪ್ರಯತ್ನ ನಡೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಈ ದೇಶದ ಭವಿಷ್ಯವೆಂದು ಕರೆಯಲ್ಪಡುವ ಯುವಜನತೆಯ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಯುವಜನತೆಗೆ ಪ್ರೇರಣೆ ನೀಡುವ ಸಲುವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಇದು 2011ನೇ ಶಿಕ್ಷಣ ಸಂಸ್ಥೆಯಲ್ಲಿನ ಕಾರ್ಯಕ್ರಮವಾಗಿದೆ ಎಂದು ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

ಸಂಘ ನಿಷ್ಠರ ನೇಮಕ: ಕರಾವಳಿ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ..!

Follow Us:
Download App:
  • android
  • ios