ಪಾಕ್‌ನಲ್ಲಿ ಪಾಪಿ: ಬುರ್ಖಾಧಾರಿ ಮಹಿಳೆಯ ಹಿಂಬಾಲಿಸಿ ದೌರ್ಜನ್ಯ: ವಿಡಿಯೋ ವೈರಲ್
ಒಂಟಿ ಮಹಿಳೆಯರಿಗೆ ಜಗತ್ತಿನ ಯಾವ ಸ್ಥಳವೂ ಸುರಕ್ಷಿತವಲ್ಲ, ಇನ್ನು ಹೇಳಿ ಕೇಳಿ ಅದೂ ಪಾಕಿಸ್ತಾನ. ಅಲ್ಲಿ ಯಾವ ಮನುಷ್ಯನಿಗೂ ಸುರಕ್ಷತೆ ಇಲ್ಲ. ಅಂತಹದರಲ್ಲಿ ಒಂಟಿ ಹೆಣ್ಣಿಗೆ ಎಲ್ಲಿಯ ಸುರಕ್ಷತೆ.
ಒಂಟಿ ಮಹಿಳೆಯರಿಗೆ ಜಗತ್ತಿನ ಯಾವ ಸ್ಥಳವೂ ಸುರಕ್ಷಿತವಲ್ಲ, ಇನ್ನು ಹೇಳಿ ಕೇಳಿ ಅದೂ ಪಾಕಿಸ್ತಾನ. ಅಲ್ಲಿ ಯಾವ ಮನುಷ್ಯನಿಗೂ ಸುರಕ್ಷತೆ ಇಲ್ಲ. ಅಂತಹದರಲ್ಲಿ ಒಂಟಿ ಹೆಣ್ಣಿಗೆ ಎಲ್ಲಿಯ ಸುರಕ್ಷತೆ. ಪಾಕ್‌ನ ರಸ್ತೆಯಲ್ಲಿ ಒಂಟಿಯಾಗಿ ಸಾಗುತ್ತಿದ್ದ ಮಹಿಳೆಯ ಮೇಲೆ ಕಾಮುಕನೋರ್ವ ದೌರ್ಜನ್ಯವೆಸಗಿದ್ದಾನೆ. ರಸ್ತೆಯಲ್ಲಿ ಸಾಗುತ್ತಿದ್ದ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ಕಾಮುಕನೋರ್ವ ಹಿಂದೆಯಿಂದ ಬಂದು ತಬ್ಬಿಕೊಂಡಿದ್ದು, ಇದರ ವಿಡಿಯೋ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಾಕಿಸ್ತಾನದ ಜಿಯೋ ಟಿವಿ ಈ ಬಗ್ಗೆ ವರದಿ ಮಾಡಿದೆ.
ಹಿರಿಯ ಪತ್ರಕರ್ತ ಹಮೀದ್ ಮಿರ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ಎಲ್ಲಾ ಪುರುಷರಿಗೆ ಸವಾಲಿನ ವಿಚಾರ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಮೆಟ್ರೋ ಸ್ಟೇಷನ್‌ನಲ್ಲಿ ಟರ್ಕಿಶ್ ಮಹಿಳೆಯೊರ್ವಳನ್ನು ಸುತ್ತುವರೆದ ಹಲವು ಪುರುಷರು ಆಕೆಯ ಮೇಲೆ ದಾಳಿ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದರು.
75 ವರ್ಷಗಳ ನಂತರ ಪಾಕ್‌ನಲ್ಲಿರುವ ಬಾಲ್ಯದ ಮನೆಗೆ ಭೇಟಿ ನೀಡಿದ 92 ವರ್ಷದ ಅಜ್ಜಿ
ಕಳೆದ ವರ್ಷ ಪಾಕಿಸ್ತಾನದ ಲಾಹೋರ್‌ನಲ್ಲಿ ಸ್ವಾತಂತ್ರ ದಿನಾಚರಣೆ ವೇಳೆ ವಿಡಿಯೋ ಮಾಡುತ್ತಿದ್ದ ಟಿಕ್‌ಟಾಕ್ ಸ್ಟಾರ್ ಒಬ್ಬಳನ್ನು ನೂರಕ್ಕೂ ಹೆಚ್ಚು ಜನ ಸುತ್ತುವರೆದು ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ದೂರು ದಾಖಲಿಸಿದ ಮಹಿಳೆ, ಗುಂಪಿನಿಂದ ತಪ್ಪಿಸಿಕೊಂಡು ಓಡಿ ಹೋಗುವ ವೇಳೆ ದುಷ್ಕರ್ಮಿಗಳು ತನ್ನ ಬಟ್ಟೆಯನ್ನು ಹರಿದು ತನ್ನನ್ನು ಮೇಲಕ್ಕೆ ಎತ್ತಿ ಬಿಸಾಕಿದ್ದರು ಎಂದು ಮಹಿಳೆ ಎಫ್‌ಐಆರ್‌ನಲ್ಲಿ ದಾಖಲಿಸಿದ್ದರು. ಅಲ್ಲದೇ ಪಾಕಿಸ್ತಾನದಲ್ಲಿ ಮಹಿಳಾ ಸುರಕ್ಷತೆ ಮರೀಚಿಕೆಯಾಗಿದ್ದು, ಶೇಕಡಾ 70ರಷ್ಟು ಮಹಿಳೆಯರು ಕೆಲಸದ ಸ್ಥಳದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಅವರ ಈ ಸಂಕಟಕ್ಕೆ ಕೊನೆ ಇಲ್ಲದಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದಲ್ಲಿ ಮಹಿಳೆಯರ ಹಕ್ಕಿಗಾಗಿ ಹೋರಾಡುವ ವೈಟ್ ರಿಬ್ಬನ್ ಎಂಬ ಎನ್‌ಜಿಒ ಸಂಸ್ಥೆಯ ವರದಿಯ ಪ್ರಕಾರ 2004 ರಿಂದ 2016 ರ ನಡುವೆ ಸುಮಾರು 4,734 ಮಹಿಳೆಯರು ಲೈಂಗಿಕ ಹಿಂಸಾಚಾರಕ್ಕೆ ಒಳಗಾಗಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಪಾಕಿಸ್ತಾನ ಸರ್ಕಾರವು ಕೆಲಸದ ಸ್ಥಳದಲ್ಲಿ ಕಿರುಕುಳದ ವಿರುದ್ಧ ರಕ್ಷಣೆ (ತಿದ್ದುಪಡಿ ಮಸೂದೆ), 2022 ಅನ್ನು ಅಂಗೀಕರಿಸಿದೆ ಮತ್ತು 2010 ರ ಕಾನೂನಿನ ದುರ್ಬಲ ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟಾರೆಯಾಗಿ ಕೆಲಸ ಮಾಡುವ ಮಹಿಳೆಯರ ಅನುಪಾತ ಹೆಚ್ಚಾಗಿರುವುದನ್ನು ಪಾಕಿಸ್ತಾನವು ಗಮನಿಸುತ್ತಿದೆ. ಆದಾಗ್ಯೂ ದೇಶದಲ್ಲಿ ಮಹಿಳೆಯರಿಗೆ ಮಾನಸಿಕ, ದೈಹಿಕ ಮತ್ತು ಲೈಂಗಿಕ ಕಿರುಕುಳದ ಸಮಸ್ಯೆ ಹೆಚ್ಚಾಗಿದೆ. ಅದು ಅವರ ಸುರಕ್ಷಿತ ಚಲನಶೀಲತೆಗೆ ಅಡ್ಡಿಯಾಗುತ್ತದೆ ಮತ್ತು ಕೆಲಸ ಮಾಡಲು ಹೊರಗೆ ಕಾಲಿಡದಂತೆ ತಡೆಯುತ್ತಿದೆ.
ಶ್ರೀಲಂಕಾದ ಹಾದಿಯಲ್ಲಿ ಪಾಕಿಸ್ತಾನ ಸೇರಿ 12 ರಾಷ್ಟ್ರಗಳು; ಜಗತ್ತನ್ನೇ ಆವರಿಸುತ್ತಿದೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು!