15 ವರ್ಷದ ತಂಗಿಯನ್ನು ಪುಸಲಾಯಿಸಿ ಕಾಮಕ್ಕೆ ಬಳಸಿಕೊಂಡ ಗಂಡನ ವಿರುದ್ದ ಪತ್ನಿ ಸೇಡು ತೀರಿಸಿಕೊಂಡಿದ್ದಾಳೆ. ಸರಸ ಸಲ್ಲಾಪದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ ರೌದ್ರವತಾರ ತಾಳಿದ್ದಾಳೆ. ಗಂಡನ ಕೈ ಕಾಲು ಕಟ್ಟಿ ಹಾಕಿ ಮರ್ಮಾಂಗ ಕತ್ತರಿಸಿದ್ದಾಳೆ. ಇಷ್ಟೇ ಅಲ್ಲ ಟಾಯ್ಲೆಟ್‌ನಲ್ಲಿ ಪಾಕಿ ಫ್ಲಶ್ ಮಾಡಿದ ಘಟನೆ ನಡೆದಿದೆ. 

ಬ್ರೆಜಿಲ್(ಡಿ.27) ಮದುವೆಯಾಗಿ ವರ್ಷಗಳೇ ಉರುಳಿದೆ. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳು ಇರಲಿಲ್ಲ. ಆದರೆ ಪತ್ನಿಯ 15 ವರ್ಷದ ತಂಗಿಯನ್ನು ಗಂಡ ತನ್ನ ಕಾಮಕ್ಕೆ ಬಳಸಿಕೊಂಡಿದ್ದಾನೆ. ಈ ಕುರಿತು ಅನುಮಾನಗೊಂಡ ಪತ್ನಿ, ಒಂದು ದಿನ ರೆಡ್‌ಹ್ಯಾಂಡ್ ಆಗಿ ಪತಿಯ ಕಾಮದಾಟವನ್ನು ಬಹಿರಂಗಪಡಿಸಿದ್ದಾಳೆ. 15 ವರ್ಷದ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪತಿ ವಿರುದ್ಧ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಗಂಡನ ಕೈ ಕಾಲು ಕಟ್ಟಿ ಹಾಕಿದ ಪತ್ನಿ, ಒಂದೇ ಎಟಿನಲ್ಲಿ ಗಂಡನ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿಬಿಟ್ಟಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.ಆ್ಯಟಿಬಯಾ ನಿವಾಸಿಯಾಗಿರುವ 39 ವರ್ಷದ ಪತಿಯ ಸ್ಥಿತಿ ಚಿಂತಾಜನಕವಾಗಿದೆ. ಇತ್ತ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಗಳು ಅನುಮಾನ ತರಿಸಿತ್ತು. ಕೆಲ ವಿಚಾರಗಳನ್ನು ತನ್ನಿಂದ ಮುಚ್ಚಿಡುತ್ತಿರುವ ಕುರಿತು ಅನುಮಾನಪಟ್ಟಿದ್ದಾಳೆ. ಇತ್ತ ಪತಿ ಕೆಲದಿಂದ ಬೇಗನೆ ಮನೆಗೆ ಬರುವುದು, ಕೆಲ ದಿನ ಕಲಸಕ್ಕೆ ರಜೆ ಹಾಕುವುದು ಸಾಮಾನ್ಯವಾಗಿತ್ತು. ಬರು ಬರುತ್ತಾ ಪತಿಯ ನಡೆ ಅನುಮಾನ ಹೆಚ್ಚಿಸಿದೆ.

ವೃದ್ಧ ಮಾವನ ಜೊತೆ ಸೊಸೆಗೆ ಲೈಂಗಿಕ ಸಂಬಂಧ, ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ!

ಪತಿಯ ಅಸಲಿ ಕತೆ ಪತ್ತೆ ಹಚ್ಚಳು ಪತ್ನಿ ನಿರ್ಧರಿಸಿದ್ದಾಳೆ. ಕೆಲಸಕ್ಕೆಂದು ತೆರಳಿದ ಪತಿಯನ್ನು ಹಿಂಬಾಸಿದ ಪತ್ನಿಗೆ ಅಚ್ಚರಿಯಾಗಿದೆ. ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ, ಬೆದರಿಸಿ ಕಾಮಕ್ಕೆ ಬಳಸಿಕೊಂಡಿರುವುದು ಪತಿಗೆ ಗೊತ್ತಾಗಿದೆ. ಒಂದು ದಿನ ರೆಡ್ ಹ್ಯಾಂಡ್‌ಗಿ ತನ್ನ 15 ವರ್ಷದ ತಂಗಿ ಜೊತೆ ಮಲಗಿರುವಾಗಲೇ ಪತಿಯ ಕಾಮದಾಟವನ್ನು ಬಯಲು ಮಾಡಿದ್ದಾಳೆ. 

ಪತಿಯ ಎರಡು ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿದ ಪತಿ ಮನಬಂದಂತೆ ಥಳಿಸಲು ಆರಂಭಿಸಿದ್ದಾಳೆ. ಆದರೆ ಇಷ್ಟಕ್ಕೆ ಕೋಪ ತಣ್ಣಗಾಗಲಿಲ್ಲ. ನೇರವಾಗಿ ಅಡುಮನೆಯಿಂದ ಚಾಕು ತಂದ ಪತ್ನಿ, ಪತಿಯ ಮರ್ಮಾಂಗವನ್ನೇ ಒಂದೇ ಏಟಿನಲ್ಲಿ ಕತ್ತರಿಸಿದ್ದಾಳೆ. ಬಳಿಕ ಮರ್ಮಾಂಗವನ್ನು ಟಾಯ್ಲೆಟ್‌ನಲ್ಲಿ ಬಿಸಾಡಿ ನೀರು ಹಾಕಿದ್ದಾಳೆ.

ಈ ದಾಳಿ ಬಳಿಕ ಪತ್ನಿ ನೇರವಾಗಿ ಮನೆಯಿಂದ ಹೊರಟು ಹೋಗಿದ್ದಾಳೆ. ಇತ್ತ ಚೀರಾಟ ಕೇಳಿ ಕೆಲ ದೂರದಲ್ಲಿರವ ನೆರೆಮನೆಯವರು ಆಗಮಿಸಿ ಈತನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಪತ್ನಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಪೊಲೀಸ್ ಠಾಣೆಗೆ ತೆರಳಿದ ಪತ್ನಿ, ಶುಭ ಸಂಜೆ ಆಫೀಸರ್, ನನ್ನ ಕುರಿತು ಹೇಳಿಕೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ. ನನ್ನ 15 ವರ್ಷದ ತಂಗಿ ಜೊತೆ ಮಲಗಿದ ಪತ್ನಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದಿದ್ದಾಳೆ.

ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ಈಕೆಯ ಪತಿಯ ಮಾಹಿತಿ ಪಡೆದು ಆಸ್ಪತ್ರೆಗೆ ತೆರಳಿದ್ದಾರೆ. ಪತಿ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.