ಶ್ರೀಲಂಕಾದ ಹಾದಿಯಲ್ಲಿ ಪಾಕಿಸ್ತಾನ ಸೇರಿ 12 ರಾಷ್ಟ್ರಗಳು; ಜಗತ್ತನ್ನೇ ಆವರಿಸುತ್ತಿದೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು!

*ಈಗಾಗಲೇ ಆರ್ಥಿಕ ದಿವಾಳಿಯಾಗಿರುವ  ಲೆಬನಾನ್, ರಷ್ಯಾ, ಸುರಿನಾಮ್ ಹಾಗೂ ಜಾಂಬಿಯಾ
*ಸಾಲದ ಹೊರೆ ಹಲವು ರಾಷ್ಟ್ರಗಳನ್ನು ಕಂಗೆಡಿಸಿವೆ
*ಹಣದುಬ್ಬರ ಹೆಚ್ಚಳದ ಜೊತೆಗೆ ಕರೆನ್ಸಿ ಮೌಲ್ಯ ಕುಸಿತದಿಂದ ಆರ್ಥಿಕ ಸಂಕಷ್ಟ

After Sri Lanka Dozen Other Countries in Danger Zone of Economic Collapse

Business Desk:ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ವಿಶ್ವದ ಇನ್ನಷ್ಟು ರಾಷ್ಟ್ರಗಳು ಅದೇ ಹಾದಿಯಲ್ಲಿವೆ ಎಂಬ ಆಘಾತಕಾರಿ ಮಾಹಿತಿ  ಹೊರಬಿದ್ದಿದೆ. ಹಲವಾರು ರಾಷ್ಟ್ರಗಳ ಕರೆನ್ಸಿ ಮೌಲ್ಯ ದಿನದಿಂದ ದಿನಕ್ಕೆ ಕುಸಿತ ದಾಖಲಿಸುತ್ತಿವೆ. ಇನ್ನು ವಿದೇಶಿ ವಿನಿಮಯ ಮೀಸಲು ಕೂಡ ಕುಸಿತದ ಹಾದಿ ಹಿಡಿದಿದ್ದು, ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಶ್ರೀಲಂಕಾದ ಬೆನ್ನಲ್ಲೇ ಲೆಬನಾನ್, ರಷ್ಯಾ, ಸುರಿನಾಮ್ ಹಾಗೂ ಜಾಂಬಿಯಾ ಈಗಾಗಲೇ ಆರ್ಥಿಕ ದಿವಾಳಿಯಾಗಿವೆ. ಬೆಲಾರಸ್ ಕೂಡ ಹೆಚ್ಚುಕಡಿಮೆ ಇಂಥದ್ದೇ ಪರಿಸ್ಥಿತಿಗೆ ತಲುಪುತ್ತಿದೆ. ಸಾಲದ ವೆಚ್ಚಗಳು ಹೆಚ್ಚುತ್ತಿರೋದು, ಹಣದುಬ್ಬರ ಹಾಗೂ ಸಾಲದ ಹೊರೆಯಿಂದ ಇನ್ನೂ ಕನಿಷ್ಠ ಹನ್ನೆರಡು ರಾಷ್ಟ್ರಗಳು ಆರ್ಥಿಕ ಅಧಃಪತನದ ಹಾದಿಯಲ್ಲಿವೆ. ಸಾಲದ ಹೊರೆ ಈ ರಾಷ್ಟ್ರಗಳನ್ನು ಕಂಗಾಲು ಮಾಡಿದೆ. ವಿಶ್ಲೇಷಕರ ಪ್ರಕಾರ 400 ಬಿಲಿಯನ್ ಡಾಲರ್ ಸಾಲದ ಹೊರೆ ಈ ರಾಷ್ಟ್ರಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಅದರಲ್ಲೂ ಅರ್ಜೆಂಟೈನಾ 150 ಶತಕೋಟಿ ಡಾಲರ್ ಸಾಲ ಹೊಂದಿದ್ದು, ಎಲ್ಲರಿಗಿಂತ ಮುಂದಿದೆ. ನಂತರದ ಸ್ಥಾನಗಳಲ್ಲಿ ಈಕ್ವೆಡರ್ ಹಾಗೂ ಈಜಿಪ್ಟ್ ಇದ್ದು, ಕ್ರಮವಾಗಿ 40 ಶತಕೋಟಿ ಡಾಲರ್ ನಿಂದ 45 ಶತಕೋಟಿ ಡಾಲರ್ ಸಾಲ ಹೊಂದಿವೆ. ಹಾಗಾದ್ರೆ ಆರ್ಥಿಕ ಬಿಕ್ಕಟ್ಟಿನ ಹಾದಿಯಲ್ಲಿರುವ ರಾಷ್ಟ್ರಗಳು ಯಾವುವು? ಇಲ್ಲಿದೆ ಮಾಹಿತಿ.

