Asianet Suvarna News Asianet Suvarna News

ವೃದ್ಧ ಮಾವನ ಜೊತೆ ಸೊಸೆಗೆ ಲೈಂಗಿಕ ಸಂಬಂಧ, ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ!

ವೃದ್ಧ ಮಾವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸೊಸೆ ಆತನನ್ನೇ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಈ ಕೊಲೆ ನಡೆದಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Gujarat woman kills father in law for Rs 2 lakh, chops off genitals, arrested Vin
Author
First Published Sep 10, 2023, 7:32 PM IST

ಗುಜರಾತ್‌ನ ಖೇಡಾದಲ್ಲಿ 2 ಲಕ್ಷ ರೂ.ಗೆ ತನ್ನ ಮಾವನನ್ನು ಕೊಂದು ಆತನ ದೇಹದ ಅಂಗಾಂಗಗಳನ್ನು ತುಂಡರಿಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಗುಜರಾತ್‌ನ ಖೇಡಾದಲ್ಲಿ ಮಹಿಳೆಯೊಬ್ಬರನ್ನು ತನ್ನ ವಯಸ್ಸಾದ ಮಾವನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿದೇಶಕ್ಕೆ ಹೋಗಲು 2 ಲಕ್ಷ ರೂಪಾಯಿ ನೀಡಲು ನಿರಾಕರಿಸಿದ್ದರಿಂದ ಆಕೆ ಹೀಗೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಆರೋಪಿ ಸೊಸೆ ಆತನ ಖಾಸಗಿ ಅಂಗಗಳನ್ನು ಕತ್ತರಿಸಿ ತಲೆಬುರುಡೆಗೆ ಬಲವಾಗಿ ಹೊಡೆದಿದ್ದಾಳೆ.

ಪೊಲೀಸ್ ವಿಚಾರಣೆ ವೇಳೆ, ಸೊಸೆ ಅಪರಾಧವನ್ನು ಒಪ್ಪಿಕೊಂಡಿದ್ದು 75 ವರ್ಷದ ಮಾವ ಆಗಾಗ ತನ್ನೊಂದಿಗೆ ದೈಹಿಕ ಸಂಬಂಧ ನಡೆಸುತ್ತಿದ್ದರು. ಅವರ ಅಕ್ರಮ ಸಂಬಂಧಕ್ಕೆ ಬದಲಾಗಿ ಹಣವನ್ನು ನೀಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ತಾನು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ಹೋಗಲು ಬಯಸಿದ್ದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆರೋಪಿ ಮಾವ ಬಳಿ ಹಣ ಕೇಳಿದ್ದಕ್ಕೆ ಹಣ ಕೊಡಲು ನಿರಾಕರಿಸಿದ್ದ. ಹೀಗಾಗಿ ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿದ್ದಾಳೆ. 

ಮತ್ತೊಬ್ಬನೊಂದಿಗೆ ಸಲುಗೆ ಸಹಿಸದೆ ತಾಯಿ-ಮಗನ ಕೊಂದ ಪ್ರಿಯಕರ!

ಸುಮಾರು ಮೂರು ದಿನಗಳಿಂದ ಮೃತರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಮೊದಲು ಹಿರಿಯ ಮಗ ರಾಜಸ್ಥಾನದಲ್ಲಿರುವ ಅವರ ಸಂಬಂಧಿಕರ ಮನೆಗಳನ್ನು ಪರಿಶೀಲಿಸಿದರು. ಆದರೆ ವ್ಯಕ್ತಿ ಎಲ್ಲಿಯೂ ಪತ್ತೆಯಾಗಲಿಲ್ಲ. ಆದರೆ ಬಳಿಕ ಬಚ್ಚಲು ಮನೆಯ ಕೊಠಡಿಯೊಂದರಲ್ಲಿ ಶವ ಪತ್ತೆಯಾಗಿದೆ.

ನಾಡಿಯಾಡ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿ.ಆರ್.ಬಾಜಪೈ ಈ ಬಗ್ಗೆ ಮಾತನಾಡಿದ್ದು, 'ಡಾಕೋರ್ ನಗರದೊಳಗಿನ ಭಗತ್ ಜಿ ಕಾಲೋನಿ ಕರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಜಗದೀಶ್ ಶರ್ಮಾ ಅವರ ಮೃತ ದೇಹವು ಸೆಪ್ಟೆಂಬರ್ 5ರಂದು ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿತ್ತು. ಆದ್ದರಿಂದ, ಫೊರೆನ್ಸಿಕ್ ವರದಿಯನ್ನು ಮಾಡಲಾಯಿತು. ವಿಧಿವಿಜ್ಞಾನದ ಮರಣೋತ್ತರ ಪರೀಕ್ಷೆಯು ಗಟ್ಟಿಯಾದ ವಸ್ತುವಿನಿಂದ ತಲೆಗೆ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಅವರ ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು: ಗೋವಾದಲ್ಲಿ ಪತ್ನಿ ಜೊತೆ ಫುಲ್ ರೌಂಡ್ಸ್, ಮನೆಗೆ ಬಂದ ಮರುದಿನವೇ ಹೆಂಡ್ತಿ ಕೊಂದ ಗಂಡ..!

Follow Us:
Download App:
  • android
  • ios