ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್, 'ಅದನ್ನೇ' ಕಟ್ ಮಾಡಿ ಕೊಲೆ ಮಾಡಿದ ಮಹಿಳೆ!
ಕೊಲೆ ಮಾಡಿದ ಮಹಿಳೆಯೊಂದಿಗೆ 60 ವರ್ಷದ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ. ಆದರೆ, ಆತ ತನ್ನ ಹದಿಹರೆಯದ ಮಗಳಿಗೆ ಕಿರುಕುಳ ನೀಡಿದ ನಂತರ ಮಹಿಳೆ ಆತನ ಮರ್ಮಾಂಗ ಕತ್ತರಿಸಿದ್ದು, ಕೊಲೆ ಮಾಡಿ ಶವ ಎಸೆದಿದ್ದಾರೆ ಎಂದು ವರದಿಯಾಗಿದೆ.
ರಾಯ್ ಬರೇಲಿ (ಆಗಸ್ಟ್ 25, 2023): ಹದಿಹರೆಯದ ಮಗಳಿಗೆ 60 ವರ್ಷದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಕಾರಣ ಸಿಟ್ಟಿಗೆದ್ದ ತಾಯಿ ಆತನ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಈ ಹಿನ್ನೆಲೆ, ಆ ವ್ಯಕ್ತಿಯನ್ನು ಕೊಲೆ ಮಾಡಿ ಶವ ಎಸೆದಿದ್ದಕ್ಕಾಗಿ 45 ವರ್ಷದ ಮಹಿಳೆ ಮತ್ತು ಆಕೆಯ 19 ವರ್ಷದ ಮಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ಮಹಿಳೆಯೊಂದಿಗೆ 60 ವರ್ಷದ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ. ಆದರೆ, ಆತ ತನ್ನ ಹದಿಹರೆಯದ ಮಗಳಿಗೆ ಕಿರುಕುಳ ನೀಡಿದ ನಂತರ ಮಹಿಳೆ ಆತನ ಮರ್ಮಾಂಗ ಕತ್ತರಿಸಿದ್ದು, ಕೊಲೆ ಮಾಡಿ ಶವ ಎಸೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ 230 ಕಿ.ಮೀ ವೇಗದಲ್ಲಿ ನುಗ್ಗಿದ ರೋಲ್ಸ್ ರಾಯ್ಸ್ ಕಾರು: ಇಬ್ಬರು ಬಲಿ
60 ವರ್ಷದ ವ್ಯಕ್ತಿಯನ್ನು ಮೆಹೆಂದಿ ಲಾಲ್ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ತಾನು ಸಂಬಂಧದಲ್ಲಿರುವ ಮಹಿಳೆಯ ಹದಿಹರೆಯದ ಮಗಳ ಬಗ್ಗೆ ಆಕರ್ಷಣೆ ಬೆಳೆಸಿಕೊಂಡಿದ್ದನು ಮತ್ತು ಆಕೆಗೆ ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ. ಮೆಹೆಂದಿ ಲಾಲ್ ಕಳೆದ ಹಲವು ವರ್ಷಗಳಿಂದ ತನ್ನ ನೆರೆಹೊರೆಯರಾಗಿದ್ದ ಆರೋಪಿ ಮಹಿಳೆ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ರಾಯ್ ಬರೇಲಿ ಎಸ್ಪಿ ಅಲೋಕ್ ಪ್ರಿಯದರ್ಶಿ ಮಾಹಿತಿ ನೀಡಿದ್ದಾರೆ.
ಆಗಸ್ಟ್ 20 ರಂದು ಆತ ತನ್ನ ಹದಿಹರೆಯದ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಒತ್ತಾಯಿಸಲು ಪ್ರಯತ್ನಿದ್ದಾನೆ. ಬಳಿಕ, ಈ ಘಟನೆಯ ಬಗ್ಗೆ ಅಪ್ರಾಪ್ತ ಯುವತಿ, ತಾಯಿಗೆ ತಿಳಿಸಿದ್ದಾಳೆ. ಇದರಿಂದ ಕುಪಿತಳಾದ ಮಹಿಳೆ ತನ್ನ ಮಗಳ ಸಹಾಯದಿಂದ ಮೆಹೆಂದಿ ಲಾಲ್‌ಗೆ ಸೋಮವಾರ ನಿದ್ರೆಯಲ್ಲಿ ಮತ್ತು ಬರೆಸಿ ಪಾನೀಯ ನೀಡಿ ಕೊಂದಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಹೆಂಡ್ತಿ ನಟಿಸಿರೋ ಅನುಮಾನ: ಮನಬಂದಂತೆ ಹಲ್ಲೆ ಮಾಡಿದ ಪೋರ್ನ್ ಚಟಕ್ಕೆ ಬಿದ್ದ ಪತಿ
ನಂತರ, ತಮ್ಮ ತಂದೆ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೆಹೆಂದಿ ಲಾಲ್ ಅವರ ಮಗ ಸುಶೀಲ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. "ಮಾಹಿತಿ ಆಧಾರದ ಮೇಲೆ, ಪೊಲೀಸರು ವಿಧಿವಿಜ್ಞಾನ ತಂಡದೊಂದಿಗೆ ಘಟನಾ ಸ್ಥಳಕ್ಕೆ ತಲುಪಿ ಅಪರಾಧದ ಸ್ಥಳವನ್ನು ಪರಿಶೀಲಿಸಿದರು. ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಮತ್ತು ಖಾಸಗಿ ಭಾಗಗಳನ್ನು ಕತ್ತರಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು, ಈ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ. ಸಾಯುವ ಮುನ್ನ ಪಕ್ಕೆಲುಬುಗಳ ಮುರಿತದ ಗಾಯ ಮತ್ತು ಕತ್ತು ಹಿಸುಕಿದ ಗಾಯಗಳಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಬಾಲಕಿಯರ ಹಾಸ್ಟೆಲ್‌ನಲ್ಲಿ ಸರ್‌ಪ್ರೈಸ್ ಚೆಕ್: ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು