ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಆತ ಹಲ್ಲೆ ನಡೆಸಿದ್ದಾನೆ.

ಹೆಂಡ್ತಿ ಡಿವೋರ್ಸ್‌ ಕೇಳಿದ್ದಕ್ಕೆ ಗಂಡನಿಂದ ಮಗಳ ಕೊಲೆ

ಮಂಜೇಶ್ವರ: ಹೆಂಡ್ತಿ ವಿಚ್ಛೇದನ ಕೇಳಿದಳು ಎಂದು ಸಿಟ್ಟಾದ ಗಂಡನೋರ್ವ ಆಕೆಯ ಮೇಲಿನ ಸಿಟ್ಟಿಗೆ ತನ್ನ 18 ವರ್ಷದ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೇರಳ ಕರ್ನಾಟಕ ಗಡಿಯಾದ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಉಮರ್ ಪಾಷಾ ಎಂಬಾತನೇ ಹೆಂಡ್ತಿ ಮೇಲಿನ ಸಿಟ್ಟಿಗೆ ಮಗಳ ಕೊಲೆ ಮಾಡಿದ ವ್ಯಕ್ತಿ. 

Add Asianetnews Kannada as a Preferred SourcegooglePreferred

ಕುಂಜತ್ತೂರಿನ ತೂಮಿನಾಡು ಹಿಲ್ ಟಾಪ್ ನಗರದ ನಿವಾಸಿಯಾದ ಉಮರ್ ಪಾಷಾ ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯುವುದಕ್ಕೆ ಬಂದ ತನ್ನ ಸ್ವಂತ ಅಣ್ಣ ಶೇಕುಂಞ ಮೇಲೆಯೂ ಆತ ಹಲ್ಲೆ ಮಾಡಿದ್ದಾನೆ. ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಶೆಕುಂಞ ಅವರಿಗೂ ಗಂಭೀರ ಗಾಯಗಳಾಗಿವೆ. ತಂದೆಯ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಜುಬೈರಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಹೋಗಿತ್ತು ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಎಸ್‌ಬಿಐ ಎಟಿಎಂ ಮುಂದೆಯೇ ಉದ್ಯಮಿಯ ಕಾಲಿಗೆ ಗುಂಡಿಕ್ಕಿ 6 ಲಕ್ಷ ದರೋಡೆ

ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯ ಸಂಗ್ರಹ ಮಾಡಿದ್ದಾಳೆ ಮೃತ ಜುಬೈರಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಆರೋಪಿ ಉಮರ್ ಪಾಷಾ ದಿಢೀರನೇ ಮಗಳ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಆಕೆಗೆ ಇರಿದಿದ್ದಾನೆ. ಆಕೆಯ ಕಿರುಚಾಟ ಕೇಳಿ ರಕ್ಷಣೆಗೆ ಬಂದ ಆಕೆಯ ದೊಡ್ಡಪ್ಪ ಮೇಲೂ ಶೇಕುಂಞ ಮೇಲೂ ಉಮರ್ ಪಾಷಾ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಶೇಕುಂಞ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ

ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಉಮರ್ ಪಾಷಾ 3 ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಉಮರ್ ಪಾಷಾ ಪತ್ನಿ 41 ವರ್ಷದ ತಾಹಿರಾ ಆತನಿಂದ ವಿಚ್ಛೇದನ ಪಡೆಯುವುದಕ್ಕೆ ಬಯಸಿದ್ದಳು ಹಾಗೂ ಉಮರ್‌ಗೆ ಮನೆಬಿಟ್ಟು ಹೋಗುವಂತೆ ಹೇಳಿದ್ದಳು ಇದರಿಂದ ತೀವ್ರ ಹತಾಶೆಗೆ ಒಳಗಾದ ಉಮರ್ ಪಾಷಾ ಮಗಳ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆರೋಪಿ ಉಮರ್ ಪಾಷಾ ಮಾದಕ ವ್ಯಸನಿಯಾಗಿದ್ದ ಕೃತ್ಯ ನಡೆಯುವ ವೇಳೆ ಈತ ಮಾದಕ ದ್ರವ್ಯ ಸೇವಿಸಿದ್ದು, ಅದರ ಅಮಲಿನಲ್ಲೇ ಕೃತ್ಯ ನಡೆಸಿರಬಹುದು ಎಂದು ತಿಳಿದು ಬಂದಿದೆ.