ಅರ್ಜೆಂಟೈನಾ
ಅರ್ಜೆಂಟೈನಾದ (ARGENTINA) ಕರೆನ್ಸಿ ಪೆಸೋ (peso) ಮೌಲ್ಯ ಸಿಕ್ಕಾಪಟ್ಟೆ ಕುಸಿದಿದೆ. ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಪೆಸೋ ಶೇ.50ರಷ್ಟು ಡಿಸ್ಕೌಂಟ್ ನಲ್ಲಿ ವ್ಯವಹಾರ ನಡೆಸುತ್ತಿದೆ. ಇನ್ನು ಅರ್ಜೆಂಟೈನಾದ ವಿದೇಶಿ ವಿನಿಮಯ ಮೀಸಲು ಕೂಡ ಕಡಿಮೆಯಿದ್ದು, ಬಾಂಡ್ ಗಳು ಅರ್ಧಕ್ಕರ್ಧ ಬೆಲೆಯಲ್ಲಿ ವಹಿವಾಟು ನಡೆಸುತ್ತಿವೆ. 

ಉಕ್ರೇನ್
ರಷ್ಯಾದ ಆಕ್ರಮಣದಿಂದ ಉಕ್ರೇನ್ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಉಕ್ರೇನ್ ತನ್ನ 20 ಶತಕೋಟಿ ಡಾಲರ್ ಗಿಂತ ಅಧಿಕ ಮೊತ್ತದ ಸಾಲವನ್ನು ಮರುರಚಿಸಬೇಕಾದ ಅಗತ್ಯವಿದೆ. ಸೆಪ್ಟೆಂಬರ್ ನಲ್ಲೇ ಉಕ್ರೇನ್ ಗೆ ಅಪಾಯ ಎದುರಾಗಿತ್ತು. ಆಗ ಅದರ 1.2 ಶತಕೋಟಿ ಡಾಲರ್ ಬಾಂಡ್ ಪಾವತಿಗಳು ಬಾಕಿಯಿದ್ದವು. 

GST On Hospital Room: ಸೋಮವಾರದಿಂದ ಆಸ್ಪತ್ರೆ ವೆಚ್ಚ ಇನ್ನಷ್ಟು ದುಬಾರಿ, ಯಾಕೆ ಗೊತ್ತಾ?

ಟುನೀಶಿಯಾ
ಆಫ್ರಿಕಾದ (Africa) ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಐಎಂಎಫ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಆದ್ರೆ ಅವುಗಳಲ್ಲಿ ಟುನೀಶಿಯಾ (TUNISIA) ಅತ್ಯಧಿಕ ಅಪಾಯದಲ್ಲಿದೆ. ಈ ರಾಷ್ಟ್ರ ಶೇ.10 ಬಜೆಟ್ ಕೊರತೆ ಹೊಂದಿದ್ದು, ಜಗತ್ತಿನಲ್ಲೇ ಅತ್ಯಧಿಕ ಸಾರ್ವಜನಿಕ ವಲಯದ ವೇತನ ಬಿಲ್ ಗಳನ್ನು ಹೊಂದಿದೆ. ಆದ್ರೆ ಅಧ್ಯಕ್ಷ ಕೈಸ್ ಸೈಯದ್ ತನ್ನ ಅಧಿಕಾರ ಬಲಪಡಿಸುವ ಕಾರ್ಯದಲ್ಲೇ ನಿರತರಾಗಿರುವ ಕಾರಣ ಐಎಂಎಫ್ ಯೋಜನೆಗಳ ಅನುಷ್ಠಾನ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ಘಾನಾ
ಭಾರೀ ಪ್ರಮಾಣದ ಸಾಲದಿಂದ ಘಾನಾದ (GHANA) ಸಾಲ (debt) ಹಾಗೂ ಜಿಡಿಪಿ (GDP) ಅನುಪಾತ ಅಂದಾಜು ಶೇ.85ರಷ್ಟು ಹಚ್ಚಿದೆ. ಘಾನಾದ ಕರೆನ್ಸಿ ಸೆಡಿ  ( cedi) ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಇನ್ನು ಘಾನಾದಲ್ಲಿ ಹಣದುಬ್ಬರ ಶೇ. 30ರ ಸಮೀಪದಲ್ಲಿದೆ.

ಈಜಿಪ್ಟ್
ಈಜಿಪ್ಟ್ ನ (EGYPT) ಸಾಲ (debt) ಹಾಗೂ ಜಿಡಿಪಿ (GDP) ಅನುಪಾತ ಶೇ.95ರ ಸಮೀಪದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಈಜಿಪ್ಟ್ 100 ಶತಕೋಟಿ ಡಾಲರ್ ಸಾಲ ಪಾವತಿಸಬೇಕಿದೆ. 

ಕೀನ್ಯಾ
ಕೀನ್ಯಾ (KENYA) ಶೇ. 30ರಷ್ಟು ಆದಾಯವನ್ನು ಸಾಲಗಳ ಮೇಲಿ ಬಡ್ಡಿ ಪಾವತಿಗೆ ವ್ಯಯಿಸುತ್ತಿದೆ. ಇದರ ಬಾಂಡ್ ಗಳು ಅರ್ಧಕ್ಕರ್ಧ ಮೌಲ್ಯ ಕಳೆದುಕೊಂಡಿವೆ. ಅಲ್ಲದೆ, ಪ್ರಸಕ್ತ ಮಾರುಕಟ್ಟೆಗೆ ಯಾವುದೇ ಪ್ರವೇಶ ಕೂಡ ಪಡೆದಿಲ್ಲ.

ಇಥಿಯೋಪಿಯಾ
ಜಿ 20 ಸಾಮಾನ್ಯ ಚೌಕಟ್ಟಿನ ಕಾರ್ಯಕ್ರಮದಡಿಯಲ್ಲಿ ಇಥಿಯೋಪಿಯಾ ಸಾಲ ಪರಿಹಾರ ಪಡೆಯಲು ಪ್ಲ್ಯಾನ್ ಮಾಡಿದೆ. ಆದ್ರೆ, ನಾಗರಿಕ ಯುದ್ಧದ ಕಾರಣದಿಂದ ಪ್ರಗತಿ ಸ್ಥಗಿತಗೊಂಡಿದೆ. 

ಎಲ್ ಸಲ್ವಡಾರ್
ಬಿಟ್ ಕಾಯಿನ್ ವ್ಯವಹಾರವನ್ನು ಅಧಿಕೃತಗೊಳಿಸಿದ ಬೆನ್ನಲ್ಲೇ ಎಲ್ ಸಲ್ವಡಾರ್ (EL SALVADOR) ಐಎಂಎಫ್ (IMF) ಭರವಸೆಗಳನ್ನು ಕಳೆದುಕೊಂಡಿದೆ. 

ಪಾಕಿಸ್ತಾನ
ಇಂಧನ ಆಮದಿನ ಅಧಿಕ ಬೆಲೆಯಿಂದ ಪಾಕಿಸ್ತಾನ ಬಾಕಿ ಪಾವತಿ ತೊಂದರೆಗೆ ಸಿಲುಕಿದೆ. ವಿದೇಶಿ ಕರೆನ್ಸಿ ಮೀಸಲು 9.8 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ. ಇದು ಹೆಚ್ಚೆಂದ್ರೆ ಐದು ವಾರಗಳ ಆಮದಿಗೆ ಸಾಕಾಗಬಹುದು. ಇನ್ನು ಪಾಕಿಸ್ತಾನದ ರೂಪಾಯಿ ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ಕಾಳುಕಡಿ ಮಾರುಕಟ್ಟೆ ಬಂದ್‌

ಬೆಲರಸ್ 
ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಷ್ಯಾದ ಪರ ವಹಿಸಿದ ಪರಿಣಾಮ ಬೆಲರಸ್ (BELARUS) ಕೂಡ ರಷ್ಯಾದಂತೆ ಆರ್ಥಿಕ ದಿಗ್ಬಂಧನೆ ಅನುಭವಿಸುತ್ತಿದೆ. 

ಈಕ್ವೆಡರ್ 
ಈಕ್ವೆಡರ್ (ECUADOR) ಎರಡು ವರ್ಷಗಳ ಹಿಂದೆ ಆರ್ಥಿಕ ದಿವಾಳಿತನದಿಂದ ಎದ್ದು ಬಂದಿದ್ದರೂ ಪ್ರಸ್ತುತ ಸಾಕಷ್ಟು ಸಾಲಗಳನ್ನು ಹೊಂದಿದೆ. 

ನೈಜೀರಿಯಾ
ಇದು ಸರ್ಕಾರದ ಆದಾಯದ ಶೇ. 30ರಷ್ಟನ್ನು ಸಾಲ ಮರುಪಾವತಿಗೆ ವ್ಯಯಿಸುತ್ತಿದೆ. 


 

Latest Videos
Follow Us:
Download App:
  • android
  • ios