ನಿನ್ನನ್ನೇ ಮದುವೆ ಆಗುತ್ತೇನೆಂದು ನಂಬಿಸಿ ಪ್ರಿಯತಮೆ ಮಹಿಳೆ ಮನೆಯಲ್ಲಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿ  

ಬೆಂಗಳೂರು(ನ.30): ಮದುವೆ ಆಗ್ತೇನೆ ಅಂತ ನಂಬಿಸಿ ಬಂದು ವಿಧವೆ ಬಾಳಲ್ಲಿ ವಿವಾಹಿತನೊಬ್ಬ ಚೆಲ್ಲಾಟವಾಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಪ್ರದೀಪ್ ಎಂಬಾತನೇ ವಿಧವೆಗೆ ಮೋಸ ಮಾಡಿದ ಆರೋಪಿಯಾಗಿದ್ದಾನೆ. 

ಮೋಸ ಹೋದ ಮಹಿಳೆಯ ಪತಿ ತೀರಿಹೋಗಿದ್ದು ಹೆಣ್ಣು ಮಗು ಜೊತೆಗೆ ವಾಸವಿವಾಗಿದ್ದಾಳೆ. ಆಗ ಮಹಿಳೆಗೆ ವಿವಾಹಿತ ಪ್ರದೀಪ್ ಪರಿಚವಾಗಿ ಮನೆ ಸೇರಿಕೊಂಡಿದ್ದನಂತೆ. ನನಗೆ ಮದುವೆ ಆಗಿಲ್ಲ, ನಿನ್ನೇ ಪ್ರೀತಿಸುವೆ ಎಂದು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ. ನಿನ್ನನ್ನೇ ಮದುವೆ ಆಗುತ್ತೇನೆಂದು ನಂಬಿಸಿ ಪ್ರಿಯತಮೆ ಮಹಿಳೆ ಮನೆಯಲ್ಲಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ 

ನೊಂದ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಆರೋಪಿ ಪ್ರದೀಪ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆಯನ್ನ ನಡೆಸುತ್ತಿದ್ದಾರೆ.