Asianet Suvarna News Asianet Suvarna News

ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಎಂದು ಕೊಲೆ: ಸಿನಿಮಾ ರೀತಿಯಲ್ಲಿ ಮರ್ಡರ್‌ ರಹಸ್ಯ ಬಯಲು

ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ ಎಂದು ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ನಡೆದಿದೆ. ದಾಸೇಗೌಡ (48) ಕೊಲೆಯಾದ ವ್ಯಕ್ತಿ. 

wife and lover arrested for murdered her husband in bengaluru gvd
Author
First Published Nov 30, 2022, 1:08 PM IST

ಬೆಂಗಳೂರು (ನ.30): ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ ಎಂದು ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ನಡೆದಿದೆ. ದಾಸೇಗೌಡ (48) ಕೊಲೆಯಾದ ವ್ಯಕ್ತಿ. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದ್ದು, ಸಿನಿಮಾ ರೀತಿಯಲ್ಲಿ ಕೊಲೆ ರಹಸ್ಯ ಬಯಲಾಗಿದೆ. ಹೌದು! ದಾಸೇಗೌಡ ನಾಪತ್ತೆಯಾಗಿದ್ದ ಬಗ್ಗೆ ಸೋಲದೇವನಹಳ್ಳಿಯಲ್ಲಿ ಪ್ರಕರಣ ದಾಖಲಾಗಿತ್ತು. ನ.28 ರಂದು ದಾಸೇಗೌಡನ ಪತ್ನಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದಳು. 

ರಾಮನಗರ ಗ್ರಾ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಸೇಗೌಡನ ಮೃತದೇಹ ಪತ್ತೆಯಾಗಿದ್ದು, ದಾಸೇಗೌಡನ ಪತ್ನಿ ಸೇರಿ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಒಂದೊಂದು ಕಡೆ ವಸ್ತುಗಳನ್ನು ಆರೋಪಿಗಳು ಎಸೆದಿದ್ದರು. ದಾಸೇಗೌಡ ಮೃತದೇಹವನ್ನು ಸೋಲದೇವನಹಳ್ಳಿ ಫಾರ್ಮ್ ಹೌಸ್‌ನಿಂದ ಕಾರಿನಲ್ಲಿ ಸಾಗಟ ಮಾಡಿದ್ದು, ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮೋರಿಯಲ್ಲಿ ಎಸೆದಿದ್ದಾರೆ. ಅಲ್ಲದೇ ಸುಮಾರು‌ 50 ಮೀಟರ್‌ನಷ್ಟು ಮೊರಿಯಲ್ಲಿ ಶವವನ್ನು ತುರುಕಿದ್ದಾರೆ. 

ಬೆಂಗಳೂರು: ಪ್ರೇಮಿಗಳ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ

ಉಸಿರುಗಟ್ಟಿಸಿ ಕೊಲೆ ಮಾಡಲು ಬಳಸಿದ್ದ ಹಗ್ಗವನ್ನು ಬೇರೆಡೆ ಎಸೆದಿದ್ದು, ಸಾಕ್ಷ್ಯ ಸಿಗದಂತೆ ಒಂದೊಂದು ಕಡೆ ವಸ್ತುಗಳು ಎಸೆದಿದ್ದಾರೆ. ಬಾಡಿಗೆ ಕಾರಿನಲ್ಲಿ ಮೃತದೇಹ ಸಾಗಟ ಮಾಡಿ ಕಾರನ್ನ ಆರೋಪಿಗಳು ಬೇರೆಡೆ ಬಿಟ್ಟಿದ್ದಾರೆ. ಇನ್ನು 35 ವರ್ಷದ ಜಯ ಕಳೆದ 16 ವರ್ಷ ಹಿಂದೆ ದಾಸೇಗೌಡನನ್ನ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಗಂಡ ಹೆಂಡತಿ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ಗಂಡ ಮನೆಯಲ್ಲಿ ಇಲ್ಲದಾಗ ಯುವಕ ಮನೆಗೆ‌ ಬಂದು ಹೋಗುತ್ತಿದ್ದ. ಪತ್ನಿ ಅನೈತಿಕ ಸಂಬಂಧ ಬಗ್ಗೆ ಪತಿ ದಾಸೇಗೌಡನಿಗೆ ಅನುಮಾನ ಬಂದಿತ್ತು. 

ವಿಧವೆ ಬಾಳಲ್ಲಿ ಚೆಲ್ಲಾಟವಾಡಿದ ವಿವಾಹಿತ: ಪ್ರಿಯತಮೆ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದವ ಅರೆಸ್ಟ್‌

ಈ ಬಗ್ಗೆ ಶನಿವಾರ ರಾತ್ರಿ ಗಲಾಟೆ ವೇಳೆ ಪ್ರಿಯಕರನಿಗೆ ಕರೆ ಮಾಡಿ ಗಂಡ ಬೈಯುವುದನ್ನ ಪತ್ನಿ ಕೇಳಿಸಿದ್ದಳು. ಈ ವೇಳೆ ಮನೆಗೆ ಹಿಂಬಾಗಿಲಿನ ಮೂಲಕ ಬಂದು ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ತಂದು ಕೊಲೆ ಮಾಡಿದ್ದಾರೆ. ತನಿಖೆ ವೇಳೆ ಜಯ ಪ್ರಿಯಕರನ್ನನು ತಮ್ಮ ಎಂದು ಹೇಳಿಕೆ ಕೊಟ್ಟಿದ್ದಾಳೆ.ಪ್ರಿಯಕರನನ್ನ ಕೇಳಿದಾಗ ನಮ್ಮ ಅಕ್ಕ ಎಂದು ಪೊಲೀಸರ ತಲೆಕಡೆಸಿದ್ದ ಆರೋಪಿಗಳ. ಇಬ್ಬರನನ್ನು ವಶಕ್ಕೆ ಪಡೆದು ಮೊಬೈಲ್ CDR ಪರಿಶೀಲನೆ ವೇಳೆ ಹೆಚ್ಚು ಕರೆ ಪ್ರಿಯತಮನಿಗೆ ಮಾಡಿರುವುದು ಪತ್ತೆಯಾಗಿದೆ. ಸದ್ಯ ಮೊಬೈಲ್ ಕರೆ ಆಧಾರದ ಮೇಲೆ ಸೋಲದೇವನಹಳ್ಳಿ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios